ತಾಲೂಕಿನಾದ್ಯಂತ 67 ನೇ ಗಣರಾಜ್ಯೋತ್ಸವ ಆಚರಣೆ

Puttur_Advt_NewsUnder_1
Puttur_Advt_NewsUnder_1

ಪತ್ರಕರ್ತರ ಸಂಘದಲ್ಲಿ ಗಣರಾಜ್ಯೋತ್ಸವ

ಪುತ್ತೂರು:ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ದೇಶದ 67ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂಘದ ಉಪಾಧ್ಯಕ್ಷ ಅಬೂಬಕ್ಕರ್‌ರವರು ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಅನೀಶ್ ಮರೀಲ್, ಸದಸ್ಯರಾದ ಸಂಶುದ್ದೀನ್ ಸಂಪ್ಯ, ಉಮಾಶಂಕರ್, ಲೋಕೇಶ್ ಬನ್ನೂರು, ಯತೀಶ್ ಉಪ್ಪಳಿಗೆ, ಮ್ಯಾನೇಜರ್ ಪ್ರವೀಣ್, ವಾರ್ತಾ ಇಲಾಖೆಯ ಸಿಬಂದಿ ವೇಣುಗೋಪಾಲ್ ಬೊಳುವಾರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪುತ್ತೂರು ಪತ್ರಕರ್ತರ ಸಂಘದಲ್ಲಿ ಗಣರಾಜ್ಯೋತ್ಸವ ಆಚರಣೆ
ಪುತ್ತೂರು ಪತ್ರಕರ್ತರ ಸಂಘದಿಂದ ಗಣರಾಜ್ಯೋತ್ಸವ ಆಚರಣೆ

———————————————————————————————————————————————

ಬಿಎಂಎಸ್ ರಿಕ್ಷಾ ಚಾಲಕ ಮ್ಹಾಲಕ ಸಂಘ

ಪುತ್ತೂರು: ಬಿಎಂಎಸ್ ರಿಕ್ಷಾ ಚಾಲಕ ಮ್ಹಾಲಕ ಸಂಘದ ವತಿಯಿಂದ ಸಂಘದ ಆವರಣದಲ್ಲಿ ದೇಶದ ೬೭ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮಾಜಿ ಅಧ್ಯಕ್ಷ ಸುರೇಶ್ ಸುಧಾಕರ್ ಧ್ವಜಾರೋಹಣ ನೆರವೇರಿಸಿದರು. ಗೌರವಾಧ್ಯಕ್ಷ ಡಾ. ಎಂ.ಕೆ ಪ್ರಸಾದ್, ಅಧ್ಯಕ್ಷ ರಂಜನ್, ಕಾರ್ಯದರ್ಶಿ ಭಾಸ್ಕರ್, ಕೋಶಾಧಿಕಾರಿ ಭಾಸ್ಕರ್, ಮಾಜಿರಾದ ಅಧ್ಯಕ್ಷ ದೇವಪ್ಪ ಗೌಡ ಹಾಗೂ ಬಿ ಹುಸೈನ್ ಮತ್ತು ಸಂಘದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಿ.ಎಂ.ಎಸ್ ರಿಕ್ಷಾ ಚಾಲಕ ಮಾಲಕರ ಸಂಘದಿಂದ ಗಣರಾಜ್ಯೋತ್ಸವ ಆಚರಣೆ
ಬಿ.ಎಂ.ಎಸ್ ರಿಕ್ಷಾ ಚಾಲಕ ಮಾಲಕರ ಸಂಘದಿಂದ ಗಣರಾಜ್ಯೋತ್ಸವ ಆಚರಣೆ

———————————————————————————————————————————————

ನಗರಸಭಾ ಕಾರ್ಯಾಲಯ

IMG_20160126_080402 IMG_20160126_080246

———————————————————————————————————————————————

 ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಗಣರಾಜೋತ್ಸವ ದಿನಾಚರಣೆಯು ಜ 26ರಂದು ನಡೆಯಿತು. ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರು ಧ್ವಜರೋಹಣ ನೆರವೇರಿಸಿ ಶುಭಹಾರೈಸಿದರು. ಸಂಸ್ಥೆಯ ಆಡಳಿತಾಧಿಕಾರಿ ವಸಂತ ರೈ ಕಾರ್ಕಳರವರು ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

20160125214707 20160125214721

———————————————————————————————————————————————

ನಿಡ್ಪಳ್ಳಿ ಶಾಲೆಯಲ್ಲಿ ಗಣರಾಜ್ಯೋತ್ಸವ  ಆಚರಣೆ 

50fd629a-a7a2-49e9-a605-27f7e8f2fb49

496bb17f-a9d7-49e2-971d-bc8bdacf6d89

ನಿಡ್ಪಳ್ಳಿ: ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿಯಲ್ಲಿ 67ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಜ.26ರಂದು ನಡೆಯಿತು.
ಪಾನಾಜೆ ಸಹಕಾರಿ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ಪದ್ಮನಾಭ ಕುಲಾಲ್ ದ್ವಜಾರೋಹಣ ನಡೆಸಿದರು. ನಂತರ ನಡೆಸಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಗಂಗಾಧರ ಸಿ ಎಚ್  ವಹಿಸಿದ್ದರು.
ಶ್ರೀ ಶಾಂತದುರ್ಗಾ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ವಸಂತ ಅತಿಥಿಯಾಗಿದ್ದರು.ಕ್ಲಸ್ಟರ್ ಮಟ್ಟದಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಮುಖ್ಯಗುರು ಚರುಂಬ ಪ್ರಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿ ಕಾತ್ಯಾಯಿನಿ ಸ್ವಾಗತಿಸಿ, ಸಹಶಿಕ್ಷಕ ವಿಷ್ಣುಭಟ್ ವಂದಿಸಿದರು. ಗೌರವ ಶಿಕ್ಷಕಿ ಸುಜಾತ ಕಾರ್ಯಕ್ರಮ ನಿರೂಪಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

