ಅಗತ್ತಾಡಿ ನೇತ್ರಾವತಿ ಪೆರ್ಮುಂಡ ಗರಡಿ ಕ್ಷೇತ್ರದಲ್ಲಿ ನಾಗಬ್ರಹ್ಮರಿಗೆ ವಿಶೇಷ ಪೂಜೆ

Puttur_Advt_NewsUnder_1
Puttur_Advt_NewsUnder_1

ಪೆರಾಬೆ: ಅಗತ್ತಾಡಿ ನೇತ್ರಾವತಿ ಪೆರ್ಮುಂಡ ಗರಡಿ ಕ್ಷೇತ್ರದಲ್ಲಿ ಬ್ರಹ್ಮ ಬೈದರ್ಕಳ ಕಿರುವಾಳು ತೆಗೆದು ರಾತ್ರಿ ನರಸಿಂಹ ಉಪಾಧ್ಯಾಯ ಕುಪ್ಲಾಜೆ ರವರ ನೇತೃತ್ವದಲ್ಲಿ ನಾಗಬ್ರಹ್ಮರಿಗೆ ವಿಶೇಷ ಮಹಾಪೂಜೆ ನಡೆಯಿತು. ಶ್ರೀ ಕ್ಷೇತ್ರದಲ್ಲಿ ಕುಂತೂರು ಶ್ರೀ ಶಾರದಾ ಭಜನಾ ಮಂಡಳಿ ಸದಸ್ಯರಿಂದ ಭಜನೆ, ಪ್ರಸಾದ ವಿತರಣೆ, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬ್ರಹ್ಮಬೈದರ್ಕಳ ಗರಡಿ ಇಳಿದು ಮತ್ತು ನರ್ತನ ಸೇವೆ ಬಳಿಕ ಮಾಣಿ ಬಾಲೆ ಗರಡಿ ಇಳಿದು ನರ್ತನ ಸೇವೆ ಗಂಧಪ್ರಸಾದ ವಿತರಣೆ ಬಳಿಕ ಪೂಜಾರಿಗಳ ದರ್ಶನೋತ್ಸವ ಕಾರ್ಯಕ್ರಮ ನಡೆಯಿತು. ಜ.೨೪ ರಂದು ಶ್ರೀ ಬ್ರಹ್ಮಬೈದರ್ಕಳ ಹರಿಕೆ ಒಪ್ಪಿಸಿ ಕುರಿ ತಂಬಿಲ, ಗ್ರಹೇಶ್ವರಿ ಕಲ್ಲುರ್ಟಿ ದೈವದ ಅಗೇಲು ಸೇವೆ ನಡೆಯಿತು. ಮನವಳಿಕೆ ಗುತ್ತು ಬ್ರಹ್ಮಬೈದರ್ಕಳ ಗರಡಿ ಮೊಕ್ತೇಸರ ದಯಾನಂದ ರೈ, ಗೋಪಾಲಕೃಷ್ಣ ರೈ, ರಾಧಾಕೃಷ್ಣ ರೈ, ವಿಜಯ ಕುಮಾರ್ ರೈ, ಕೆಲೆಂಬಿರಿ ಗರಡಿ ಮೊಕ್ತೇಸರ ಬಾಬು ಪೂಜಾರಿ, ಕಂಕನಾಡಿ ಗರಡಿ ಅಧ್ಯಕ್ಷ ಚಿತ್ತರಂಜನ್, ಕಿನ್ನಿ ಮುಲ್ಕಿ ಗರಡಿಯಿಂದ ಭಾಸ್ಕರ ಪೂಜಾರಿ, ಮರ್ಣೆ ಬೋಳೂರು ಗರಡಿ ಮೊಕ್ತೇ ಸರರಾದ ಮಹೇಶ್ ಪೂಜಾರಿ, ದೀಪಕ್ ಪೂಜಾರಿ, ಗೆಜ್ಜೆಗಿರಿ ನಂದನ ಬಿತ್ತಿಲು ಶ್ರೀಧರ ಪೂಜಾರಿ, ಸುಧಾಕರ್ ಸುವರ್ಣ, ತಿಂಗಳಾಡಿ ಕಿನ್ನಿಮಜಲು ಗಿರಿಯಪ್ಪ ಪೂಜಾರಿ, ಶಿಶಿಲ ವಾಟ್ಲಗರಡಿ ಅಶೋಕ ಬಂಗೇರ, ಪಾಪೆಮಜಲು ಮುಕುಂದ ಪೂಜಾರಿ, ಚಂದ್ರಕಾಂತ ಶಾಂತಿವನ, ಪಕ್ಕಿಬೆಟ್ಟು ಪಾಂಡು ಕೋಟ್ಯಾನ್ ಕೊಕ್ಕಡ, ಕಲ್ಕುಡ ಕಲ್ಲುರ್ಟಿ ಆಡಳಿತ ಮೊಕ್ತೇಸರ ಉಗ್ಗಪ್ಪ ಕರ್ಕೇರ, ಅಗತ್ತಾಡಿ ಗರಡಿ ಅಧ್ಯಕ್ಷ ಬಿ.ಎಸ್. ರಮೇಶ್ ಅಗತ್ತಾಡಿ, ದೋಳ ಬಾರಿಕೆ ಯಜಮಾನ ಎ. ಸಂಕಪ್ಪ ಪೂಜಾರಿ, ಪದಾಧಿಕಾರಿಗಳು ಕೋಟಿ-ಚೆನ್ನಯ ಯುವವೇದಿಕೆ ಅಗತ್ತಾಡಿ, ಅಗತ್ತಾಡಿ ಕುಟುಂಬಸ್ಥರು, ಊರ-ಪರವೂರ ಭಕ್ತಾದಿ ಗಳು ಉಪಸ್ಥಿತರಿದ್ದರು.

5

4

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.