ಮಹಾಬಲ-ಲಲಿತ ಕಲಾ ಸಭಾ ಉದ್ಘಾಟನೆ-ಲಾಂಛನ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

9ಪುತ್ತೂರು: ದರ್ಬೆಯ ದಂತವೈದ್ಯ ಡಾ. ಶ್ರೀಪ್ರಕಾಶ್ ಬಿ.ರವರ ಮಾತಾಪಿತರಾದ ಬಿ.ಮಹಾಬಲ ಭಟ್ ಮತ್ತು ಲಲಿತಾಂಬಿಕ ಬಿ.ರವರ ಹೆಸರಿನಲ್ಲಿ ಅವರ ನೆನಪಿಗೋಸ್ಕರ `ಮಹಾಬಲ-ಲಲಿತ ಕಲಾ ಸಭಾ, ಪುತ್ತೂರು’ ಇದರ ಉದ್ಘಾಟನಾ ಸಮಾರಂಭವು ಜ.24ರಂದು ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಟರಾಜ ವೇದಿಕೆಯಲ್ಲಿ ನಡೆಯಿತು.
ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶ್ರೇಷ್ಟ ಬಿರುದು ಗಳಿಸಿದ ಸಂಗೀತಕಲಾನಿಧಿ, ಕೆನಡಾದಲ್ಲಿರುವ ಪ್ರೊ. ತೃಚ್ಚಿ ಶಂಕರನ್ ಮತ್ತು ಅವರ ಪತ್ನಿ ವಿದುಷಿ ಲಲಿತಾ ಶಂಕರನ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ , ಮಾತನಾಡಿದ ಪ್ರೊ. ತೃಚ್ಚಿ ಶಂಕರನ್‌ರವರು ಡಾ|ಶ್ರೀಪ್ರಕಾಶ್‌ರವರ ತಂದೆ ಮಹಾಬಲರವರ ಇಡೀ ಕುಟುಂಬವೇ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಸ್ವೀಕರಿಸಿದ್ದು `ಮಹಾಬಲ’ವೆಂಬ ತನ್ನ ಹೆಸರಿನಂತೆ ಮುಂದಿನ ದಿನಗಳಲ್ಲಿ ದೊಡ್ಡದಾದ ಬಲವನ್ನೇ ಪಡೆಯಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿ ಮಂಗಳೂರಿನ ಸಂಗೀತ ಪರಿಷತ್‌ನ ಅಧ್ಯಕ್ಷರಾದ ಎಂ.ಆರ್.ವಾಸುದೇವರವರು ಮಾತನಾಡಿ, ಸಂಘಟನೆ ಹುಟ್ಟುಹಾಕುವುದು ಬಹಳ ಸುಲಭ. ಆದರೆ ಸಂಘಟನೆಯನ್ನು ಮುನ್ನೆಡಸಲು ಆರ್ಥಿಕತೆಯನ್ನು ಕ್ರೋಡೀಕರಿಸುವುದು ಬಹಳ ಕಷ್ಟಕರ ಎಂದ ಅವರು ಕಲೆ ಮಾನವತೆಯಿಂದ ದೈವತ್ವದೆಡೆಗೆ ಕೊಂಡೊಯ್ಯುತ್ತದೆ ಎಂಬಂತೆ ಎಲ್ಲರೂ ಒಂದೇ ಮನಸ್ಸಿನಲ್ಲಿ ಕೆಲಸವನ್ನು ಮಾಡಿದಾಗ ಸಂಘಟನೆಯು ಯಶಸ್ವಯಾಗುವುದು ಎಂದರು.
ಲಾಂಛನ ಬಿಡುಗಡೆ:
ಕಲಾವಿದ ದಿನೇಶ್ ಹೊಳ್ಳ ಮಂಗಳೂರು ಇವರು ರಚಿಸಿದ ತಂಬೂರಿ, ವೀಣೆ, ಯೋಗದಲ್ಲಿನ ಧ್ಯಾನರೂಢ ವ್ಯಕ್ತಿ, ವಾದ್ಯಗಳು, ಪಾದ-ಗೆಜ್ಜೆ, ಯಕ್ಷಗಾನದ ಕಿರೀಟ, ಅಶ್ವತ್ಥ ಎಲೆಯ ಸಂಕೇತವನ್ನೊಳಗೊಂಡಿರುವ ಲಾಂಛನದ ಉದ್ಘಾಟನೆಯನ್ನು ಡೆಲ್ಲಿ ಆಕಾಶವಾಣಿಯ ಮುಖ್ಯ ವಯಲಿನ್ ವಾದಕರಾದ ವಿದ್ವಾನ್ ಡೆಲ್ಲಿ ಪಿ. ಸುಂದರ್‌ರಾಜನ್‌ರವರು ನೆರವೇರಿಸಿದರು.
ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಬಳಿಕ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಹಾಡುಗಾರಿಕೆಯನ್ನು ಚೆನ್ನೈನ ವಿದ್ವಾನ್ ರಾಮಕೃಷ್ಣಮೂರ್ತಿರವರು ನೆರವೇರಿಸಿದರೆ ವಯಲಿನ್‌ನಲ್ಲಿ ಚೆನ್ನೈನ ಡೆಲ್ಲಿ ಪಿ. ಸುಂದರ್‌ರಾಜನ್, ಮೃದಂಗದಲ್ಲಿ ಕೆನಡಾದ ಸಂಗೀತಕಲಾನಿಧಿ ಪ್ರೋ. ತೃಚ್ಚಿ ಶಂಕರನ್, ಖಂಜಿರದಲ್ಲಿ ಚೆನ್ನೈನ ವಿದ್ವಾನ್ ಕೆ.ವಿ. ಗೋಪಾಲ್ ಕೃಷ್ಣನ್ ಹಾಗೂ ಶ್ರುತಿಯಲ್ಲಿ ಕು.ಶ್ರೇಯಾ ಕೊಳತ್ತಾಯರವರು ಸಹಕರಿಸಿದರು.
ವೇದಿಕೆಯಲ್ಲಿ ಮಹಾಬಲ-ಲಲಿತ ಕಲಾ ಸಭಾದ ಅಧ್ಯಕ್ಷ ಬಿ.ಮಹಾಬಲ ಭಟ್ ಮತ್ತು ಅವರ ಪತ್ನಿ ಲಲಿತಾಂಬಿಕ ಉಪಸ್ಥಿತರಿದ್ದರು. ಸಾಧನಾ ಸಂಗೀತ ವಿದ್ಯಾಲಯದ ವಿದುಷಿ ಸುಚಿತ್ರಾ ಹೊಳ್ಳರವರ ಶಿಷ್ಯೆ ಮಯೂರಿ ಪ್ರಾರ್ಥಿಸಿದರು. ಮಹಾಬಲ-ಲಲಿತ ಕಲಾ ಸಭಾದ ಆರ್ಥಿಕ ಸಲಹೆಗಾರ ಅರವಿಂದಕೃಷ್ಣ, ಕಾನೂನು ಸಲಹೆಗಾರ ಶ್ರೀಗಿರೀಶ್ ಮಳಿ, ಸದಸ್ಯ ನಿಕ್ಷಿತ್ ಟಿ.ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸುಬ್ರಹ್ಮಣ್ಯ ಭಟ್, ರಾಮ ಭಟ್, ಖಜಾಂಚಿ ಅರ್ಚನಾ ಪ್ರಕಾಶ್, ಜನಾದನ್ ಭಟ್‌ರವರು ಅತಿಥಿಗಳಿಗೆ ಶಾಲು ಹೊದಿಸಿ ಗೌರವಿಸಸಿದರು. ಕಾರ್ಯದರ್ಶಿ ಡಾ.ಶ್ರೀಪ್ರಕಾಶ್‌ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಮಾತಾಪಿತರ ನೆನಪಿನಲ್ಲಿ ಮತ್ತು ಕಲೆಯಲ್ಲಿನ ಆಸಕ್ತಿಯಿಂದ ಕಲೆಯನ್ನು ಉಳಿಸಿ-ಬೆಳೆಸುವ ಉದ್ಧೇಶದಿಂದ ಮಹಾಬಲ-ಲಲಿತ ಕಲಾ ಸಭಾವನ್ನು ಆರಂಭಿಸಿದ್ದೇವೆ. ಕರ್ನಾಟಕ ಮತ್ತು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನ, ಯೋಗ ಮುಂತಾದ ಕಾರ್ಯಕ್ರಮ, ಶಿಬಿರ, ಕಾರ್ಯಾಗಾರ, ತರಬೇತಿ ಮತ್ತು ಸಂಯೋಜನೆಗಳನ್ನು ಮಾಡುವ ಇರಾದೆಯೊಂದಿಗೆ ವರ್ಷದಲ್ಲಿ ಎರಡರಿಂದ ನಾಲ್ಕು ಕಾರ್ಯಕ್ರಮಗಳನ್ನು ಬೇರೆ ಬೇರೆ ವಿಭಾಗದಡಿಯಲ್ಲಿ ಮಾಡಲಿದ್ದೇವೆ. ಆದಾಯ ತೆರಿಗೆ ವಿನಾಯಿತಿಗಾಗಿ ಈಗಾಗಲೇ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದು ಸಂಗೀತ ಕಲಾ ಪೋಷಕರು, ದಾನಿಗಳು ದೇಣಿಗೆ ನೀಡ ಬಯಸುವವರು ಭಾರತೀಯ ಸ್ಟೇಟ್ ಬ್ಯಾಂಕ್ ಚಾಲ್ತಿ ಖಾತೆ ನಂ: 35292078008 ಇದಕ್ಕೆ ಜಮಾ ಮಾಡಬಹುದು.

ಡಾ.ಶ್ರೀಪ್ರಕಾಶ್, ಕಾರ್ಯದರ್ಶಿ, ಮಹಾಬಲ-ಲಲಿತ ಕಲಾ ಸಭಾ

10

11

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.