———————————————————————————————————————————————

ವಿದ್ಯಾರಶ್ಮಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ಸವಣೂರಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ 67ನೆ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂಚಾಲಕರಾದ ಸವಣೂರು ಕೆ. ಸೀತಾರಾಮ ರೈಯವರು ಧ್ವಜಾರೋಹಣೆಗೈದು ಗಣರಾಜ್ಯೋತ್ಸವದ ಸಂದೇಶ ನೀಡಿ ನಾವು ನಮ್ಮ ನಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಬಾಯಿಸಿಕೊಂಡರೆ ಅದುವೆ ದೇಶಕ್ಕೆ ಅತ್ಯಂತ ದೊಡ್ಡ ಕೊಡುಗೆ ಎಂದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ವೆಂಕಟ್ರಮಣ ಎನ್. ಅವರು ಸಂವಿಧಾನದ ಕುರಿತಾದ ಉಪನ್ಯಾಸ ನೀಡಿದರು. ಆಡಳಿತ ಮಂಡಳಿ ಸದಸ್ಯ ಅಶ್ಮಿನ್ ಎಲ್. ಶೆಟ್ಟಿ, ಪ್ರಾಂಶುಪಾಲರುಗಳಾದ ಸೀತಾರಾಮ ಕೇವಳ, ಶೇಷಗಿರಿ ಹಾಗೂರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಹಂಚಲಾಯಿತು.

DSC_0078

———————————————————————————————————————————————

ಸರ್ವೋದಯ ಪ್ರೌಢ ಶಾಲೆ ಪೆರಿಯಡ್ಕ

ಪುತ್ತೂರು : ಪೆರಿಯಡ್ಕ ಸರ್ವೋದಯ ಪ್ರೌಢ ಶಾಲೆಯಲ್ಲಿ  67 ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಶಾಲಾ ಆಡಳಿತ ಮಂಡಳಿಯ ಸದಸ್ಯ ಶಿವಣ್ಣ ಗೌಡ ಬಿದಿರಾಡಿ ನೆರವೇರಿಸಿದರು. ಮುಖ್ಯೋಪಾಧ್ಯಾಯರಾದ ರಾಮಣ್ಣ ಗೌಡ ಸ್ವಾಗತಿಸಿ ದ್ಯೆಹಿಕ ಶಿಕ್ಷಕರಾದ ಮೋಹನ್  ವಂದಿಸಿದರು.

P1030985

———————————————————————————————————————————————

ನೆಲ್ಯಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ

ನೆಲ್ಯಾಡಿ: ಇಲ್ಲಿನ ಸಂತ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್ ರಾಷ್ಟ್ರ ದ್ಜಜಾರೋಹಣ ನೆರವೇರಿಸಿ ಪ್ರಜಾಪ್ರಭುತ್ವದ ಮಹತ್ವದ ಕುರಿತು ಸಂದೇಶ ನೀಡಿದರು. ಧ್ವಜಾರೋಹಣದ ಬಳಿಕ ಭಾವೈಕ್ಯತಾ ಹಾಡನ್ನು ಹಾಡಿದರು. ಗಣರಾಜ್ಯೋತ್ಸವದ ಕುರಿತು ವಿದ್ಯಾರ್ಥಿಗಳೇ ರಚಿಸಿದ ಘೋಷಣೆ ಫಲಕಗಳನ್ನು ಸಂಸ್ಥೆಯ ಆವರಣದಲ್ಲಿ ಪ್ರದರ್ಶಿಸಿ ಗಣರಾಜ್ಯೋತ್ಸವದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿನಿಯರು ರಾಷ್ಟ್ರೀಯ ಭಾವೈಕ್ಯತಾ ಗೀತೆಯನ್ನು ಹಾಡಿದರು. ಸಂಸ್ಥೆಯ ಕನ್ನಡ ಮಾಧ್ಯಮದ ಮುಖ್ಯಸ್ಥ ರವೀಂದ್ರ ಟಿ. ಪ್ರಾಂಶುಪಾಲ ಎಂ.ಕೆ ಏಲಿಯಾಸ್, ಆಂಗ್ಲಮಾದ್ಯಮ ವಿಭಾಗದ ಮುಖ್ಯಸ್ಥ ಹರಿಪ್ರಸಾದ್, ನಿವೃತ್ತ ಶ್ರೀ ವಿ.ಆರ್. ಹೆಗಡೆ, ಶಾಲಾ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

IMG-20160126-WA0015

———————————————————————————————————————————————

ಪುತ್ತೂರು ಎಪಿಎಂಸಿಯಲ್ಲಿ ಗಣರಾಜ್ಯೋತ್ಸವ ಆಚರಣೆ

ಪುತ್ತೂರು: ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ವತಿಯಿಂದ ಸಮಿತಿಯ ಆಡಳಿತ ಕಛೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಧ್ವಜಾರೋಹಣ ಗೈದು ಗಣರಾಜ್ಯೋತ್ಸವದ ಸಂದೇಶ ನೀಡಿದರು. ಸಮಿತಿ ಉಪಾಧ್ಯಕ್ಷ ಕರುಣಾಕರ ಗೌಡ ವಿಲಿಯ, ಸಮಿತಿಯ ವರ್ತಕರ ಪ್ರತಿನಿಧಿ ಅಬ್ದುಲ್ ಶಕೂರ್, ಸಮಿತಿಯ ಕಛೇರಿಯ ಸಿಬ್ಬಂದಿ ವರ್ಗದವರು ವರ್ತಕರು, ಮತ್ತಿತರು ಹಾಜರಿದ್ದರು. ಸಮಿತಿಯ ಲೆಕ್ಕಿಗರಾದ ರಾಮಚಂದ್ರ ಸ್ವಾಗತಿಸಿ ವಂದಿಸಿದರು.

