ಉಪ್ಪಿನಂಗಡಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ನೇತ್ರದಾನ ಜೀವದಾನಕ್ಕೆ ಸಮಾನ-ಡಾ|ಶಶಿಕಲಾ

11ಉಪ್ಪಿನಂಗಡಿ: ನೇತ್ರದಾನ ಜೀವ ದಾನಕ್ಕೆ ಸಮಾನವಾದುದು ಮತ್ತು ರಕ್ತದಾನಕ್ಕೆ ಇರುವ ಪ್ರಾಮುಖ್ಯತೆ ಇದಕ್ಕೂ ಇದೆ ಎಂದು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ|ಶಶಿಕಲಾ ಹೇಳಿದರು.
ಅವರು ಜ.22ರಂದು ಉಪ್ಪಿನಂಗಡಿ ರೋಟರಿ ಕ್ಲಬ್, ಜೇಸಿಸ್ ಉಪ್ಪಿನಂಗಡಿ, ಸಮುದಾಯ ಆರೋಗ್ಯ ಕೇಂದ್ರ ಉಪ್ಪಿನಂಗಡಿ, ಸಂಚಾರಿ ನೇತ್ರ ಘಟಕ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಉಚಿತ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಣ್ಣು ಮನುಷ್ಯರಿಗೆ ಅತ್ಯಂತ ಅಗತ್ಯ ಅಂಗ ಇದರ ಬಗ್ಗೆ ನಿರ್ಲಕ್ಷ ಬೇಡ ಎಂದ ಅವರು ಕಣ್ಣಿನ ಪೊರೆ ಇರುವವರು ಬಹಳಷ್ಟು ಮಂದಿ ಇರುತ್ತಾರೆ, ಆದರೆ ಶಸ್ತ್ರ ಚಿಕಿತ್ಸೆ ಬೇಡ ಎನ್ನುತ್ತಾರೆ ಇದು ಸಲ್ಲದು ಎಂದ ಅವರು ಆಪರೇಷನ್ ಬಗ್ಗೆ ಆತಂಕ ಪಡದೆ ಶಿಬಿರದ ಸದುಪಯೋಗ ಪಡೆದುಕೊಂಡು ಕಣ್ಣಿನ ಬಗ್ಗೆ ಕಾಳಜಿ ಅಗತ್ಯ ಎಂದರು.
ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಡಾ.ನಿರಂಜನ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ಬಹಳಷ್ಟು ಮಂದಿ ಆರೋಗ್ಯ ಶಿಬಿರಗಳ ಬಗ್ಗೆ ಲಘುವಾಗಿ ಪ್ರತಿಕ್ರಿಯಿಸುತ್ತಾರೆ, ಅಲ್ಲಿ ಕೊಡುವ ಚಿಕಿತ್ಸೆ, ಔಷಧಿಯ ಬಗ್ಗೆ ತೀರಾ ತಾತ್ಸಾರ ಭಾವನೆ ತೋರುತ್ತಾರೆ ಇದು ಸರಿ ಅಲ್ಲ, ಈ ಬಗ್ಗೆ ಜನರಲ್ಲಿ ಮಾಹಿತಿ, ಮಾರ್ಗದರ್ಶನದ ಕೊರತೆ ಇದ್ದು,
ಜನರು ಈ ಬಗ್ಗೆ ತಿಳಿದುಕೊಂಡು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಉಪ್ಪಿನಂಗಡಿಯ ಹಿರಿಯ ವೈದ್ಯ ಡಾ| ಎಂ. ಆರ್. ಶೆಣೈ, ನೇತ್ರಾಧಿಕಾರಿ ಶ್ರೀಮತಿ ಮಂಜುಳಾ, ಕೊಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ರಜನಿ, ಜೇಸಿಐ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು.
ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಜಾರ್ಜ್ ನೊರೋನ್ಹಾ, ಡಾ.ಉಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕಾರ್‍ಯದರ್ಶಿ ಮನೋಹರ ಸ್ವಾಗತಿಸಿ, ಜೇಸಿಐ ಕಾರ್‍ಯದರ್ಶಿ ಶಶಿಧರ್ ವಂದಿಸಿದರು. ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಮಿತ್ರ ಸೌಮ್ಯ ಕುಮಾರಿ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.