ಅಸಹಾಯಕರಾಗಿದ್ದ ಜಾದೂಗಾರ ಫ್ರಿನ್ಸ್ ಭೂಬಷಾನ್‌ರನ್ನು ಸಂಬಂಧಿಕರ ಮನೆಗೆ ಮುಟ್ಟಿಸಿ ಮಾನವೀಯತೆ ಮೆರೆದ ಕುಂಬ್ರದ ಜನತೆ

Puttur_Advt_NewsUnder_1
Puttur_Advt_NewsUnder_1

Prince Bhoobashaan

-ಸಿಶೇ ಕಜೆಮಾರ್

ಪುತ್ತೂರು: ಜಾದೂ ಜಗತ್ತಿನ ಬಹುತೇಕ ಜಾದೂಗಾರರ ಒಡನಾಡಿಯಾಗಿ, ಅವರಿಗೆ ಸಹಾಯಕರಾಗಿ, ಬಹಳಷ್ಟು ಮಂದಿಗೆ ಗುರುವಾಗಿ ಜಾದೂ ವಿದ್ಯೆಯನ್ನು ಕಲಿಸಿಕೊಟ್ಟದ್ದು ಅಲ್ಲದೆ ಜಾದೂ ಪರಿಕರಗಳನ್ನು ಮಾಡಿಕೊಡುವ ಮೂಲಕ ಒಂದು ಕಾಲದಲ್ಲಿ ರಾಜ್ಯ ಹಾಗೂ ದೇಶದಲ್ಲಿ ಮನೆ ಮಾತಾಗಿದ್ದ ಜಾದೂಗಾರ ಫ್ರಿನ್ಸ್ ಭೂಬಷಾನ್( 79 ವ) ರವರು ಕಳೆದ ಹಲವು ವರ್ಷಗಳಿಂದ ಕುಂಬ್ರದಲ್ಲಿ ವಾಸವಾಗಿದ್ದರು. ಅರ್ಧ ಶತಮಾನಗಳ ಕಾಲ ಜಾದೂ ಕ್ಷೇತ್ರದಲ್ಲಿಯೇ ತಮ್ಮ ಜೀವಮಾನವನ್ನು ಕಳೆದ ಇವರು ಅದೇನೋ ಕಾರಣಾಂತರಗಳಿಂದ ತಮ್ಮ ಹುಟ್ಟೂರು ಮೈಸೂರನ್ನು ತೊರೆದು ಕುಂಬ್ರಕ್ಕೆ ಬಂದು ನೆಲೆಸಿದ್ದರು. ಕುಂಬ್ರಕ್ಕೆ ಬಂದ ಮೇಲೂ ಇಲ್ಲಿನ ಹಲವು ಮಂದಿಗೆ ಜಾದೂ ವಿದ್ಯೆಯನ್ನು ಕಲಿಸಿಕೊಡುವ ಮೂಲಕ ಹಾಗೂ ಜಾದೂ ವಿದ್ಯೆಗೆ ಬೇಕಾದ ಪರಿಕರಗಳನ್ನು ಮಾಡಿಕೊಡುತ್ತಾ ಜೀವನ ಸಾಗಿಸುತ್ತಿದ್ದರು. ಶೇಖಮಲೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಇವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಯಾವುದೇ ಕೆಲಸಗಳನ್ನು ಮಾಡಲು ಅಸಾಯಕರಾಗಿದ್ದ ಇವರನ್ನು ಸ್ಥಳೀಯರು ಅವರ ಹುಟ್ಟೂರು ಮೈಸೂರಿನ ನಝರ್‌ಬಾದ್‌ನ ಅವರ ದೊಡ್ಡಪ್ಪನ ಮಗನ ಮನೆಗೆ ಮುಟ್ಟಿಸಿ ಮಾನವೀಯತೆ ಮೆರೆದಿದ್ದಾರೆ.

