3 ಸಂಚಾರಿ ತಂಡ ರಚನೆ: ಡಿಸಿ

Puttur_Advt_NewsUnder_1
Puttur_Advt_NewsUnder_1

ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘಿಸುವ ಘಟನೆಗಳ ಮೇಲೆ ನಿಗಾ ಇರಿಸಲು ಮೂರು ಸಂಚಾರಿ ತಂಡ ರಚಿಸಲಾಗಿದೆ. ಈ ತಂಡದಲ್ಲಿ ನಾಗರಿಕ ಮತ್ತು ಪೊಲೀಸ್ ಸಿಬ್ಬಂದಿ ಇರುತ್ತಾರೆ ಎಂದು ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ತಿಳಿಸಿದ್ದಾರೆ. ತಹಶೀಲ್ದಾರರು ಪ್ರತಿಯೊಂದು ಮತಗಟ್ಟೆ ಮತ್ತು ಮತ ಎಣಿಕೆ ಮತದಾನ ಕೇಂದ್ರಗಳ ಸೂಕ್ಷ್ಮ ಪರಿಶೀಲನೆ ನಡೆಸಲಿದ್ದಾರೆ. ಪ್ರತಿಯೊಂದು ಮತಗಟ್ಟೆಯಲ್ಲಿ ಐವರು ಅಧಿಕಾರಿಗಳಿರುತ್ತಾರೆ. ಜನವರಿ ೩೦ರೊಳಗೆ ಎಲ್ಲ ಸೂಕ್ಷ್ಮ ಮತ್ತು ಅತಿ-ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಬೇಕೆಂದು ಪೊಲೀಸ್ ಇಲಾಖೆಗೆ ಡಿಸಿ ಸೂಚಿಸಿದ್ದಾರೆ. ಖಾಸಗಿ ಕಾರ್ಯಕ್ರಮಗಳಿಗೆ ಪರವಾನಿಗೆ ಪಡೆಯಬೇಕಾಗಿಲ್ಲ. ಆದರೆ ರಾಜಕೀಯ ಪಕ್ಷಗಳ ಮುಖಂಡರು ಮತ್ತು ರಾಜಕೀಯ ಪಕ್ಷಗಳಿಗೆ ಹತ್ತಿರ ಸಂಬಂಧವಿಟ್ಟುಕೊಂಡಿರುವ ಸಂಘಟನೆಗಳ ಕಾರ್ಯಕ್ರಮ ಆಯೋಜನೆಗೆ ಅವಶ್ಯ ಅನುಮತಿ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.