apmc

———————————————————————————————————————————————

ಕಡಬದಲ್ಲಿ ಗಣರಾಜ್ಯೋತ್ಸವ ಆಚರಣೆ

ಕಡಬ:  ಕಡಬ ಮಾದರಿ ಹಿ.ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ಇಲಾಖಾಧಿಕಾರಿಗಳ, ಪೊಲೀಸ್ ಅಧಿಕಾರಿಗಳ, ಗೃಹರಕ್ಷಕದಳ, ರೋಟರಿ, ಜೆಸಿಐ, ಲಯನ್ಸ್ ಕ್ಲಬ್, ಕದಂಬ ಆಟೋ ಚಾಲಕ ಮಾಲಕ ಸಂಘ, ಕದಂಬ ಸಾಮಾಜಿಕ ಹಿತರಕ್ಷಣಾ ಸಂಘಟನೆ, ಸಂಗಮ ಜೀಪು ಚಾಲಕ ಮಾಲಕರ ಸಂಘ, ಟ್ಯಾಕ್ಷಿ ಚಾಲಕ ಮಾಲಕರ ಸಂಘ, ಟೆಂಪೋ ಚಾಲಕ ಮಾಲಕರ ಸಂಘ, ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಗಣರಾಜ್ಯೋತ್ಸವ ಆಚರಿಸಲಾಯಿತು. ತಹಶೀಲ್ದಾರ್ ಬಿ.ಲಿಂಗಯ್ಯ ಧ್ವಜಾರೋಹಣ ನೆರವೇರಿಸಿದರು. ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ತ್ರಿಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

kdb3 kdb2 kdb1

———————————————————————————————————————————————

ಅಡೆಕ್ಕಲ್ ಹಯಾತುಲ್ ಇಸ್ಲಾಂ ಮದರಸದಲ್ಲಿ ಗಣರಾಜ್ಯೋತ್ಸವ

ಉಪ್ಪಿನಂಗಡಿ : ಇಲ್ಲಿನ ಸಮೀಪದ ಹಯಾತುಲ್ ಇಸ್ಲಾಂ ಮದರಸ ಅಡೆಕ್ಕಲ್ ನಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.  ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಜನಾಬ್ ಬಿ.ಟಿ.ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಮಸೀದಿಯ ಖತೀಬರಾದ ಹಂಝ ಮುಸ್ಲಿಯಾರ್ ದ್ವಜಾರೋಹಣ ನೆರವೇರಿಸಿದರು.ಸಭಾ ಕಾರ್ಯಕ್ರಮದಲ್ಲಿ ಮದ್ರಸ ಅಧ್ಯಾಪಕರಾದ ಹನೀಫ್ ಹರ್ಷಿದಿ ಅತಿಥಿ ಭಾಷಣಗೈದರು. ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಸ್ವಾಗತಿಸಿ, ಸಂಶುದ್ದೀನ್ ಮುಸ್ಲಿಯಾರ್ ವಂದಿಸಿದರು.

IMG-20160126-WA0016

———————————————————————————————————————————————

ಬಡಗನ್ನೂರು ದ.ಕ.ಜಿ.ಪ.ಉ.ಹಿ.ಪ್ರಾ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಪುತ್ತೂರು : ಬಡಗನ್ನೂರು  ದ.ಕ.ಜಿ ಪ ಉ.ಹಿ.ಪ್ರಾ ಶಾಲೆಯಲ್ಲಿ ಎಸ್.ಡಿ.ಯಂ.ಸಿ ಅಧ್ಯಕ್ಷ ತ್ಯಾಂಪಣ್ಣ ಸಿ ಯಚ್ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ತಾ.ಪಂ ಸದಸ್ಯರಾದ ಮಹಮ್ಮದ್ ಬಡಗನ್ನೂರು. ಎಸ್.ಡಿ.ಯಂ.ಸಿ ಸದಸ್ಯರು ಹಾಗೂ ಅಧ್ಯಾಪಕ ವೃಂದ ಉಪಸ್ಥಿತರಿದ್ದರು.

IMG-20160126-WA0002

———————————————————————————————————————————————

ಕಲ್ಲೇಗ ಜುಮ್ಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಣೆ
ಕಲ್ಲೇಗ ಜುಮ್ಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಣೆ

———————————————————————————————————————————————

ಮುಖ್ಯರಸ್ತೆಯಲ್ಲಿರುವ ಜುಮ್ಮಾ ಮಸೀದಿ ಬಿಲ್ಡಿಂಗ್ ನಲ್ಲಿ ವರ್ತಕರಿಂದ ಗಣರಾಜ್ಯೋತ್ಸವ ಆಚರಣೆ
ಮುಖ್ಯರಸ್ತೆಯಲ್ಲಿರುವ ಜುಮ್ಮಾ ಮಸೀದಿ ಬಿಲ್ಡಿಂಗ್ ನಲ್ಲಿ ವರ್ತಕರಿಂದ ಗಣರಾಜ್ಯೋತ್ಸವ ಆಚರಣೆ

 ———————————————————————————————————————————————

ಮಾಣಿ ಕರ್ನಾಟಕ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ವಿಟ್ಲ: ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾ ಕೇಂದ್ರದಲ್ಲಿ ಹಾಗೂ ಕರ್ನಾಟಕ ಪ್ರೌಢಶಾಲೆ ಮಾಣಿಯಲ್ಲಿ  67ನೇ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಯಿತು.

ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಕೇಂದ್ರದ ಪ್ರಾಂಶುಪಾಲ ಪಿ. ಚಂದ್ರಶೇಖರ್  ಅಧ್ಯಕ್ಷತೆ ವಹಿಸಿ ಮಾತನಾಡಿ ಸಂವಿಧಾನದ ಪ್ರಾಮುಖ್ಯತೆಯನ್ನು ಹಲವಾರು ನಿದರ್ಶನಗಳ ಮೂಲಕ ಮಕ್ಕಳಿಗೆ ತಿಳಿಸಿದರು.