ರಾಜ ವಂಶಸ್ಥದಿಂದ ಬಂದವರು

ಫ್ರಿನ್ಸ್ ಭೂಬಷಾನ್‌ರವರು ಮರಾಠ ರಾಜವಂಶಸ್ಥರ ಕುಟುಂಬಿಕರು. ಇವರ ಮೂಲ ಹೆಸರು ಸೋಮನಾಥ ಬೋಂಸ್ಲೆ ಎಂದಾಗಿದೆ. ಖ್ಯಾತ ಜಾದೂಗಾರ ಪಿ.ಸಿ ಸರ್ಕಾರ್‌ರವರ ಇಂದ್ರಜಾಲ ಪ್ರದರ್ಶನ ಕಂಡು ಬೆರಗಾಗಿ ತನ್ನ 15 ನೇ ವಯಸ್ಸಿನಲ್ಲಿ ಸರ್ಕಾರ್‌ರವರಿಂದ ಯಕ್ಷಿಣಿ ವಿದ್ಯೆ ಕಲಿತುಕೊಂಡು ಅವರ ತಂಡದಲ್ಲೇ ಕೆಲಸ ಮಾಡಿಕೊಂಡಿದ್ದರು. 55 ವರ್ಷ ಮಾಯಜಾಲದಲ್ಲೇ ಜೀವನ ಸಾಗಿಸಿದ ಇವರು ಜಾದೂ ಕ್ಷೇತ್ರದ ಮಹಾಕಲೆಗಾರ ಪ್ರೊ.ಶಂಕರ್‌ರವರಿಗೂ ಜಾದೂ ಪರಿಕರಗಳನ್ನು ಮಾಡಿಕೊಡುತ್ತಿದ್ದರು.ಕೋಲ್ಕೊತ್ತದಲ್ಲಿ ಮೊದಲ ಜಾದೂ ಪ್ರದರ್ಶನ ನೀಡಿದ ಇವರು ದೇಶದಾದ್ಯಂತ ಯಕ್ಷಿಣಿ ಪ್ರದರ್ಶನ ನೀಡುತ್ತಾ ಎಲ್ಲರ ಮನಗೆದ್ದವರು. ಸಾವಿರಾರು ಮಂದಿಗೆ ಯಕ್ಷಿಣಿ ವಿದ್ಯೆ ಧಾರೆ ಎರೆದವರು. ಮೈ ನವಿರೇಳಿಸುವ ಇವರ ಜಾದೂ ನೋಡಿ ಬೆರಗಾಗದವರೇ ಇಲ್ಲ. ಇದೀಗ ಮತ್ತೆ ತನ್ನ ಹುಟ್ಟೂರು ಸೇರುತ್ತಿರುವುದು ಅವರ ಮುಂದಿನ ಜೀವನಕ್ಕೆ ಒಳಿತನ್ನು ತರಲಿ ಎನ್ನುವುದೇ ಆಶಯ.

