ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನ-ಹೇಮನಾಥ ಶೆಟ್ಟಿ

Puttur_Advt_NewsUnder_1
Puttur_Advt_NewsUnder_1

20160127_110430

ಪುತ್ತೂರು: ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ಧಾರಾಮಯ್ಯ ಸರಕಾರದ ಯಶಸ್ವಿ ಎರಡೂವರೆ ವರ್ಷದ ಆಡಳಿತ ಮೆಚ್ಚಿ ಜನತೆ ಕಾಂಗ್ರೆಸ್ ಪಕ್ಷವನ್ನು ಜಯಭೇರಿಗೊಳಿಸಿ ಆಡಳಿತ ಚುಕ್ಕಾಣಿ ಹಿಡಿಯುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನವನ್ನು ನಾವೆಲ್ಲ ಒಟ್ಟಾಗಿ ಮಾಡಲಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಸರಕಾರ ಒಳ್ಳೆಯ ಯೋಜನೆ ಹಮ್ಮಿಕೊಂಡಿದೆ. ಹಸಿವು ಮುಕ್ತ ರಾಜ್ಯವಾಗಬೇಕೆಂಬ ಹಿತದೃಷ್ಟಿಯಿಂದ ಅನ್ನಭಾಗ್ಯ, ಕ್ಷೀರ ಭಾಗ್ಯ, ವಸತಿಹೀನರಿಗೆ ವಸತಿ ಭಾಗ್ಯ, ಜೊತೆಗೆ ಗ್ರಾಮಾಂತರ ಪ್ರದೇಶದಲ್ಲಿ ೯೪ಸಿ ಮತ್ತು ನಗರ ಪ್ರದೇಶದಲ್ಲಿ 94ಸಿ.ಸಿ ಮೂಲಕ ವಾಸದ ಮನೆಗಳನ್ನು ಸಕ್ರಮಗೊಳಿಸಿದ್ದು, ಬಡ ನಿರ್ಗತಿಕ ಹಿಂದುಳಿದ, ಅಲ್ಪಸಂಖ್ಯಾತರ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಎಲ್ಲಾ ರೀತಿಯ ಸಾಲ ಮನ್ನಾಮಾಡುವ ಮುಖಾಂತರ ಅವರನ್ನು ಋಣಮುಕ್ತೊಳಿಸಿದ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಲವಾರು ಕಲ್ಯಾಣ ಯೋಜನೆಗಳು, ರೈತರಿಗೆ ವರದಾನವಾಗುವಂತೆ ರೂ.3ಲಕ್ಷದ ತನಕ ನಿಬಡ್ಡಿ ಸಾಲ ಮತ್ತು ರೂ.10ಲಕ್ಷದ ತನಕ ಶೇ.೩ ಬಡ್ಡಿ ದರದಲ್ಲಿ ಸಾಲವೊದಗಿಸಿ ರೈತಪರ ಸರಕಾರ ಬಾಯಿ ಮಾತಿನಲ್ಲಿ ಮಾಡದೆ ಕೃತಿಯಿಂದ ಮಾಡಿತೋರಿಸಿದೆ. ಹೈನುಗಾರಿಕೆಗೆ ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ಹಾಲಿಗೆ ಲೀಟರ್‌ಗೆ ರೂ.4 ಸಬ್ಸಿಡಿ ಹೆಚ್ಚುವರಿಯಾಗಿ ನೀಡಿ ರೈತರಿಗೆ ಉತ್ತೇಜನ ನೀಡಿದೆ. ಲಕ್ಷಾಂತರ ಮಂದಿ ಬಡವರಿಗೆ ಕಿರುಕುಳವಿಲ್ಲದೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ಚುನಾವಣಾ ಸಂದರ್ಭದಲ್ಲಿ ಘೋಷಿಸಿದ 168 ಪ್ರಣಾಳಿಕೆಯಲ್ಲಿ ಸುಮಾರು 120 ಯೋಜನೆಗಳನ್ನು ಕಾರ್ಯಗತಗೊಳಿಸಿ ಪ್ರಣಾಳಿಕೆ ಘೋಷನೆಗೆ ಸೀಮಿತ ಮಾಡದೆ ಕಾರ್ಯರೂಪಕ್ಕೆ ತರಲಾಗಿದೆ ಎಂದು ಹೇಮನಾಥ ಶೆಟ್ಟಿಯವರು ಹೇಳಿದರು. ಇವೆಲ್ಲ ಸಾಧನೆಗಳಿಂದ ಮುಂಬವರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಜಯ ಭೇರಿಗಳಿಸುವುದರಲ್ಲಿ ಸಂಶಯವಿಲ್ಲ ಎಂದರಲ್ಲದೆ ಜೊತೆಗೆ ಸಚಿವರಾದ ರಮಾನಾಥ ರೈ ಮತ್ತು ವಿನಯ ಕುಮಾರ್ ಸೊರಕೆಯವರ ಆಡಳಿತ ಶ್ರೀರಕ್ಷೆಯಾಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ನಗರಸಭಾ ಸದಸ್ಯ ಅನ್ವರ್ ಖಾಸಿಂ, ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