ಅಧ್ಯಾಪಕ ಯಾದವ ಎನ್ ಮಾತನಾಡಿ ನೆಹರೂ, ಗಾಂಧೀಜಿಯವರ ಪೂರ್ಣ ಸ್ವರಾಜ್ಯದ ಪಣ ತೊಟ್ಟಂತೆ, ಇಂದಿನ ಜನಾಂಗ ಭಯೋತ್ಪಾದನೆಯ ವಿರುದ್ಧ ಧಂಗೆ ಎದ್ದು, ಪ್ರಪಂಚದಾದ್ಯಂತ ಹಬ್ಬುತ್ತಿರುವ ಭಯೋತ್ಪಾದನೆಯನ್ನು ತಡೆಗಟ್ಟುವಲ್ಲಿ ಒಮ್ಮತ ಬರಬೇಕು ಎಂದರು.

ವಿದ್ಯಾಕೇಂದ್ರದ ನಿಲಯಪಾಲಕ ಜನಾರ್ದನ ಶೆಟ್ಟಿ ಧ್ವಜಾರೋಹಣ ಮಾಡಿ ವಿದ್ಯಾರ್ಥಿಗಳಿಗೆ ಶುಭಾಶಯದ ಮಾತುಗಳನ್ನಾಡಿದರು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಜ್ವಲ್ ಟಿ. ಕಾರ್ಯಕ್ರಮ ನಿರೂಪಿಸಿದರು. ಶ್ರವಣ್ ಸ್ವಾಗತಿಸಿ, ವೈಭವ್ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು. ಸಿಹಿ ತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

ಕರ್ನಾಟಕ ಪ್ರೌಢಶಾಲೆ ಮಾಣಿಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಸಂಚಾಲಕ ಕೆ.ಅಬ್ದುಲ್ ಖಾದರ್ ಅವರು ಧ್ವಜಾರೋಹಣವನ್ನು ನೆರವೇರಿಸಿದರು.

ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಷಣ ಹಾಗೂ ದೇಶಭಕ್ತಿಗೀತೆ ಹಾಡುವುದರ ಮೂಲಕ ಭಾಗವಹಿಸಿದರು. ಮಂಗಳೂರಿನ ಬೆಸೆಂಟ್ ಪ್ರೌಢಶಾಲೆಯಲ್ಲಿ ನಡೆದಿರುವ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದಿರುವ ವಿದ್ಯಾರ್ಥಿನಿ ಪಿ.ಸಾಕ್ಷಾ ರೈ ಯವರಿಗೆ ಭಾರತ ಸರಕಾರದ ಚುಣಾವಣಾ ಆಯೋಗ ನೀಡಿರುವ ಬಹುಮಾನವನ್ನು ವಿತರಿಸಲಾಯಿತು. .ಸಾಂಸ್ಕೃತಿಕ ಮಂತ್ರಿ ತೌಸೀನ ಕಾರ್ಯಕ್ರಮವನ್ನು ನಿರೂಪಿಸಿ, ಶಿಕ್ಷಕಿ ಶ್ಯಾಮಲಾ.ಕೆ ವಂದಿಸಿದರು.

26vtl2 mani

 ———————————————————————————————————————————————

ಇಡಾಳ ಶಾಲೆಯಲ್ಲಿ 67ನೇ ಗಣರಾಜ್ಯೋತ್ಸವ 

ಪುತ್ತೂರು:ಇಡಾಳ ಕಿರಿಯ ಪರಾಥಮಿಕ ಶಾಲೆಯಲ್ಲಿ 67ನೇ ವರ್ಷದ ಗಣರಾಜ್ಯೋತ್ಸವ ಆಚರಿಸಲಾಯಿತು.. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರುಗಳು ಜನಾರ್ದನ ಗೌಡ.ಕೆ.ಆಲಂಕಾರು, ಎಸ್ ಡಿ ಎಂಸಿ ಅಧ್ಯಕ್ಷ ಭಾಸ್ಕರ ಗೌಡ ಇಡಾಳ, ಇಡಾಳ ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ ಹಾಗೂ ಶಾಲಾ ವಿದ್ಯಾರ್ಥಿಗಳು ಎಸ್ ಡಿ ಎಂ ಸಿ ಸದಸ್ಯರು ಗ್ರಾಮಸ್ಥರು ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳಿಗೆ ವಿವಿಧ ಅಟೋಟ ಸ್ಪರ್ದೆ ನಡೆಸಲಾಯಿತು.  ಬಹುಮಾನ ವಿರತಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶಾಲಾ ಮುಖ್ಯಗುರು ನೆರೆವೇರಿಸಿದರು.

