ಸ್ವರ್ಣೋದ್ಯಮಿ ಬಲರಾಮ ಆಚಾರ್ಯರವರ ಷಷ್ಠ್ಯಾಬ್ದಿ ಆಚರಣೆ

Puttur_Advt_NewsUnder_1
Puttur_Advt_NewsUnder_1

bala 1

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ‍್ಸ್‌ನ ಮಾಲಕ ಬಲರಾಮ ಆಚಾರ್ಯರವರ ಷಷ್ಠ್ಯಾಬ್ಧಿ ಆಚರಣೆಯು ಜ.26ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸಂಭ್ರಮದಲ್ಲಿ ನಡೆಯಿತು.

ವೇದಿಕೆಯ ಒಂದು ಭಾಗದಲ್ಲಿ ಗಿರಿಧರ್ ಉಡುಪ ಬಳಗದವರಿಂದ ಗಟಮ್ ಸಂಗೀತ ನಡೆಯುತ್ತಿದ್ದಂತೆ ಇನ್ನೊಂದು ಭಾಗದಲ್ಲಿ ವರ್ಣಮಯ ವೇದಿಕೆಯಲ್ಲಿ ಬಲರಾಮ ಆಚಾರ್ಯರವರ ಷಷ್ಠ್ಯಾಬ್ಧಿಯನ್ನು ಪತ್ನಿ ರಾಜಿ ಬಲರಾಮ ಆಚಾರ್ಯರವರ ಜೊತೆ ಆಚರಿಸಲಾಗುತ್ತಿತ್ತು. ಸಾವಿರಾರು ಮಂದಿ ಆಪ್ತರು, ಸ್ನೇಹಿತರು, ಬಂಧುಗಳಲ್ಲದೆ ಕ್ರೀಡಾ ಸಚಿವ ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲ್, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿ, ಸಾಹಿತಿ ಹರಿಕೃಷ್ಣ ಪುನರೂರು, ಸುಳ್ಯ ಕೆ.ವಿ.ಜಿ. ಶಿಕ್ಷಣ ಸಂಸ್ಥೆಯ ಡಾ. ಚಿದಾನಂದ್, ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮತ್ತು ಸದಸ್ಯರುಗಳು, ಇನ್‌ಲ್ಯಾಂಡ್ ಬಿಲ್ಡರ‍್ಸ್‌ನ ಸಿರಾಜ್ ಅಹಮ್ಮದ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ, ವಿವೇಕಾನಂದ ವಿದ್ಯಾವರ್ಧಕ ಸಂಘದ ಶಿವಪ್ರಸಾದ್ ಇ, ಮತ್ತು ಪಿ.ರವೀಂದ್ರ, ಅಂಬಿಕಾ ವಿದ್ಯಾಲಯದ ಸುಬ್ರಹ್ಮಣ್ಯ ನಟ್ಟೋಜ, ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ  ಕೃಷ್ಣಮೂರ್ತಿ, ನಾರಾಯಣ ಭಟ್, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವನೂರು ಕೆ.ಸೀತಾರಾಮ ರೈ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಸಂಚಾಲಕ ಅಬ್ರಹಾಂ ವರ್ಗೀಸ್‌ರವರು ಬಲರಾಮ ಆಚಾರ್ಯ ದಂಪತಿಗೆ ಶುಭ ಹಾರೈಸಿದರು. ಬಲರಾಮ ಆಚಾರ್ಯರವರ ತಂದೆ ಜಿ.ಎಲ್. ಆಚಾರ್ಯ, ತಾಯಿ ಲೀಲಾವತಿ ಆಚಾರ್ಯ ಉಪಸ್ಥಿತರಿದ್ದರು. ಪುತ್ರರಾದ ಲಕ್ಷ್ಮೀಕಾಂತ, ಸುಧನ್ವ, ಪುತ್ರಿ ನಂದಿತಾ, ಸೊಸೆ ವೇದಾ, ಅಳಿಯ ವಿಜೇಶ್ ವಿದ್ಯಾಧರ್ ಅತಿಥಿಗಳನ್ನು ಸ್ವಾಗತಿಸಿದರು.

