ಸುದಾನ ವಸತಿಯುತ ಶಾಲಾ ಬೆಳ್ಳಿಹಬ್ಬ ಸಮಾರಂಭದ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

sudana 1

ಮಕ್ಕಳ ಮೇಲಿನ ಜಾಗತಿಕ ದಾಳಿಗಳ ಸವಾಲು ಎದುರಿಸಲು ಸಿದ್ದರಾಗಬೇಕುಮೋಹನ ಆಳ್ವ

ಪುತ್ತೂರು: ಆಧುನಿಕ ಯುಗದಲ್ಲಿ ಮಕ್ಕಳ ಬುದ್ಧಿ ಶಕ್ತಿ ಅಮೋಘವಾದುದು. ಅವರ ಬುದ್ಧಿ ಶಕ್ತಿಯ ಮೇಲೆ ಮೊಬೈಲ್, ಇಂಟರ್‌ನೆಟ್, ಟಿ.ವಿ ಮೊದಲಾದ ಮಾಧ್ಯಮಗಳ ಮೂಲಕ ಜಾಗತಿಕ ದಾಳಿಗಳು ಭೀಕರ ಪ್ರಭಾವ ಬೀರುತ್ತಿದೆ. ಇವುಗಳಿಂದ ಮಕ್ಕಳನ್ನು ದೂರವಿಡಬೇಕಾದ ಬಹುದೊಡ್ಡ ಸವಾಲುಗಳು ನಮ್ಮ ಮೇಲಿದೆ. ಇಂತಹ ಜಾಗತಿಕ ದಾಳಿಗಳಿಂದ ಮಕ್ಕಳನ್ನು ಎದುರಿಸಲು ನಾವು ಸಿದ್ದರಾಗಬೇಕು ಎಂದು ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ ಆಳ್ವ ಅಭಿಪ್ರಾಯ ವ್ಯಕ್ತಪಡಿಸಿದರು.

ನೆಹರುನಗರ ಸುದಾನ ವಸತಿಯುತ ಶಾಲೆಯಲ್ಲಿ ಜ.26ರಂದು ನಡೆದ ಶಾಲಾ ಬೆಳ್ಳಿ ಹಬ್ಬ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಶಿಕ್ಷಣ ಕ್ಷೇತ್ರದಲ್ಲೂ ಅಮೋಘ ಬದಲಾವಣೆಗಳು ಕಂಡು ಬರುತ್ತಿದೆ. ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಅವರ ಎದುರು ನಮ್ಮ ಬುದ್ದಿ ಶಕ್ತಿ ಏನೂ ಅಲ್ಲ. ಅವರು ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಪಠ್ಯೇತರ ವಿಷಯಗಳಾದ ಕ್ರೀಡೆ, ಸಂಗೀತ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಹಿಂದಿನ ಕಾಲದ ದಾಖಲೆಗಳನ್ನು ಮುರಿದಿದ್ದಾರೆ ಎಂದರು. ಶಿಕ್ಷಣ ಕ್ಷೇತ್ರದಲ್ಲೂ ಕಾಲ ಕಾಲಕ್ಕೆ ಅಮೋಘ ಬದಲಾವಣೆಗಳು ಉಂಟಾಗುತ್ತಿದೆ. ಇದರಿಂದಾಗಿ ಸ್ಪರ್ಧೆಗಳು ಎದುರಾಗುತ್ತಿದ್ದು ಬಲು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಅವುಗಳ  ಬಗ್ಗೆ ಆಡಳಿತ ಮಂಡಳಿ, ಶಿಕ್ಷಕರು ಹಾಗು ಪೋಷಕರು ಸವಾಲುಗಳನ್ನು ಎದುರಿಸಲು ಹೋರಾಡುವ ಮೂಲಕ ಚಲಾವಣೆಯಲ್ಲಿರುವ ನಾಣ್ಯಗಳಾಗಬೇಕು ಎಂದು ಹೇಳಿದರು.

