Breaking News

ಕೆದಂಬಾಡಿ ಗ್ರಾಮ ದೈವ ಶೀರಾಡಿ ದೈವ ಮಾರಿ ನೇಮೋತ್ಸವ

Puttur_Advt_NewsUnder_1
Puttur_Advt_NewsUnder_1

kedambady

ಜೀಣೋದ್ಧಾರಕ್ಕೆ ದೇಣಿಗೆ ಹಸ್ತಾಂತರ

ಪುತ್ತೂರು: ಕೆದಂಬಾಡಿ ಗ್ರಾಮ ದೈವ ಶೀರಾಡಿ ದೈವ ಮಾರಿ ನೇಮೋತ್ಸವವು ಇದುಪ್ಪಾಡಿ ಮಂಜಕೋಟ್ಯದಲ್ಲಿ ಜ.24ರಂದು ಊರ ಭಕ್ತಾದಿಗಳ ಕೂಡುವಿಕೆ ಯಿಂದ ವೈಭವದಿಂದ ಜರಗಿತು. ಕೆದಂಬಾಡಿ ಗ್ರಾಮ ದೈವ ಶೀರಾಡಿ ದೈವಸ್ಥಾನದ ಜೀರ್ಣೋದ್ಧಾರದ ಕೆಲಸ ಭರದಿಂದ ನಡೆಯುತ್ತಿದ್ದು ನೇಮೋತ್ಸವದ ಸಂದರ್ಭ ಜೀರ್ಣೋದ್ಧಾರಕ್ಕೆ ಧನಸಹಾಯವಾಗಿ ರೂ. 50 ಸಾವಿರವನ್ನು ಅಕ್ಷಯ ಗ್ರೂಪ್ಸ್ ಸಂಪ್ಯ ಇದರ ಮಾಲಕ ಜಯಂತ ನಡುಬೈಲುರವರು ನೀಡಿದರು. ತಲಾ 10ಸಾವಿರದಂತೆ ಮಣಿಕ್ಕಾರ ಸುಧಾಕರ ರೈ ಕೋರಂಗ, ಕುಕ್ಕುಂಜೋಡು ವಿಶ್ವನಾಥ ರೈ ನೀಡಿದರು. ತಲಾ 5 ಸಾವಿರದಂತೆ ಕಿಶೋರ್ ರೈ ಪಂಜಿಗುಡ್ಡೆ, ಬಓನಿಗುತ್ತು ಪದ್ಮನಾಭ ಆಳ್ವ ಬೋಳೋಡಿ, ಚಂದ್ರಾವತಿ ನೀರಳ, ಬೋಳೋಡಿ ರಮೇಶ ರೈ ಬೊಳಿಕಳ ನೀಡಿದರು. ಎ. ಸಂಜೀವ ರೈಅಂಕೊತ್ತಿಮಾರು ೪ ಸಾವಿರ, ಭಾಸ್ಕರ ರೈ ಕೊಡಂಕಾರಿ ೨,೦೧೦, ಕೋರಂಗ ಜಯಶೀಲ ರೈ 2 ಸಾವಿರ, ವಿಶ್ವನಾಥ ರೈ ಕಿಂಞರಡ್ಕ 1 ಸಾವಿರ, ನಾರಾಯಣ ರೈ ಮದ್ಲ 2 ಸಾವಿರ, ಅಮ್ಮು ರೈ ಕಲ್ಲಂಗಳ 1,111, ಬೋಳೋಡಿ ವಿಠಲ ರೈ 2’500, ಉಮೇಶ ಗೌಡ ಇದ್ಯಪೆ 1 ಸಾವಿರ, ಸೀತಾರಾಮ ಗೌಡ ಇದ್ಯಪೆ 1 ಸಾವಿರ, ರಾಮಣ್ಣ ಗೌಡ ಗುತ್ತು 1,005, ಉರುಂಬಿ ನಾರಾಯಣ ರೈ 1 ಸಾವಿರ, ಐತ್ತ ಮೇರ ಬೋಳೋಡಿ 1,500, ಗಂಗಾಧರ ಬೋಳೋಡಿ 1 ಸಾವಿರ, ಎಂ. ತಾರಾನಾಥ ಶೆಟ್ಟಿ ಮುಡಾಳ 1 ಸಾವಿರ ಮತ್ತು ಹಲವಾರು ಮಂದಿ 500ರಂತೆ ಒಟ್ಟು 1 ಲಕ್ಷದ 25 ಸಾವಿರ ನೇಮೋತ್ಸವ ದಿನ ಜೀರ್ಣೋದ್ಧಾರಕ್ಕೆ ಸಂಗ್ರಹವಾಗಿರುತ್ತದೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಡಮಜಲು ಸುಭಾಸ್ ರೈ, ಗೌರವ ಕಾರ್ಯದರ್ಶಿ ಮುಂಡಾಳಗುತ್ತು ಸುಧಾಕರ ರೈ, ಆರ್ಥಿಕ ಸಮಿತಿ ಸಂಚಾಲಕ ಕೊರಂಗ, ವಿಜಯ ಕುಮಾರ್ ರೈ ಮತ್ತು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.