ಪುತ್ತೂರಿನಲ್ಲಿ ಪೇಜಾವರ ಶ್ರೀಗಳಿಗೆ ಪೌರ ಸನ್ಮಾನದ ಯಶಸ್ಸಿಗೆ ಕಾರಣ ಕರ್ತರಾದವರಿಗೆ ಅಭಿನಂದನಾ ಸಭೆ, ಲೆಕ್ಕಪತ್ರ ಮಂಡನೆ

Puttur_Advt_NewsUnder_1
Puttur_Advt_NewsUnder_1

pejavara

ಉಳಿಕೆ ರೂ.55 ಸಾವಿರ ಪೇಜಾವರ ಸ್ವಾಮಿಜಿಯವರಿಗೆ ಹಸ್ತಾಂತರಿಸಲು ನಿರ್ದಾರ

ಪುತ್ತೂರು:ಪೇಜಾವರ ಶ್ರೀ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರಿಗೆ ಜ.9ರಂದು ಪುತ್ತೂರಿನಲ್ಲಿ ನಡೆದ ಪುತ್ತೂರು ಪೌರ ಸನ್ಮಾನ ಸಮಾರಂಭಕ್ಕೆ ಸಂಗ್ರಹವಾದ ಹಣದಲ್ಲಿ ರೂ.55 ಸಾವಿರ ಉಳಿಕೆಯಾಗಿದ್ದು ಆ ಹಣವನ್ನು ಪೇಜಾವರ ಸ್ವಾಮೀಜಿಯವರಿಗೆ ಹಸ್ತಾಂತರಿಸಲಾಗವುದು ಎಂದು ಜ.26ರಂದು ನಡೆದ ಅಭಿನಂದನಾ ಸಭೆ ಹಾಗೂ ಲೆಕ್ಕಪತ್ರ ಮಂಡನೆಯ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯು ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈಯವರ ಅಧ್ಯಕ್ಷತೆಯಲ್ಲಿ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಬಾರ್ಯರವರು ಸಮಾರಂಭಕ್ಕೆ ಸಾರ್ವಜನಿಕರಿಂದ ಸಂಗ್ರಹವಾದ ಹಣ ಹಾಗೂ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ನೀಡಿದರು. ರೂ. ೫೦೧೭೫೭ ಸಾರ್ವಜನಿಕರಿಂದ ಸಂಗ್ರಹವಾಗಿದೆ. ಇದರಲ್ಲಿ ರೂ.೨ಲಕ್ಷ ಸ್ವಾಮಿಜಿಯವರಿಗೆ ಪಾದ ಕಾಣಿಕೆ ನಿಡಲಾಗಿದೆ. ಉಳಿದ ಖರ್ಚುಗಳು ಸೇರಿ ಒಟ್ಟು ರೂ.೫೫ ಸಾವಿರ ಉಳಿಕೆಯಾಗಿದೆ. ಉಳಿಕೆಯಾದ ಹಣವನ್ನು ವಿನಿಯೋಗಿಸುವ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಸಭೆಯ ಮುಂದಿಟ್ಟರು. ಈ ಸಂದರ್ಭದಲ್ಲಿ ಕೆ.ಎಚ್ ದಾಸಪ್ಪ ರೈಯವರು ಮಾತನಾಡಿ, ಸ್ವಾಮೀಜಿಯವರ ಕಾರ್ಯಕ್ರಮಕ್ಕೆ ಸಂಗ್ರಹಿಸಿದ ಹಣವನ್ನು ಬೇರೆ ಕಾರ್ಯಗಳಿಗೆ ವಿನಿಯೋಗಿಸುವುದು ಸರಿಯಲ್ಲ. ಅದನ್ನು ಸ್ವಾಮೀಜಿಯವರಿಗೆ ಹಸ್ತಾಂತರ ಮಾಡುವುದು ಉತ್ತಮ ಎಂದು ಸಲಹೆ ನಿಡಿದರು. ಇದಕ್ಕೆ ಸಭೆಯಲ್ಲಿ ಅನುಮೋದನೆ ದೊರೆತಿದ್ದು, ಅದರಂತೆ ನಿರ್ಣಯ ಕೈಗೊಳ್ಳಲಾಗಿದೆ.

ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈ ಮಾತನಾಡಿ, ಪುತ್ತೂರಿನಲ್ಲಿ ಪೇಜಾವರ ಸ್ವಾಮೀಜಿಯವರಿಗೆ ನಡೆದ ಪೌರ ಸನ್ಮಾನ ಸಮಾರಂಭವು ಬಹಳಷ್ಟು ಅದ್ಧೂರಿಯಾಗಿ ನಡೆದಿದೆ. ಇದರ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ ಈ ಸಮಿತಿಯನ್ನು ಇಲ್ಲಿಗೆ ಬರ್ಕಾಸ್ತು ಮಾಡಲಾಗುವುದು ಎಂದು ಅವರು ಹೇಳಿದರು. ಕೋಶಾಧಿಕಾರಿ ರಂಗನಾಥ ರಾವ್, ಅನಂತರಾಮ ಭಟ್, ಗಣೇಶ್, ಕೃಷ್ಣ ಪ್ರಸಾದ್ ಕೆದಿಲಾಯ, ಎ.ವಿ ನಾರಾಯಣ, ಶ್ರೀಧರ ಬೈಪಾಡಿತ್ತಾಯ, ರಮೇಶ್, ಐತ್ತಪ್ಪ ನಾಯ್ಕ್, ವತ್ಸಲಾ ರಾಜ್ಞಿ, ಹರಿಣಿ ಪುತ್ತೂರಾಯ, ರಾಜಗೋಪಾಲ ಶಗ್ರಿತ್ತಾಯ, ಸತೀಶ್ ಕೆದಿಲಾಯ, ಲೋಕೇಶ್ ಹೆಗ್ಡೆ, ದಿವಾಕರ ಆಚಾರ್ಯ, ಎನ್. ಸುಬ್ರಹ್ಮಣ್ಯಂ ಹಾಗೂ ರವಿಪ್ರಸಾದ್ ಶೆಟ್ಟಿ ಬನ್ನೂರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಭಾಸ್ಕರ ಬಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಬನ್ನೂರು ವಂದಿಸಿದರು. ಪ್ರೇಮಲತಾ ರಾವ್ ಪ್ರಾರ್ಥಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.