IMG-20160126-WA0008

 ———————————————————————————————————————————————

ಕುಂತೂರು ಹಿ.ಪ್ರಾ ಶಾಲೆಯಲ್ಲಿ ಗಣರಾಜ್ಯೋತ್ಸವ

ಪೆರಾಬೆ: ಕುಂತೂರು ಹಿ.ಪ್ರಾ. ಶಾಲೆಯಲ್ಲಿ 67ನೇ ಗಣರಾಜ್ಯೋತ್ಸವದ ಅಂಗವಾಗಿ ಮಕ್ಕಳ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಶೇಷಪತಿ ರೈ ಗುತ್ತುಪಾಲು ಮಾತನಾಡಿ, ಎಸ್‌ಡಿಎಂಸಿ ಅಧ್ಯಕ್ಷ ನೇಮಿರಾಜ ಶೇಡಿರವರು ಶುಭಹಾರೈಸಿದರು. ಶಾಲಾ ಪ್ರಭಾರ ಮುಖ್ಯಗುರು ರೆಜಿನಮ್ಮ ಜೋಸೆಫ್ ಪ್ರಾಸ್ತಾವಿಕ ಭಾಷಣ ಮಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ನೇಮಿರಾಜರವರು ಧ್ವಜಾರೋಹಣ ನೆರವೇರಿಸಿದರು. ನಿಕಟಪೂರ್ವ ಅಧ್ಯಕ್ಷ ಬಿ.ಕೆ. ಕುಮಾರ ರೂ. ೪ ಸಾವಿರವನ್ನು ದೇಣಿಗೆ ನೀಡಿದ ರಾಜೇಶ್ ಕುದ್ರೊಟ್ಟುರವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ದಿ| ಸಿ.ಎಚ್. ಗಣಪತಿ ಭಟ್ ಕೇವಳ ಮತ್ತು ದಿ| ಕೆ. ನಾರಾಯಣ ಉಪಾಧ್ಯಾಯ ಅರ್ಭಿ ಇವರ ಸ್ಮರಣಾರ್ಥ 2014-15ರಲ್ಲಿ ಕಲಿಕೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಭರತ್‌ರಿಗೆ ಧನಸಹಾಯ ನೀಡಲಾಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು. ವಿಜೇತರ ಪಟ್ಟಿಯನ್ನು ಸಹನಾ, ಅನಿತಾ, ಜಯಲತಾರವರು ಚಂದ್ರಕಲಾ, ಭವಾನಿ, ಅನ್ನಮ್ಮ ಪಿ.ವಿ., ಎಸ್‌ಡಿಎಂಸಿ ಉಪಾಧ್ಯಕ್ಷೆ ಧನಲಕ್ಷ್ಮೀ ಸಹಕರಿಸಿದರು. ಅಲ್ಲದೆ ಅಕ್ಷರ ದಾಸೋಹ ಸಿಬ್ಬಂದಿಗಳಾದ ಬೇಬಿ, ಗುಲಾಬಿ, ವಸಂತಿ, ಮಧ್ಯಾಹ್ನ ಊಟದ ವ್ಯವಸ್ಥೆಯಲ್ಲಿ ಸಹಕರಿಸಿದರು. ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ಶಾಲಾ ವಿದ್ಯಾರ್ಥಿಗಳಾದ ಮಧುರಾಜ್ ಹಾಗೂ ಚರಣ್‌ರಾಜ್ ವಿವರಿಸಿದರು. ಕೊಯಿಲ ಶಾಲಾ ಮುಖ್ಯಗುರು ಕುಶಾಲಪ್ಪ ಗೌಡರವರು ಭಾಗವಹಿಸಿದ್ದರು.

d6eade55-8838-4f30-bce1-ee50560530fb 0289d49a-167d-4e4d-bf5b-0c8659f240ea a78ba4e0-6b52-40a7-ae67-038af69a069b

 ———————————————————————————————————————————————

ಹಾರಾಡಿ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ

ವ್ಯಕ್ತಿ ಗೌರವವು ದೇಶಪ್ರೇಮಕ್ಕೆ ಪ್ರೇರಣೆಯಾಗಬಲ್ಲುದು :ಜಯಲಕ್ಷ್ಮೀ ಸುರೇಶ್

ಪುತ್ತೂರು : ಹಾರಾಡಿ ಸ.ಮಾ.ಉ.ಹಿ.ಪ್ರಾ ಶಾಲೆಯಲ್ಲಿ 67ನೇ ಗಣರಾಜ್ಯೋತ್ಸವ ದಿನಾಚರಣೆಯು ನಡೆಯಿತು.   ಪುತ್ತೂರು ನಗರಸಭಾ ಸದಸ್ಯೆ ಜಯಲಕ್ಷ್ಮೀ ಸುರೇಶ್  ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಗಣರಾಜ್ಯೋತ್ಸವದ ಸಂದೇಶ ನೀಡಿದ ಅವರು “ವ್ಯಷ್ಟಿ ಹಿತಕ್ಕಿಂತ ಸಮಷ್ಟಿ ಹಿತವು ಮುಖ್ಯವಾದುದು. ಮಕ್ಕಳಲ್ಲಿ ಎಳವೆಯಿಂದಲೇ ವ್ಯಕ್ತಿಗಳನ್ನು ಗೌರವಿಸುವ ಸಂಸ್ಕಾರವನ್ನು ಬೆಳೆಸಿದರೆ ಮುಂದೆ ಅವರಲ್ಲಿ ದೇಶಪ್ರೇಮ ಹಾಗೂ ಸಾಮಾಜಿಕ ಹೊಣೆಗಾರಿಕೆ ಸುಭದ್ರವಾಗಿ ತಳವೂರುತ್ತದೆ ” ಎಂದರು.
ಮುಖ್ಯ ಅತಿಥಿಯಾಗಿದ್ದ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಪ್ರತಿಮಾ ಯು.ರೈ ಯವರು “ಗಣರಾಜ್ಯೋತ್ಸವವೆನ್ನುವುದು ಸಂವಿಧಾನ ಪ್ರಣೀತವಾದ ಸುವ್ಯವಸ್ಥಿತ ಗಣತಂತ್ರ ವ್ಯವಸ್ಥೆಯ ಹುಟ್ಟಿನ ದಿನ. ಇದು ಎಲ್ಲಾ ಕ್ಷೇತ್ರಗಳಿಗೂ ಅನ್ವಯವಾಗಬೇಕಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯು ಜಗತ್ತಿನ ಒಂದು ಶ್ರೇಷ್ಠ ಆಡಳಿತ ವ್ಯವಸ್ಥೆಯಾಗಿದೆ” ಎಂದರು. ಶಾಲಾ ಶಿಕ್ಷಕಿ ವಿಜಯಾರವರು ವಿದ್ಯಾರ್ಥಿಗಳಿಗೆ ಗಣರಾಜ್ಯೋತ್ಸವದ ಶುಭ ಸಂದೇಶ ನೀಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹೇಶ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ವೇದಿಕೆಯಲ್ಲಿ ಸಮಿತಿಯ ಸದಸ್ಯರಾದ ರಮೇಶ್ ಬಿ ಹಾಗೂ ಶಶಿಕಾಂತ ಆಚಾರ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸರಕಾರದ ವತಿಯಿಂದ ನೀಡಲಾದ ಎರಡನೇ ಹಂತದ ಉಚಿತ  ಸಮವಸ್ತ್ರವನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಶಸ್ತಿ ಪಡೆದ ಹಾಗೂ ತಾಲ್ಲೂಕು ಸ್ಕೌಟ್ ಗೈಡ್ಸ್ ಸಮ್ಮೇಳನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲಾ ಮುಖ್ಯಶಿಕ್ಷಕ ಮುದರ ಎಸ್. ಸ್ವಾಗತಿಸಿದರು. ಸಹಶಿಕ್ಷಕಿಯರಾದ ಯಶೋದಾ ಹಾಗೂ ಸರೋಜಿನಿ ಇವರುಗಳು ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಯಮುನಾ ವಂದಿಸಿದರು. ಶಿಕ್ಷಕವೃಂದದವರು ಸಹಕರಿಸಿದರು. ಉದ್ಯಮಿ ಸಂಜೀವ ಆಳ್ವ ಇವರ ವತಿಯಿಂದ ವಿದ್ಯಾರ್ಥಿಗಳಿಗೆ ಸಿಹಿಯನ್ನು ವಿತರಿಸಲಾಯಿತು.

