ಉಪ್ಪಿನಂಗಡಿ ಪ.ಪೂ ಕಾಲೇಜಿಗೆ ಧ್ವಜಸ್ತಂಭ ಕೊಡುಗೆ – ಉದ್ಘಾಟನೆ, ಗಣರಾಜ್ಯೋತ್ಸವ ಆಚರಣೆ-ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೊರತೆಯಾಗಿ ಕಾಡುತ್ತಿದ್ದ ಧ್ವಜಸ್ಥಂಭವನ್ನು ನಿವೃತ್ತ ಸೇನಾನಿಯೋರ್ವರು ನಿರ್ಮಿಸಿ, ಕಾಲೇಜಿಗೆ ಹಸ್ತಾಂತರಿಸಿದ್ದು, ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸುವ ಮೂಲಕ ಧ್ವಜಸ್ತಂಭವನ್ನು ಉದ್ಘಾಟಿಸಲಾಯಿತು.

ನಿವೃತ್ತ ನಾಯಕ್ ಸುಬೇದಾರ್ ಜಯಕುಮಾರ್ ಪೂಜಾರಿ ಇಳಂತಿಲ ಕಾಲೇಜಿಗೆ ಧ್ವಜಸ್ತಂಭವನ್ನು ನಿರ್ಮಿಸಿಕೊಟ್ಟು, ಗಣರಾಜ್ಯೋತ್ಸವ ದಿನವಾದ ಜ. 26ರಂದು ಅದನ್ನು ಕಾಲೇಜಿಗೆ ಸಮರ್ಪಿಸಿದರು. ಬಳಿಕ ಮಾತನಾಡಿದ ಅವರು ದೇಶ ಭ್ರಷ್ಠಾಚಾರದಿಂದ ನಲುಗುತ್ತಿದೆ, ವಿದ್ಯಾರ್ಥಿಗಳು ಶಕ್ತಿಯಾಗಿ ನಿಂತು ಮುಂದಿನ ದಿನಗಳಲ್ಲಿ ಸದೃಢ ದೇಶ ಕಟ್ಟುವ ಕನಸು ಕಾಣಬೇಕು ಎಂದರು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ದೇಶದಲ್ಲಿ ಕೋಮುವಾದ ಮತ್ತು ಉಗ್ರವಾದ ತಲೆ ಎತ್ತಿ ನಿಂತಿದೆ, ಇದನ್ನು ಮೆಟ್ಟಿ ನಿಲ್ಲುವ ಕೆಲಸ ಆಗಬೇಕಾಗಿದೆ, ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಮುಂದೆ ಬರಬೇಕು ಎಂದರು.

 ಕಾಲೇಜಿನ ಕಾರ‍್ಯಾಧ್ಯಕ್ಷ ರಘುನಾಥ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಲೇಜಿಗೆ ಬಹಳಷ್ಟು ದಾನಿಗಳು ಮುಂದೆ ಇಲ್ಲಿನ ಬಹಳಷ್ಟು ಕೊರತೆಗಳನ್ನು, ಸಮಸ್ಯೆಗಳನ್ನು ನೀಗಿಸಿದ್ದಾರೆ, ದಾನಿಗಳು ಉದ್ದೇಶವನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳುವ ಮೂಲಕ ಉತ್ತಮ ಓದಿನೊಂದಿಗೆ ಕಾಲೇಜಿಗೆ ಕೀರ್ತಿ ತರುವ ನಿಟ್ಟಿನಲ್ಲಿ ಗುರಿ ಹೊಂದಿರಬೇಕು ಎಂದರು.

ಸಮಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯ ಮಂಜುನಾಥ, ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ. ತೌಶೀಫ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಅಜೀಜ್ ಬಸ್ತಿಕ್ಕಾರ್, ಧ್ವಜಸ್ತಂಭದ ಕೆಲಸ ನಿರ್ವಹಿಸಿದ ನೋಣಯ್ಯ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿಗಳಾದ ರಕ್ಷಿತಾ ಸ್ವಾಗತಿಸಿ, ಪುಷ್ಪಾ ವಂದಿಸಿದರು. ಉಪನ್ಯಾಸಕಿಯರಾದ ಪುಷ್ಪಾವತಿ, ರಶ್ಮಿ ವಿವಿಧ ಕಾರ‍್ಯಕ್ರಮ ನಿರ್ವಹಿಸಿದರು. ಸಂತನು ಕಾರ‍್ಯಕ್ರಮ ನಿರೂಪಿಸಿದರು.

UPPI DHVAJA UPPI DHVAJA-2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.