ದಕ್ಷಿಣ ಕನ್ನಡ ಶಿಕ್ಷಣದ ಕಾಶಿನಳಿನ್: ಮುಖ್ಯ ಅತಿಥಿಯಾಗಿದ್ದ ಸಂಸದ ನಳಿನ್ ಕುಮಾರ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣದ ಕಾಶಿಯಾಗಿದೆ. ಇಲ್ಲಿ ಶಿಕ್ಷಣಕ್ಕೆ ಕೊರತೆಯಲ್ಲ. ಅದ್ಬುತ ಶಿಕ್ಷಣ ಸಂಸ್ಥೆಗಳು ನಮ್ಮ ಜಿಲ್ಲೆಯಲ್ಲಿದೆ. ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವ ಸಂದರ್ಭದಲ್ಲೂ ಶಿಕ್ಷಣ ನಮ್ಮ ಸೇವೆ ಎಂದು ಪರಿಗಣಿಸಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ರಾಷ್ಟ್ರ ಭಕ್ತಿಯ ಉದ್ದೀಪನಗೊಳಿಸುತ್ತಿದೆ ಎಂದರು. ಅದ್ಬುತ ಶಿಕ್ಷಣ ವ್ಯವಸ್ಥೆಯನ್ನು ಇಡೀ ಜಗತ್ತಿಗೆ ನೀಡಿರುವ ಕೀರ್ತಿ ಭಾರತ ದೇಶಕ್ಕಿದೆ. ಪುರಾತನ ಕಾಲದಲ್ಲಿ ನಳಂದ ತಕ್ಷಶಿಲೆಯಂತೆ ಶಿಕ್ಷಣ ಸಂಸ್ಥೆಗಳು ಇಡೀ ವಿಶ್ವಕ್ಕೆ ಮಾಧರಿಯಾಗಿದೆ ಎಂದು ಹೇಳಿದ ಸಂಸದರು, ಸುದಾನ ಸಂಸ್ಥೆಯು ಹೆಸರಿನಂತೆ ಹಳ್ಳಿ ಪ್ರದೇಶದ ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣ ನೀಡುತ್ತಿದ್ದ ಮುಂದೆ ವಿಶ್ವವಿದ್ಯಾನಿಲಯವಾಗಿ ಹೊರಹೊಮ್ಮಲಿ ಎಂದು ಶುಭಹಾರೈಸಿದರು.

ಶಿಕ್ಷಣದಲ್ಲಿ ಸುದಾನ ಶಾಲೆಯು ಜಿಲ್ಲೆಯಲ್ಲಿ ಮಾದರಿ ಶಕುಂತಳಾ ಟಿ ಶೆಟ್ಟಿ: ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಕುಂತಳಾ ಟಿ ಶೆಟ್ಟಿ ಮಾತನಾಡಿ, ಸುದಾನ ಸಂಸ್ಥೆಯ ಶಿಕ್ಷಣ ಪದ್ದತಿಯೇ ವಿನೂತನ. ವಿದ್ಯಾರ್ಥಿಗಳಿಗೆ ಮಾನವೀಯ ಶಿಕ್ಷಣದ ಜೊತೆಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದು ಶಿಕ್ಷಣದ ಮೂಲಕ ಪುತ್ತೂರಿನ ಗೌರವವನ್ನು ಹೆಚ್ಚಿಸಿದೆ ಎಂದರು. ಶಿಕ್ಷಣ ಇಲಾಖಾ ಸಂಬಂಧಿಸಿಂದತೆ ಯಾವುದಾದರೂ ಸಮಸ್ಯೆಗಳು ಉಂಟಾದಾಗ ಅದಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತಿರುವ ಸುದಾನ ಶಾಲೆಯು ಜಿಲ್ಲೆಯಲ್ಲಿ ಮಾದರಿ ಶಿಕ್ಷಣ ಸಂಸ್ಥೆಯಾಗಿ ಬೆಳೆಯಲಿ ಎಂದರು.

ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್ ಮಾತನಾಡಿ, ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಿಕೊಟ್ಟು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಬೆಳ್ಳಿ ಹಬ್ಬ ಕಾರ್ಯಕ್ರಮದ ಮೂಲಕ ದೆಹಲಿಯಲ್ಲಿರುವ ಕೆಂಪು ಕೋಟೆಗಳನ್ನು ವೇದಿಕೆಯ ಮೂಲಕ ನೋಡುವ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಪಾರಂಪರಿಕ ಹಾಗೂ ಆಧುನಿಕ ವ್ಯವಸ್ಥೆಗಳೆರಡನ್ನೂ ಹೊಂದಿಕೊಂಡು ಶಿಕ್ಷಣ ಇಲಾಖೆ ಸಾಗಬೇಕಾಗಿದೆ ಎಂದರು. ತಾ.ಪಂ ಅಧ್ಯಕ್ಷ ಪುಲಸ್ತ್ಯ ರೈ ಮಾತನಾಡಿ, ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಯುತವಾದ ಶಿಕ್ಷಣ ನೀಡುತ್ತಿರುವ ಸುದಾನ ಶಾಲಾ ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ದೇಶ್ ದೇವೋ ಭವ ಎಂಬ ಶೀರ್ಷಿಕೆಯ ಮೂಲಕ ೬೭ನೇ ಗಣರಾಜ್ಯೋತ್ಸವದಂದು ನಡೆಸುತ್ತಿರುವುದು ಮಕ್ಕಳಲ್ಲಿ ದೇಶ ಭಕ್ತಿಯ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದರು. ಮಂಗಳೂರು ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ರೀಡರ್ ವೈ ಶಿವರಾಮಯ್ಯರವರು ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲು ಮಾಡಿಕೊಂಡು ಉತ್ತಮ ಫಲಿತಾಂಶ ಪಡೆಯುವುದು ಮುಖ್ಯವಲ್ಲ. ಶಿಕ್ಷಣದಲ್ಲಿ ತೀರಾ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಉತ್ತಮ ಶಿಕ್ಷಣ ನೀಡಿ ಪ್ರತಿಭಾನ್ವಿತರನ್ನಾಗಿ ಮಾಡುವುದು ಮುಖ್ಯ. ಅಂತಹ ವಿದ್ಯಾರ್ಥಿಗಳನ್ನು ಕಡೆಗಣಿಸುವುದು ಸರಿಯಲ್ಲ. ಅವರಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿ ಬೆಳೆಸುವುದು ಅಗತ್ಯ. ಇಂತಹ ಕೆಲಸಗಳನ್ನು ಸುದಾನ ಶಾಲೆ ಮಾಡುತ್ತಿದೆ ಎಂದರು. ಸನ್ಮಾನಿತರ ಪರವಾಗಿ ಸುದ್ದಿ  ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದರು ಮಾತನಾಡಿ, ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಿದಾಗ ಜನರಿಗೆ ಉತ್ತಮ ಸಂದೇಶಗಳು ದೊರೆಯುತ್ತವೆ. ಇದರಿಂದಾಗಿ ಅವರು ತಮ್ಮ ಜೀನವದಲ್ಲಿ ಬದಲಾಗುವುದರ ಮೂಲಕ ಸಮಾಜದಲ್ಲಿನ ಕೆಡುಕುಗಳು ದೂರವಾಗಲು ಸಾಧ್ಯ ಎಂದು ಹೇಳಿದರು.

ಆಡಳಿತ ಮಂಡಳಿ ಕಾರ್ಯದರ್ಶಿ ಡಾ|ಪೀಟರ್ ವಿಲ್ಸನ್ ಪ್ರಭಾಕರ್, ಬೆಳ್ಳಿ ಹಬ್ಬ ಸಮಿತಿ ಉಪಾಧ್ಯಕ್ಷ ಡಾ| ಎಚ್ ಮಾಧವ ಭಟ್, ಸ್ವಾಗತ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಹಣಕಾಸು ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಸುದರ್ಶನ್ ವಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮಾಮಚ್ಚನ್ ಎಂ, ಮುಖ್ಯಗುರು ಶೋಭಾ ನಾಗರಾಜ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಿಷಿತ್ ಘೇಟಿಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ವಿಶೇಷತೆಗಳು: ಭಾರತ ದೇಶದ ಗೌರವದ ಸಂಕೇತವಾಗಿರುವ ದಿಲ್ಲಿಯ ಕೆಂಪುಕೋಟೆ ಮಾದರಿಯಲ್ಲಿ ನಿರ್ಮಾಣವಾದ ವಿಶೇಷ ವೇದಿಕೆಯಲ್ಲಿ ಕಾರ್ಯಕ್ರಮ ಆಯೋಜಿಸಿಕೊಳ್ಳಲಾಗಿತ್ತು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ದೇಶದ ಸಂಸ್ಕೃತಿ, ರಾಷ್ಟ್ರೀಯ ನಾಯಕ ವೇಷದಾರಿ ಧರಿಸಿದ ವಿದ್ಯಾರ್ಥಿಗಳ ಮೂಲಕ ಮೆರವಣಿಗೆ ಮೂಲಕ ವೇದಿಕೆಯತ್ತ ಅತಿಥಿಗಳನ್ನು ಕರೆತರಲಾಯಿತು. ಮಕ್ಕಳಲ್ಲಿ ರಾಷ್ಟ್ರೀಯ ನಾಯಕರ ಬಗ್ಗೆ ಗೌರವ ಹಾಗೂ ನಾಯಕತ್ವ ಗುಣಗಳು ಮಕ್ಕಳಲ್ಲೂ ಬೆಳೆಯಬೇಕು ಎಂಬ ದೃಷ್ಟಿಯಲ್ಲಿ ರಾಷ್ಟ್ರೀಯ ನಾಯಕ ವೇಷದಾರಿ ವಿದ್ಯಾರ್ಥಿಗಳ ಮೂಲಕ ವೇದಿಕೆಯಲ್ಲಿ ರಾಷ್ಟ್ರೀಯ ನಾಯಕ ಪರಿಚಯವನ್ನು ಮಾಡಲಾಯಿತು. ಅಲ್ಲದೆ ಜನರಿಗೆ ಬೆಲ್ಲ ಹಾಗೂ ನೀರು ನೀಡಿ ಸ್ವಾಗತಿಸುವ ಮೂಲಕ ತುಳುನಾಡಿನ ಪುರಾತನ ಸಂಸ್ಕೃತಿಯನ್ನು ಮೆಲುಕು ಹಾಕಲಾಗಿದೆ.

ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸ್ವಾಗತಿಸಿದರು. ಸಂಚಾಲಕ ವಿಜಯ ಹಾರ್ವಿನ್ ಪ್ರಸ್ತಾವನೆ ಗೈದರು. ಕೋಶಾಧಿಕಾರಿ ಆಸ್ಕರ್ ಆನಂದ್ ವಂದಿಸಿದರು. ಶಿಕ್ಷಕಿಯರಾದ ಪ್ರತಿಮಾ ಹಾಗೂ ಅಮೃತವಾಣಿ ಸನ್ಮಾನಿತರ ಪರಿಚರ ಮಾಡಿದರು. ಕವಿತಾ ಅಡೂರು ಹಾಗೂ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.

ಮಕ್ಕಳಿಗೆ ಶಾಲಾ ಶಿಕ್ಷಣ ದಿನದಲ್ಲಿ ಕೇವಲ ಐದು ಗಂಟೆ ಮಾತ್ರ. ಉಳಿದ ಸಮಯವೆಲ್ಲಾ ಶಾಲೆಯಿಂದ ಹೊರಗಡೆ ಕಳೆಯುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆಯ ಮೇಲೆ ಪೋಷಕರ ಜವಾಬ್ದಾರಿ ಬಹಳಷ್ಟಿದೆ. ಅವರನ್ನು ಆಧುನಿಕ ತಂತ್ರಜ್ಞಾನಗಳಾದ ಮೊಬೈಲ್, ಇಂಟರ್‌ನೆಟ್, ಟಿ.ವಿ ಮಾಧ್ಯಮಗಳಿಂದ ದೂರವಿಡುವಂತೆ ಡಾ|ಮೋಹನ ಆಳ್ವ ಮನವಿ ಮಾಡಿದರು.

20160126043401 (3)

20160126043401 (5)

20160126043401 (1)

20160126050231

20160126050137

20160126050148

20160126050155

20160126050437

sudana 2

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ: ಶಿಕ್ಷಣ ಹಾಗೂ ಸಾಮಾಜಿಕ ಸೇವೆಯಲ್ಲಿ ಸಾಧನೆ ಮಾಡಿದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ, ಮಾಧ್ಯಮ ವಿಭಾಗದಲ್ಲಿ ಸುದ್ದಿ ಬಿಡುಗಡೆ ಸಂಪಾದಕ ಡಾ. ಯು.ಪಿ ಶಿವಾನಂದ, ಶೈಕ್ಷಣಿಕ ವಿಭಾಗದಲ್ಲಿ  ಮಕ್ಕಳ ಮಂಟಪದ ಡಾ| ಸುಕುಮಾರ ಗೌಡ, ನಾಟ್ಯಗುರು ಕುದ್ಕಾಡಿ ವಿಶ್ವನಾಥ ರೈ, ಸಮಾಜ ಸೇವೆಯಲ್ಲಿ ಆನಂದಾಶ್ರಮದ ಅಧ್ಯಕ್ಷೆ ಡಾ. ಗೌರಿ ಪೈ, ಫಾ. ಪತ್ರಾವೋ ಆಸ್ಪತ್ರೆಯ ಬಿ.ವಿ ಬೆರ್ನಾಂಡಿನ್, ಸಾಹಿತಿ ಎ.ಪಿ ಮಾಲತಿ, ಕೃಷಿ ಕ್ಷೇತ್ರದಲ್ಲಿ ಬದನಾಜೆ ಶಂಕರ್ ಭಟ್, ಆಯುರ್ವೇದ ವಿಭಾಗದಲ್ಲಿ ವೆಂಕಟ್ರಮಣ ಭಟ್ ದೈತೋಟ, ಯಕ್ಷಗಾನ ವಿಭಾಗದಲ್ಲಿ ಕೆ.ಎಚ್ ದಾಸಪ್ಪ ರೈ, ವೈದ್ಯಕೀಯ ಲೋಕದಲ್ಲಿ  ಆದರ್ಶ ಆಸ್ಪತ್ರೆಯ ಡಾ. ಸುಬ್ರಾಯ ಭಟ್ ಹಾಗೂ ಡಾ. ನಿತ್ಯಾನಂದ ಪೈ ಬೊಳ್ವಾರ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.