IMG_20160126_091936 IMG_20160126_095158

 ———————————————————————————————————————————————

ಆರ್ಯಾಪು ಗ್ರಾ.ಪಂ ನಲ್ಲಿ ಗಣರಾಜ್ಯೋತ್ಸವ ಆಚರಣೆ
ಆರ್ಯಾಪು ಗ್ರಾ.ಪಂ ನಲ್ಲಿ ಗಣರಾಜ್ಯೋತ್ಸವ ಆಚರಣೆ

 ———————————————————————————————————————————————

ಕೊಳ್ತಿಗೆ ಸಿ.ಎ ಬ್ಯಾಂಕ್ ನಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ
ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಪೆರ್ಲಂಪಾಡಿ ಯಲ್ಲಿ ಗಣರಾಜ್ಯೋತ್ಸವ ಆಚರಣೆ. ಅಧ್ಯಕ್ಷ ವಸಂತ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

 ———————————————————————————————————————————————

ಪೆರ್ಲಂಪಾಡಿ : 67ನೇ ಗಣರಾಜ್ಯೋತ್ಸವ ಆಚರಣೆ

ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಮುಖ್ಯಗುರು ಧ್ವಜಾರೋಹಣ ನೆರವೇರಿಸಿದರು. ಬಳಿಕ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಗುರು ಲೋಕಯ್ಯ.ಡಿ ವಹಿಸಿದ್ದರು. ವಿಶ್ವಭಾತೃತ್ವ, ದೇಶರಕ್ಷಣೆ, ವಿದ್ಯಾರ್ಥಿಗಳ ಕರ್ತವ್ಯಗಳ ಬಗ್ಗೆ ವಿವರಿಸಿದರು. ಅಭ್ಯಾಗತರಾಗಿ ಅರುಣಾಲಕ್ಷ್ಮೀ ಉಪಸ್ಥಿತರಿದ್ದು ದಿನದ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳಿಂದ ಭಾಷಣ ಮತ್ತು ಸಮೂಹಗೀತೆಗಳು ಜರುಗಿದವು. ವಿದ್ಯಾರ್ಥಿ ಜಸ್ಮಿತಾ.ಡಿ ಕಾರ್ಯಕ್ರಮವನ್ನು ನಿರೂಪಿಸಿದರು.

 20160126201502

 ———————————————————————————————————————————————

ಕೊಣಾಜೆ ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ

ಕಡಬ: ಕೊಣಾಜೆ ಸ. ಉ. ಹಿ. ಪ್ರಾ ಶಾಲೆಯಲ್ಲಿ  67ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಜ.26ರಂದು ಆಚರಿಸಲಾಯಿತು. ಶಾಲಾ ಹಿರಿಯ ವಿದ್ಯಾರ್ಥಿ ಸಾಫ್ಟ್‌ವೇರ್ ಇಂಜಿನಿಯರ್ ಉದ್ಯೋಗಿಯಾಗಿರುವ  ಹರಿಪ್ರಸಾದ್ ಬ್ರಂತೋಡು  ಧ್ವಜಾರೋಹಣ ನೆರವೇರಿಸಿದರು.

ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ  ಮುತ್ತಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಪ್ಪ ಗೌಡ ಹಾಕೋಟೆಕಾನ, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರಾದ ಗಂಗಾಧರ ಗೌಡ ಬ್ರಂತೋಡು,  ಎಸ್.ಡಿ.ಎಂ.ಸಿ ಸದಸ್ಯರಾಗಿರುವ ಆಶಾಲತಾ , ಶಾಲಾ ವಿದ್ಯಾರ್ಥಿ ನಾಯಕ  ಹರ್ಷಿತ್  ಉಪಸ್ಥಿತರಿದ್ದರು.   ವಿದ್ಯಾರ್ಥಿಗಳು ಗಣರಾಜ್ಯೋತ್ಸವದ ಬಗ್ಗೆ ಭಾಷಣ ಹಾಗೂ ಭಕ್ತಿಗೀತೆಯ ಮೂಲಕ  ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ  ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕೊಡಲ್ಪಟ್ಟ 2 ನೇ ಸಮವಸ್ತ್ರವನ್ನು ಮತ್ತು  ದಾನಿಗಳಿಂದ ಕೊಡಲ್ಪಟ್ಟ ಉಚಿತ ಟೀ ಶರ್ಟ್ ವಿದ್ಯಾರ್ಥಿಗಳಿಗೆ ನೀಡಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಲ್ಪಟ್ಟ ಗುಬ್ಬಚ್ಚಿ ಸ್ಪೀಕಿಂಗ್ ಕಾರ್ಯಕ್ರಮದಲ್ಲಿ ವಿಜಯಶಾಲಿ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು.