ವಿಠಲ ಆಳ್ವರ ಮುಂದಾಳತ್ವ

ಕುಂಬ್ರ ನೀರಾಲದ ಕೃಷಿಕರಾಗಿರುವ ವಿಠಲ ಯಾನೆ ಬಾಲಕೃಷ್ಣ ಆಳ್ವರವರಿಗೂ ಫ್ರಿನ್ಸ್ ಭೂಬಷಾನ್‌ರವರಿಗೆ ಕಳೆದ ಹಲವು ವರ್ಷಗಳ ಗೆಳೆತನ. ಭೂಬಷಾನ್‌ರವರು ವಿಠಲ ಆಳ್ವರ ಮನೆಗೆ ಹೋಗಿ ಚಹಾ ತಿಂಡಿ, ಊಟ ಮಾಡಿಕೊಂಡು ಬರುತ್ತಿದ್ದರು. ಹಲವು ಭಾರಿ ವಿಠಲ ಆಳ್ವರವರು ಭೂಬಷಾನ್‌ರವರಿಗೆ ಅನಾರೋಗ್ಯ ಇದ್ದ ಸಂದರ್ಭದಲ್ಲಿ ಔಷಧಿ ಕೂಡ ತಂದುಕೊಡುತ್ತಿದ್ದರು. ಕಳೆದ ಕೆಲವು ತಿಂಗಳಿನಿಂದ ಭೂಬಷಾನ್‌ರವರಿಗೆ ನಡೆಯಲು ಸಾಧ್ಯವಾಗದೇ ಇರುವ ಸಮಯದಲ್ಲೂ ವಿಠಲ ಆಳ್ವರವರು ತನ್ನ ಮನೆಯಿಂದ ಊಟ, ಚಹಾ ತಿಂಡಿ ತಂದು ಭೂಬಷಾನ್‌ರವರಿಗೆ ಕೊಡುತ್ತಿದ್ದರು. ಭೂಬಷಾನ್‌ರವರ ದೊಡ್ಡಪ್ಪನ ಮಗ ಪ್ರಭಾಕರ್‌ರವರ ಮೊಬೈಲ್ ನಂಬರ್ ಪಡೆದುಕೊಂಡ ವಿಠಲ ಆಳ್ವರವರು ಪ್ರಭಾಕರ್‌ರವರಿಗೆ ಫೋನ್ ಮಾಡಿ ಭೂಬಷಾನ್‌ರವರಿಗೆ ಹುಷಾರಿಲ್ಲದ ವಿಷಯ ತಿಳಿಸಿದ್ದರು ಆದರೆ ಅವರು ನಮಗೆ ಕುಂಬ್ರಕ್ಕೆ ಬರಲು ಆಗುವುದಿಲ್ಲ ನೀವೇನಾದರೂ ಮಾಡಿ ಅವರನ್ನು ಬಸ್ಸಲ್ಲಿ ಮೈಸೂರಿಗೆ ಕಳುಹಿಸಿಕೊಡಿ ಎಂದು ಹೇಳಿದ್ದರು.

ತನ್ನ ಸ್ವಂತ ಓಮ್ನಿಯಲ್ಲೇ ಕುಳ್ಳಿರಿಸಿಕೊಂಡು ಹೋಗಿದ್ದರು

ತನ್ನ ಗೆಳೆಯನಾಗಿದ್ದ ಭೂಬಷಾನ್‌ರವರನ್ನು ಬಸ್ಸಲ್ಲಿ ಕಳುಹಿಸಲು ಒಪ್ಪದ ವಿಠಲ ಆಳ್ವರವರು ಸ್ಥಳೀಯ ದಾಮೋದರ ರೈ ಪಣೆಕಳ ಹಾಗೂ ಆಸಿಫ್ ಜಾರತ್ತಾರುರವರ ಸಹಾಯ ಪಡೆದುಕೊಂಡು ತನ್ನ ಸ್ವಂತ ಓಮ್ನಿಯಲ್ಲಿ ಭೂಬಷಾನ್‌ರವರನ್ನು ಕುಳ್ಳಿರಿಸಿಕೊಂಡು ಜ.23 ರಂದು ರಾತ್ರಿ ಮೈಸೂರಿಗೆ ತೆರಳಿದ್ದರು. ಮೈಸೂರಿನಲ್ಲಿ ಪೊಲೀಸರ ಸಹಾಯ ಪಡೆದುಕೊಂಡ ಇವರುಗಳು ಭೂಬಷಾನ್‌ರವರನ್ನು ಅವರ ನಝರ್‌ಬಾದ್‌ನ ದೊಡ್ಡಪ್ಪನ ಮಗನ ಮನೆಗೆ ಮುಟ್ಟಿಸಿ ಬಂದಿದ್ದಾರೆ.

