ಸುದ್ದಿ ವೇದಿಕೆಯ ಆಂದೋಲನಕ್ಕೆ ಗಾಳಿಮುಖ ಖಲೀಲ್ ಸಲಾಹ್ ಶಾಲೆಯಿಂದ ಬೆಂಬಲ

Puttur_Advt_NewsUnder_1
Puttur_Advt_NewsUnder_1

andolanaಗಲಭೆ ವಿರುದ್ಧದ ಸುದ್ದಿ ವೇದಿಕೆಯ ಅಭಿಯಾನಕ್ಕೆ ಗಾಳಿಮುಖ ಖಲೀಲ್ ಸಲಾಹ್ ವಿದ್ಯಾಸಂಸ್ಥೆ ಬೆಂಬಲ ವ್ಯಕ್ತಪಡಿಸಿದೆ. ಜ.22ರಂದು ಸಂಸ್ಥೆಯ ರಕ್ಷಕ-ಶಿಕ್ಷಕ ಸಂಘದ ಸಭೆಯು ಅಧ್ಯಕ್ಷ ಅಶ್ರಫ್ ಕೊಟ್ಯಾಡಿರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅಶ್ರಫ್ ಕೊಟ್ಯಾಡಿರವರು ಆಗಿಂದಾಗ್ಗೆ ನಡೆಯುವ ಬಲಾತ್ಕಾರದ ಬಂದ್‌ನಿಂದಾಗಿ ಕಷ್ಟ-ನಷ್ಟ ಹೆಚ್ಚು ಅನುಭವಿಸುವುದು ವಿದ್ಯಾಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು. ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ದೃಷ್ಟಿಯಿಂದ ಸುದ್ದಿ ವೇದಿಕೆಯ ಈ ಅಭಿಯಾನ ಅನಿವಾರ್ಯ. ಈ ಆಂದೋಲನಕ್ಕೆ ತಾಲೂಕಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ನಾವೂ ಇದಕ್ಕೆ ಕೈಜೋಡಿಸಬೇಕು ಎಂದರು. ಸಂಸ್ಥೆಯ ಸಂಚಾಲಕ ಸಯ್ಯದ್ ಹಸನ್ ಅಬ್ದುಲ್ಲ ಕೋಯ ತಂಙಳ್, ಪ್ರಾಂಶುಪಾಲ ಡಾಲಿ ಪಯಸ್, ಸದಸ್ಯರುಗಳಾದ ಹಸನ್ ಆದೂರು, ಹಸೈನಾರ್ ಈಶ್ವರಮಂಗಲ, ನಯನ ಕುಮಾರಿ, ಸಲ್ಮಾ, ಪಸೀಲಾ, ಶ್ರೀಧರನ್, ಸಿದ್ದೀಕ್, ಜಗದೀಶ್ ಉಪಸ್ಥಿತರಿದ್ದು, ಸಲಹೆ-ಸೂಚನೆ ನೀಡಿದರು. ನಸೀಮ ಟೀಚರ್ ಸ್ವಾಗತಿಸಿ, ವಂದಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.