ಬಗೆ ಬಗೆಯ ಸವಿಯೂಟ: ಸಭಾಭವನಕ್ಕೆ ಹೊಕ್ಕುವಾಗಲೇ ಜ್ಯೂಸ್ ಮತ್ತು ಪಕೋಡ ನೀಡಿ ಅತಿಥಿಗಳನ್ನು ಸ್ವಾಗತಿಸಲಾಗುತ್ತಿತ್ತು. ಸಭಾಭವನದಲ್ಲಿ ಸಂಗೀತ ಕಚೇರಿ ಮೂಲಕ ಅತಿಥಿಗಳನ್ನು ಮನರಂಜಿಸಲಾಗುತ್ತಿತ್ತು. ಬಲರಾಮ ಆಚಾರ್ಯರವರಿಗೆ ಶುಭ ಹಾರೈಸಿದ ಬಳಿಕ ಸಭಾಭವನದ ಕೆಳಗಡೆ ಭೋಜನದ ಪ್ರಾರಂಭದಲ್ಲಿ ಲಘು ಉಪಹಾರವಾಗಿ ಪಾನಿಪೂರಿ ಮತ್ತು ಬೇಲ್‌ಪೂರಿ ಮತ್ತು ಕಟ್ ಫ್ರುಟ್ಸ್ ನೀಡಲಾಗುತ್ತಿತ್ತು. ಭೋಜನ ಶಾಲೆಯೊಳಗೆ ಮಲಾಯಿ ಅಂಗುರ್, ಮುಂಗ್‌ದಾಲ್ ಹಲ್ವ, ಅಂಜೂರ  ಬರ್ಫಿ, ರೋಟಿ, ವೆಜ್ ಹೈದರಾಬಾದ್, ಅಕ್ಕಿ ರೊಟ್ಟಿ, ಗುಳ್ಳ ರಸವಂಗಿ, ನೀರುಳ್ಳಿ ದೋಸೆ, ಕೆಂಪು ಚಟ್ನಿ, ಓಲಿ ಕಡಬು, ಬಿಳಿ ಚಟ್ನಿ, ಕಾಯಿ ಹುಳಿ, ವೆಜ್ ನೂಡಲ್, ಸಾಸ್, ಮೇತಿ ಪೀಸ್ ಪಲಾವು, ಮಸಾಲ, ಅನ್ನಸಾರ್, ಸಾಂಬಾರ್, ದಹಿವಡಾ, ಮೊಸರನ್ನ, ಉಪ್ಪಿನ ಕಾಯಿಯ ಖಾದ್ಯಗಳ ವಿಶೇಷ ಬಗೆ ಬಗೆಯ ಸವಿಯೂಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ಬಳಿಕ ಐಸ್‌ಕ್ರೀಂ, ಗ್ರೀನ್ ಸಲಾಡ್ ವ್ಯವಸ್ಥೆ ಮಾಡಲಾಗಿತ್ತು.

ಬಲರಾಮ ಆಚಾರ್ಯರವರದ್ದು ಮನಸ್ಸಿನ ಒಳಗಿನ ಸೌಂದರ್ಯ

ಶಾರೀರಿಕ ಸೌಂದರ್ಯ ಶಾಶ್ವತವಲ್ಲ. ಮನಸ್ಸಿನ ಒಳಗಿನ ಸೌಂದರ್ಯ ಶಾಶ್ವತ. ಆ ಶಾಶ್ವತ ಸೌಂದರ್ಯ ಸ್ವರ್ಣೋದ್ಯಮಿ ಬಲರಾಮ ಆಚಾರ್ಯರವರಲ್ಲಿ ಇದೆ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ಸಂಶೋಧನಾ ಕೇಂದ್ರದ ಫ್ರೊಫೆಸರ್ ಡಾ. ಕೆ.ಪಿ.ಪುತ್ತೂರಾಯ ಹೇಳಿದರು.

ಷಷ್ಠ್ಯಬ್ಧಿ ಕಾರ‍್ಯಕ್ರಮದಲ್ಲಿ ನಡೆದ ಸರಳ ಸಭಾ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು. ಬದುಕು ಬಾಳಲು ಮುಖ್ಯವಲ್ಲ. ಬದುಕು ಒಂದು ಸಂಭ್ರಮವಾಗಬೇಕು ಹೊರತು ಸಂಗ್ರಾಮವಾಗಬಾರದು. ನಾವು ಎಷ್ಟು ಬದುಕಿದ್ದೇವೆ ಎಂಬುದು ಮುಖ್ಯವಲ್ಲ. ಬದುಕಿನುದ್ದಕ್ಕೂ ಏನು ಮಾಡಿದ್ದೇನೆ ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ಬಲರಾಮ ಆಚಾರ್ಯರವರು ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜ ಸೇವೆ ಮೂಲಕ ಎಲ್ಲರ ಮನದಲ್ಲೂ ಅಚ್ಚಳಿಯದೆ ಉಳಿಯುತ್ತಾರೆ ಎಂದರು. ಮಾನಸಿಕ ಲವಲವಿಕೆ ಇದ್ದಲ್ಲಿ ಮಾನಸಿಕ ನೆಮ್ಮದಿ ಇರುತ್ತದೆ. ಅದುವೇ ಅರೋಗ್ಯ. ಅಂತಹ ಆರೋಗ್ಯವನ್ನು ಪಡೆದು ಜೀವನದ ಸಾರ್ಥಕ ಬದುಕನ್ನು ಕಂಡ ಬಲರಾಮ ಆಚಾರ್ಯರವರು ಭಗವಂತನಿಗೆ ಆಭಾರಿಯಾಗಬೇಕು ಎಂದರು. ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.

bala 2 bala 3 bala 4

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.