Breaking News

ಉಪ್ಪಿನಂಗಡಿಯಲ್ಲಿ ಸೈಬರ್ ಸೇಫ್ಟಿ ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1

13ಉಪ್ಪಿನಂಗಡಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯಲ್ಲಿ ಸ್ಥಳೀಯ ಪ್ರೌಢ ಶಾಲೆಗಳ ಅಸಕ್ತ ವಿದ್ಯಾರ್ಥಿಗಳಿಗಾಗಿ ಸೈಬರ್ ಸೇಫ್ಟಿ ಕಾರ್‍ಯಾಗಾರ ಜ. ೨೩ರಂದು ಜರಗಿತು.
ಕಾರ್‍ಯಾಗಾರವನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಉದಯಶಂಕರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅಂತರ್‌ಜಾಲ ವ್ಯವಸ್ಥೆ ಇಂದಿನ ಅಗತ್ಯತೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ, ಆದರೆ ಅದರಿಂದ ಮೋಸ ಹೋಗುವ ಸಾಧ್ಯತೆ ಕೂಡಾ ಇದ್ದು, ಈ ನಿಟ್ಟಿನಲ್ಲಿ ಅದರ ಬಗ್ಗೆ ಮಾಹಿತಿ ಪಡೆಯುವುದು ಅತೀ ಅಗತ್ಯ ಎಂದರು.
ಲರ್ನಿಂಗ್ ಲಿಂಕ್ಸ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿಕ್ರಂ ಮಾತನಾಡಿ ಸೈಬರ್ ಬಳಕೆ ಒಂದು ಹಂತದಲ್ಲಿ ಉತ್ತಮ ಮತ್ತು ಅತೀ ಅಗತ್ಯ ಕೂಡಾ, ಆದರೆ ಅದರ ಅಪಾಯಗಳನ್ನೂ ಅರಿತುಕೊಳ್ಳಬೇಕಾಗಿದೆ, ಈ ನಿಟ್ಟಿನಲ್ಲಿ ಈ ಮಾಹಿತಿ ಕಾರ್‍ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಕಾಲೇಜಿನ ಉಪ ಪ್ರಾಚಾರ್ಯ ದಿವಾಕರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಶ್ರೀಧರ್ ಭಟ್ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಹಸೀನ ಪರ್ವೀನ್ ವಂದಿಸಿದರು. ಶ್ರೀಮತಿ ಸಿಂಧು ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.