ಶಾಲಾ ಮುಖ್ಯ ಗುರುಗಳಾದ ಪರಮೇಶ್ವರ .ಎಚ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಹರ್ಷಿಣಿ ಬಳಗ ಪ್ರಾರ್ಥನೆ ಹಾಡಿದರು.  ಅತಿಥಿ ಶಿಕ್ಷಕಿ ಕು. ಬೇಬಿ ಸ್ವಾಗತಿಸಿ , ಕು. ಸುಜಯ ವಂದಿಸಿದರು. ಶಿಕ್ಷಕ ಅಜಿತ್ ಕುಮಾರ್ ಆಳ್ವ ಕಾರ‍್ಯಕ್ರಮ ನಿರೂಪಿಸಿದರು.

konaje.

 ———————————————————————————————————————————————

ಕುಟ್ರುಪ್ಪಾಡಿ ಗ್ರಾ.ಪಂ.ನಲ್ಲಿ ಗಣರಾಜ್ಯೋತ್ಸವ 

ಕಡಬ: ಕುಟ್ರುಪಾಡಿ ಗ್ರಾಮ ಪಂಚಾಯತ್‌ನಲ್ಲ ಜ. 26 ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಾರೆನ್ಸ್ ವಿಲ್ಫ್ರೆಡ್ ರೊಡ್ರಿಗಸ್ ಧ್ವಜರೋಹಣ ನೆರವೇರಿಸಿದರು.

 ಗ್ರಾಮ ಪಂಚಾಯತ್ ಆಧ್ಯಕ್ಷೆ ಜಾನಕಿ ಸುಂದರ ಗೌಡ, ಸದಸ್ಯರಾದ ಲಿಂಗಪ್ಪ ಗೌಡ , ಮಹಮ್ಮದ್ ಆಲಿ, ಬಿನೋಜ್ ವರ್ಗೀಸ್, ಜಾನಕಿ, ಸೂಸಮ್ಮ ಮತ್ತಾಯಿ, ಹೊಸ್ಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಧ್ಯಕ್ಷರಾದ ಕರುಣಾಕರ ಗೋಗಟೆ, ಗ್ರಾಮಸ್ಥರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

kutrupadi

———————————————————————————————————————————————

ಪಾಣಾಜೆ ಹಿ.ಪ್ರಾ ಶಾಲೆಯಲ್ಲಿ  ಗಣರಾಜ್ಯೋತ್ಸವ 

ಪಾಣಾಜೆ ಹಿ.ಪ್ರಾ ಶಾಲೆಯಲ್ಲಿ ಧ್ವಜಾರೋಹಣವನ್ನು ಮಕ್ಕಳ ಪೋಷಕರಾದ ನಳಿನಿಯವರು ನೆರವೇರಿಸಿದರು. ಸಭಾ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯ ದೇವಪ್ಪ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಎಸ್ ಡಿ ಎಂ ಸಿ ಸದಸ್ಯರು , ಮುಖ್ಯಗುರುಗಳು ಉಪಸ್ಥಿತರಿದ್ದರು 
ಪಾಣಾಜೆ ಹಿ.ಪ್ರಾ ಶಾಲೆಯಲ್ಲಿ ಧ್ವಜಾರೋಹಣವನ್ನು  ನಳಿನಿಯವರು ನೆರವೇರಿಸಿದರು. ಸಭಾ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯ ದೇವಪ್ಪ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಎಸ್ ಡಿ ಎಂ ಸಿ ಸದಸ್ಯರು , ಮುಖ್ಯಗುರುಗಳು ಉಪಸ್ಥಿತರಿದ್ದರು

ಒಡ್ಯ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಗಣರಾಜ್ಯೋತ್ಸವ 

ಪಾಣಜೆ: ಒಡ್ಯ ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ಧ್ವಜಾರೋಹಣವನ್ನು ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ  ಸುಮಿತ್ರಾ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ  ಜನಾರ್ಧನ, ನಿವೃತ್ತ ಮುಖ್ಯ ಗುರುಗಳಾದ  ನಾಮದೇಮ ಶರ್ಮಾ,  ಲತಾ ಎಸ್. ಭಟ್,  ಲೀಲಾವತಿ  ಉಪಸ್ಥಿತರಿದ್ದರು.
ಪಾಣಜೆ: ಒಡ್ಯ ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ಧ್ವಜಾರೋಹಣವನ್ನು ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಸುಮಿತ್ರಾ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಜನಾರ್ಧನ, ನಿವೃತ್ತ ಮುಖ್ಯ ಗುರುಗಳಾದ ನಾಮದೇಮ ಶರ್ಮಾ, ಲತಾ ಎಸ್. ಭಟ್, ಲೀಲಾವತಿ ಉಪಸ್ಥಿತರಿದ್ದರು.

ಚಾರ್ವಾಕ ಶಾಲೆಯಲ್ಲಿ ಗಣರಾಜೋತ್ಸವ

charvaka photo
ಕಾಣಿಯೂರು: ಚಾರ್ವಾಕ ಸ.ಉ. ಹಿ. ಪ್ರಾ. ಶಾಲೆಯಲ್ಲಿ ಗಣರಾಜೋತ್ಸವ ದಿನಾಚರಣೆಯು ಜ ೨೬ರಂದು ನಡೆಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಗೋಪಾಲಕೃಷ್ಣ ಬಾರೆಂಗಳರವರು ಧ್ವಜರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.