 ಕುಮ್ಕಿ ಹಕ್ಕು ಸರಕಾರ ಪಡೆಯುವುದಿಲ್ಲ:

ರೈತರ ಕುಮ್ಕಿ ಜಮೀನನ್ನು ಸರಕಾರ ಪಡೆಯುತ್ತದೆ ಎಂಬ ಗೊಂದಲಮಯವಾದ ವಾತಾವರಣ ಸೃಷ್ಟಿಯಾಗಿದೆ. ಇದು ಚುನಾವಣೆ ಸಮೀಪ ಬರುತ್ತಿದ್ದಂತೆ ಬಿಜೆಪಿ ಸೃಷ್ಟಿಸುವ ತಂತ್ರ. ಸರಕಾರ ಅವಶ್ಯಕತೆ ಇದ್ದಾಗ ಮಾತ್ರ ರೈತರ ಕುಮ್ಕಿ ಹಕ್ಕನ್ನು ಪಡೆಯಲಾವುದು ಎಂದು ಹಿಂದಿನಿಂದಲೇ ಆದೇಶ ಇದೆ. ಆದರೆ ಯಾವುದೇ ಕಾರಣಕ್ಕೂ ಬ್ರಿಟೀಷರ ಕಾಲದಲ್ಲಿ ಬಂದಂತಹ ರೈತರ ಕುಮ್ಕಿ ಹಕ್ಕನ್ನು ಸರಕಾರಕ್ಕೆ ಬಿಟ್ಟು ಕೊಡುವ ಪ್ರಶ್ನೆ ಬರುವುದಿಲ್ಲ. ಕಾಂಗ್ರೆಸ್ ಯಾವುದೇ ಕಾರಣಕ್ಕೂ ರೈತರ ಕುಮ್ಕಿ ಹಕ್ಕನ್ನು ಪಡೆಯಲು ಅವಕಾಶ ಕೊಡುವುದಿಲ್ಲ. ಒಂದು ವೇಳೆ ಸಮಸ್ಯೆ ಉಂಟಾದರೆ ನಾವೆಲ್ಲ ರೈತರ ಪರವಾಗಿ ನಿಲ್ಲುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.

ನಮಗೆ ಗುಂಪಿನ ಪ್ರಶ್ನೆ ಇಲ್ಲ, ಪಕ್ಷದ ಗೆಲುವು ಮುಖ್ಯ

ಪಕ್ಷದ ದೃಷ್ಟಿಯಲ್ಲಿ ಸಣ್ಣ ಪಟ್ಟ ವಿಚಾರ ಇರುವುದು ಸಹಜ. ಆದರೆ ಚುನಾವಣೆ ದೃಷ್ಟಿಯಿಲ್ಲಿ ಅದು ಯಾವುದು ಇಲ್ಲಿ ಬರುವುದಿಲ್ಲ. ಒಂದೇ ಮನಸಸಿನಿಂದ ಪಕ್ಷದ ಗೆಲುವಿಗಾಗಿ ಕೆಲಸ ನಡೆಯಲಿದೆ. ಆ ಗುಂಪು ಈ ಗುಂಪು ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಗೆಲ್ಲಬೇಕಾಗುವ ನಿಟ್ಟಿನಲ್ಲಿ ನಾವೆಲ್ಲೆ ಒಗ್ಗಾಟಾಗಿ ಶ್ರಮಿಸಲಿದ್ದೇವೆ. ಪಕ್ಷದ ವಿರೋಧ ಯಾರು ಹೋಗುತ್ತಾರೋ ಅವರಿಗೆ ಉಳಿಗಾಲವಿಲ್ಲ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ.

ಹೇಮನಾಥ ಶೆಟ್ಟಿ ಕಾವು

ನಿಕಟಪೂರ್ವ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.