ಎರಡು ವರ್ಷಗಳಿಂದ ನಾನು ಬಾಬಣ್ಣ ತುಂಬಾ ಆತ್ಮೀಯರಾಗಿದ್ದೇವು. ಅವರಿಗೆ ಹುಷಾರಿಲ್ಲದ ಸಮಯದಲ್ಲಿ ನಾನೇ ನನ್ನ ಮನೆಯಿಂದ ಊಟ, ಚಹಾ ತಿಂಡಿ ತಂದು ಕೊಡುತ್ತಿದ್ದೆ. ಇದೀಗ ಅವರಿಗೆ ನಡೆಯಲು ಕೂಡ ಸಾಧ್ಯವಿಲ್ಲದಾಗಿತ್ತು. ಅವರು ನಾನು ಮೈಸೂರಿಗೆ ಹೋಗಲ್ಲ, ಸತ್ತರೂ ಇಲ್ಲೇ ಸಾಯುತ್ತೇನೆ ಎಂದಿದ್ದರು. ಆದರೂ ನಾನು ಹಟ ಮಾಡಿ ಅವರ ಸಂಬಂಧಿ ಪ್ರಭಾಕರ್‌ರವರ ಮೊಬೈಲ್ ನಂಬರ್ ಪಡೆದುಕೊಂಡು ಹೇಗಾದರೂ ಅವರ ಮನವೊಲಿಸಿ ನನ್ನ ಸ್ವಂತ ಓಮ್ನಿಯಲ್ಲಿ ನನ್ನದೇ ಖರ್ಚಿನಲ್ಲಿ ಸ್ಥಳೀಯ ದಾಮೋದರ್ ಹಾಗೂ ಆಸಿಫ್‌ನ ಸಹಾಯ ಪಡೆದುಕೊಂಡು ಮೈಸೂರಿನ ನಝರ್‌ಬಾದ್ ಮನೆಗೆ ಮುಟ್ಟಿಸಿ ಬಂದಿದ್ದೇವೆ.ಅವರ ಜೀವನದ ಕೊನೆಗಾಲದಲ್ಲಿ ಅವರ ಸಂಬಂಧಿಕರ ಮನೆಗೆ ತಲುಪಿಸಿದ್ದು ನಮಗೆ ಖುಷಿ ತಂದಿದೆ.

– ವಿಠಲ ಆಳ್ವ ಯಾನೆ ಬಾಲಕೃಷ್ಣ ಆಳ್ವ ನೀರಾಲ

ವಿಠಲಣ್ಣರವರು ನನಗೆ ತುಂಬಾ ಸಹಾಯ ಮಾಡಿದ್ದಾರೆ. ಅವರ ಮನೆಯಿಂದಲೇ ಊಟ, ತಿಂಡಿ ನೀಡುತ್ತಿದ್ದರು. ಇದೀಗ ನನ್ನನ್ನು ಮೈಸೂರಿನ ನಝರ್‌ಬಾದ್‌ನಲ್ಲಿರುವ ನನ್ನ ದೊಡ್ಡಪ್ಪನ ಮಗ ಪ್ರಭಾಕರನ ಮನೆಗೆ ತನ್ನ ಓಮ್ನಿಯಲ್ಲಿ ತಂದು ಮುಟ್ಟಿಸಿದ್ದಾರೆ. ವಿಠಲಣ್ಣ, ದಾಮೋದರಣ್ಣ ಹಾಗೂ ಆಸಿಫ್‌ರವರನ್ನು ನಾನು ಎಂದಿಗೂ ಮರೆಯಲ್ಲ ಹಾಗೆ ಇಷ್ಟು ವರ್ಷ ನನಗೆ ಸಹಕಾರ ನೀಡಿ ಕುಂಬ್ರದ ಜನತೆಯನ್ನು ನಾನು ಎಂದಿಗೂ ಮರೆಯಲ್ಲ. ಎಲ್ಲರನ್ನು ಕಳಕೊಂಡ ನೋವು ನನಗಿಗೆ. ಆರೋಗ್ಯ ಸರಿಯಾದ ಕೂಡಲೇ ಮತ್ತೆ ಕುಂಬ್ರಕ್ಕೆ ಬಂದು ಹೋಗುತ್ತೇನೆ

-ಫ್ರಿನ್ಸ್ ಭೂಬಷಾನ್, ಜಾದೂಗಾರ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.