ಬಲಾತ್ಕಾರದ ಬಂದ್ ವಿರುದ್ಧದ ಸುದ್ದಿ ವೇದಿಕೆಯ ಆಂದೋಲನಕ್ಕೆ ಜೆಡಿಎಸ್ ಬೆಂಬಲ-ಇಬ್ರಾಹಿಂ ಗೋಳಿಕಟ್ಟೆ

Puttur_Advt_NewsUnder_1
Puttur_Advt_NewsUnder_1

7ಪುತ್ತೂರು: ಬಲಾತ್ಕಾರದ ಬಂದ್ ಮತ್ತು ಕೋಮು ಅಥವಾ ಇನ್ನಿತರ ಗಲಭೆ ವಿರುದ್ಧದ ಸುದ್ದಿ ವೇದಿಕೆಯ ಆಂದೋಲನಕ್ಕೆ ಪುತ್ತೂರು ತಾಲೂಕು ಜ್ಯಾತ್ಯಾತೀತ ಜನತಾ ದಳ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪಕ್ಷದ ಪುತ್ತೂರು ತಾಲೂಕು ಅಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ತಿಳಿಸಿದ್ದಾರೆ. ಬಲಾತ್ಕಾರದ ಬಂದ್ ಯಾವುದೇ ಕಾರಣಕ್ಕೂ ಬೇಡ. ಸ್ವಯಂ ಪ್ರೇರಿತ ಬಂದ್‌ಗೆ ಅಭ್ಯಂತರವಿಲ್ಲ. ಎಲ್ಲದಕ್ಕಿಂತ ಮುಂಚೆ ಎಲ್ಲಾ ಮಾಧ್ಯಮ ಮತ್ತು ಮೀಡಿಯಾ ಒಟ್ಟುಗೂಡಿ ಸುದ್ದಿ ವೇದಿಕೆಯಂತೆ ಆಂದೋಲನಕ್ಕೆ ಮುಂದಾಗಿ ಬಂದ್ ಮುಕ್ತ ಜಿಲ್ಲೆ ನಮ್ಮದಾಗಬೇಕು. ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳು ಯಾವುದೇ ಕಾರಣಕ್ಕೂ ಬಂದ್‌ಗೆ ಸಹಕಾರ ನೀಡಬಾರದು. ಅಲ್ಲದೆ ಕಾಲೇಜು ವಿದ್ಯಾರ್ಥಿಗಳು ಈ ಆಂದೋಲನಕ್ಕೆ ಕೈ ಜೋಡಿಸಬೇಕು ಮತ್ತು ರಿಕ್ಷಾ ಚಾಲಕರು ಮತ್ತು ಕೂಲಿ ಕಾರ್ಮಿಕರು ಕೂಡಾ ಬೆಂಬಲ ಕೊಡುವ ಅಗತ್ಯವಿದೆ. ಬಂದ್‌ಗೆ ಯಾರೇ ಕರೆ ಕೊಟ್ಟರೂ ಆ ಸುದ್ದಿಯನ್ನು ಪತ್ರಿಕೆಯಲ್ಲಿ ಭಿತ್ತರಿಸಕೂಡದು. ಸುದ್ದಿ ಬಿಡುಗಡೆಯ ಈ ಪ್ರಯತ್ನದ ಆಂದೋಲನಕ್ಕೆ ಜಯವಾಗಲಿ. ಉಳಿದ ಮಾಧ್ಯಮಗಳು ಕೂಡ ಇಂತಹ ಪ್ರಯತ್ನಕ್ಕೆ ಮುಂದಾದರೆ ದ.ಕ. ಜಿಲ್ಲೆ ಬಂದ್ ಮುಕ್ತ ಜಿಲ್ಲೆ ಆಗುವುದಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.