Breaking News

ಪವರ್ ಪ್ರಾಜೆಕ್ಟ್‌ಗೆ ಬೀಗ

Puttur_Advt_NewsUnder_1
Puttur_Advt_NewsUnder_1

ಅರಣ್ಯ ನಿಯಮ ಗಾಳಿಗೆ ತೂರಿ ಕಾವೇರಿ ವನ್ಯಜೀವಿ ವಿಭಾಗದ ಮಳವಳ್ಳಿ ತಾಲೂಕಿನ ಹಲಗೂರು ಅರಣ್ಯದಲ್ಲಿ ತಲೆಯೆತ್ತಿದ್ದ ಲಿಂಬಾವಳಿ ಪವರ್ ಪ್ರಾಜೆಕ್ಟ್ ಪ್ರವರ್.ಲಿ. ಕಿರು ಜಲವಿದ್ಯುತ್ ಘಟಕಕ್ಕೆ ಚಾಮರಾಜನಗರ ವೃತ್ತದ ಅರಣ್ಯ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಅರಣ್ಯ ಅಧಿಕಾರಿಗಳು ಕೇಸು ದಾಖಲಿಸಿ ೩ ವರ್ಷಗಳ ಬಳಿಕ ಕಿರು ಜಲವಿದ್ಯುತ್ ಘಟಕ ಸ್ಥಗಿತಗೊಳಿಸಿದ್ದಾರೆ. ಇದರಿಂದ ಸುಮಾರು ೨೦ ಎಕರೆ ಅರಣ್ಯ ಭೂಮಿ ತೆರವು ಆದಂತಾಗಿದೆ. ಅರಣ್ಯ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ತಲೆಯೆತ್ತಿದ್ದ ಕಿರು ಜಲವಿದ್ಯುತ್ ಸ್ಥಾವರದ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿ ಚಾಮರಾಜನಗರ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ. ರವಿ, ೨೦೧೫ರ ನ. ೪ರಂದು ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.