ಕಾಣಿಯೂರು ಶಾಲೆಯಲ್ಲಿ ಗಣರಾಜೋತ್ಸವ

kaniyoor 26-1-2106
ಕಾಣಿಯೂರು : ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜೋತ್ಸವ ದಿನಾಚರಣೆಯು ಜ ೨೬ರಂದು ನಡೆಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಧರ್ಮೇಂದ್ರ ಗೌಡ ಕಟ್ಟತ್ತಾರುರವರು ಧ್ವಜಾರೋಹಣಗೈದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಯಶಕಲಾ ಮುಗರಂಜ ಮತ್ತು ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಪುಂಡಲಿಕ ಪೂಜಾರ ಸ್ವಾಗತಿಸಿ, ಸಹಶಿಕ್ಷಕಿ ದೇವಕಿ ವಂದಿಸಿದರು.

ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಗಣರಾಜೋತ್ಸವ

News Photo - Republic Day

ಪುತ್ತೂರು: ಭಾರತೀಯ ಪ್ರಜಾಪ್ರಭುತ್ವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದಲ್ಲದೆ ಬಹು ವಿಸ್ತೃತವಾದ ಅವಕಾಶಗಳನ್ನೂ ಕಲ್ಪಿಸಿಕೊಟ್ಟಿದೆ. ಆದರೆ ಅದರ ಸದ್ವಿನಿಯೋಗವನ್ನು ಮಾಡಿಕೊಳ್ಳುವುದೇ ನಮ್ಮ ಮುಂದಿರುವ ಆದ್ಯತೆ. ಇದನ್ನು ಅರ್ಥ ಮಾಡಿಕೊಂಡಾಗ ದೇಶ ದೃಢಗೊಳ್ಳುತ್ತಾ ಸಾಗುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ.ನಾರಾಯಣ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಚರಿಸಿದ ಪ್ರಜಾಪ್ರಭುತ್ವ ದಿನದ ಸಂದರ್ಭದಲ್ಲಿ ಧ್ವಜಾರೋಹಣಗೈದು ಮಾತನಾಡಿದರು.
ನಮ್ಮ ದೇಶ ಅತ್ಯಂತ ಹೆಚ್ಚು ಯುವ ಸಮೂಹವನ್ನು ಹೊಂದಿರುವುದು ನಮ್ಮ ಹೆಮ್ಮೆಯ ವಿಚಾರ. ಆದರೆ ಯುವಶಕ್ತಿ ಯಶಸ್ಸಿನೆಡೆಗಿನ ದಿಟ್ಟ ಹೆಜ್ಜೆ ಇಟ್ಟಾಗಲಷ್ಟೇ ಆ ಹೆಮ್ಮೆ ಸಾರ್ಥಕ್ಯ ಪಡೆಯುತ್ತದೆ. ಕೆಲವೊಮ್ಮೆ ನಮ್ಮ ಧುರೀಣರು ತಪ್ಪು ಹೆಜ್ಜೆ ಇಡುತ್ತಿರುವುದು ಕಾಣಿಸುತ್ತದೆ. ಈ ಹಿನ್ನಲೆಯಲ್ಲಿ ಸುಸಂಸ್ಕೃತ, ಸುಶಿಕ್ಷಿತ ಯುವಜನತೆ ನೇತೃತ್ವವನ್ನು ವಹಿಸುವ ಹಿನ್ನಲೆಯಲ್ಲಿ ತಯಾರಾಗಬೇಕು ಎಂದು ಕರೆನೀಡಿದರು.
ವಿವೇಕಾನಂದಪದವಿ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜೀವನ್ ದಾಸ್,ಉಪನ್ಯಾಸಕ, ಉಪನ್ಯಾಸಕೇತರ ವೃಂದ, ಕಾಲೇಜಿನ ಎನ್.ಸಿ.ಸಿ ಘಟಕ, ಎನ್.ಎಸ್.ಎಸ್ ಹಾಗೂ ರೋವರ್‍ಸ್ ಅಂಡ್ ರೇಂಜರ್‍ಸ್ ಘಟಕದ ವಿದ್ಯಾರ್ಥಿಗಳು ಮತ್ತು ಇತರೆ ವಿದ್ಯಾರ್ಥಿಗಳು ಹಾಜರಿದ್ದರು.

———————————————————————————————————————————————

ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ಗಣರಾಜ್ಯೋತ್ಸವ ಆಚರಣೆ

20160126095724

20160126095730

20160126095411

ವಾಳ್ಯ ಕಿ.ಪ್ರಾ.ಶಾಲೆಯಲ್ಲಿ ಗಣರಾಜ್ಯೋತ್ಸವ

fffffffffffffffff

 ಕುಟ್ರುಪ್ಪಾಡಿ ಗ್ರಾಮದ ವಾಳ್ಯ ಕಿ.ಪ್ರಾ.ಶಾಲೆಯಲ್ಲಿ ಗಣರಾಜ್ಯೋತ್ಸವದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಡೊಂಬಯ್ಯ ಗೌಡ ಧ್ವಜಾರೋಹಣ ನೆರವೇರಿಸಿ ಶುಭಹಾರೈಸಿದರು.ಗ್ರಾ.ಪಂ.ಸದಸ್ಯೆ ವಿದ್ಯಾಗೋಗಟೆ, ಎಸ್‌ಡಿಎಂಸಿ ಉಪಾಧ್ಯಕ್ಷ ಸೂರಪ್ಪ ಗೌಡ, ಸದಸ್ಯರಾದ ಕುಸುಮಾವತಿ, ರಾಜೇಶ್ವರಿ, ವಾಳ್ಯ ಅಂಗನವಾಡಿ ಕಾರ‍್ಯಕರ್ತೆ ಜಯಮ್ಮ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ ಸ್ವಾಗತಿಸಿ ವಂದಿಸಿದರು. ಗೌರವ ಶಿಕ್ಷಕಿ ಮಾದವಿ ಸಹಕರಿಸಿದರು. ಸಭೆ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು. ಎಲ್ಲರಿಗೂ ಶಾಲಾಭಿವೃದ್ದಿ ಸಮಿತಿ ವತಿಯಿಂದ ಭೋಜನ ವ್ಯವಸ್ಥೆ ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.