Breaking News

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭೆ : ಬಲಾತ್ಕಾರದ ಬಂದ್‌ಗೆ ಬೆಂಬಲವಿಲ್ಲ-ಸುದ್ದಿ ವೇದಿಕೆಯ ಆಂದೋಲನಕ್ಕೆ ಸಂಪೂರ್ಣ ಬೆಂಬಲ

Puttur_Advt_NewsUnder_1
Puttur_Advt_NewsUnder_1

vanijya

ಬಲಾತ್ಕಾರದಿಂದ ಬಂದ್ ಮಾಡಿಸುವ ಪ್ರಕ್ರಿಯೆಗೆ ವರ್ತಕರು ಒಳಗಾಗುವುದಿಲ್ಲಅಧ್ಯಕ್ಷ ಸುಂದರ ಗೌಡ

ಪುತ್ತೂರು: ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಸಿಕ ಸಭೆಯು ಸಂಘದ ಅಧ್ಯಕ್ಷ ಸುಂದರ ಗೌಡ ಎಚ್. ರವರ ಅಧ್ಯಕ್ಷತೆಯಲ್ಲಿ ಇಲ್ಲಿನ ಜಿ.ಎಲ್. ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಕಚೇರಿಯಲ್ಲಿ ಜ. 27ರಂದು ನಡೆಯಿತು. ಸಂಘದ ಆಶ್ರಯದಲ್ಲಿ ಜ. 29ರಂದು ನಡೆಯಲಿರುವ ‘ಸೌರ ವಿದ್ಯುಚ್ಛಕ್ತಿ ಉತ್ಪಾದನಾ’ ಮಾಹಿತಿ ಕಾರ್ಯಾಗಾರದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.

ಸುದ್ದಿ ವೇದಿಕೆಯ ಆಂದೋಲನಕ್ಕೆ ಸಂಪೂರ್ಣ ಬೆಂಬಲ: ಸುದ್ದಿ ವೇದಿಕೆಯಿಂದ ಹಮ್ಮಿಕೊಳ್ಳಲಾಗಿರುವ ‘ಬಲಾತ್ಕಾರದ ಬಂದ್, ಕೋಮು ಯಾ ಯಾವುದೇ ಗಲಭೆ ವಿರೋಧಿ ಆಂದೋಲನಕ್ಕೆ ಸಂಘವು ಸಂಪೂರ್ಣ ಬೆಂಬಲ ಸೂಚಿಸುತ್ತದೆ ಎಂದು ನಿರ್ಣಯ ಮಾಡಿದ್ದೇವೆ. ಮುಂದಕ್ಕೆ ಯಾವುದೇ ಬಂದ್‌ಗಳಾದಾಗ ಬಲಾತ್ಕಾರದಿಂದ ಬಂದ್ ಮಾಡಿಸುವ ಪ್ರಕ್ರಿಯೆಗೆ ಯಾವುದೇ ವರ್ತಕರು ಒಳಗಾಗುವುದಿಲ್ಲ ಎಂದು ಅಧ್ಯಕ್ಷ ಸುಂದರ ಗೌಡರವರು ಅಧಿಕೃತವಾಗಿ ಘೋಷಿಸಿದರು.

ಕರ್ನಾಟಕದಲ್ಲಿಯೂ ಕಾನೂನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಮನವಿ: ಪದೇ ಪದೇ ಬಂದ್‌ಗೆ ಕರೆ ನೀಡಿ ಬಂದ್ ನಡೆಯುತ್ತಿದ್ದ ಕೇರಳ ರಾಜ್ಯದಲ್ಲಿ ಈ ಬಗ್ಗೆ ನೂತನ ಕಾನೂನು ತರಲಾಗಿದ್ದು, ಇದೀಗ ನಿಯಂತ್ರಣಕ್ಕೆ ಬಂದಿದೆ. ಇತರ ರಾಜ್ಯಗಳಲ್ಲಿಯೂ ಇದರ ಪ್ರಮಾಣ ಕಡಿಮೆಯಾಗಿದೆ. ಆದರೆ ಕರ್ನಾಟಕದಲ್ಲಿ ಇದು ಇನ್ನೂ ಜ್ಯಾರಿಗೊಳ್ಳದೇ ಇರುವುದರಿಂದ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ, ಬಲಾತ್ಕಾರದ ಬಂದ್‌ಗೆ ಕರೆ ಕೊಡಬಾರದು ಮತ್ತು ಇದರಿಂದ ಆಗುವ ನಷ್ಟಗಳನ್ನು ಕರೆ ನೀಡಿದವರೇ ಭರಿಸಬೇಕೆಂಬ ಕಾನೂನನ್ನು ಕಟ್ಟುನಿಟ್ಟಾಗಿ ರಾಜ್ಯದಲ್ಲಿ ಜಾರಿಗೆ ತರಲು ಪುತ್ತೂರು ವರ್ತಕ ಸಂಘದಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ಅಭಿಪ್ರಾಯಿಸಲಾಯಿತು.

ಬಲಾತ್ಕಾರದ ಬಂದ್‌ಗೆ ಬೆಂಬಲವಿಲ್ಲ’ ಫಲಕ ಅಳವಡಿಕೆ: ಸಂಘದ ಹಲವು ಸದಸ್ಯರು ‘ಬಲಾತ್ಕಾರದ ಬಂದ್‌ಗೆ ಬೆಂಬಲವಿಲ್ಲ’ ಫಲಕ ಅಳವಡಿಸಲು ಪಡೆದುಕೊಂಡು ಬೆಂಬಲ ಸೂಚಿಸಿದರು.

ಸಂಘದ ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಕೆ. ಕೇಶವ ಪೈ, ಗೋಪಾಲಕೃಷ್ಣ ಭಟ್, ಹಾಲಿ ಪ್ರಧಾನ ಕಾರ್ಯದರ್ಶಿ ಗಣೇಶ್ ಕುಮಾರ್, ಖಜಾಂಜಿ ವಿಶ್ವಪ್ರಸಾದ್ ಸೇಡಿಯಾಪು, ಉಪಾಧ್ಯಕ್ಷರಾದ ಎಂ. ಉಮ್ಮರ್ ಫಾರೂಕ್, ಎಂ.ಆರ್. ಜಯಕುಮಾರ್ ರೈ, ಕಾರ್ಯದರ್ಶಿಗಳಾದ ಎಸ್.ಬಿ. ಉದಯ ಕುಮಾರ್, ಭಾಸ್ಕರ ಬಾರ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ. ಮಹಾದೇವ ಶಾಸ್ತ್ರಿ, ದೇವಪ್ಪ ನೋಂಡ, ಕೆ. ಸೀತಾರಾಮ ಶಾಸ್ತ್ರಿ, ಟಿ. ಕರುಣಾಕರ ಪೈ, ಸದಾನಂದ ನಾಕ್ ಕೆ., ಜೇಮ್ಸ್ ಜೆ. ಮಾಡ್ತಾ, ನಾಮ ನಿರ್ದೇಶಿತ ಸದಸ್ಯರುಗಳಾದ ಸಂತೋಷ್ ಶೆಟ್ಟಿ, ಮಹಮ್ಮದ್ ಕುಂಞಿ ಜನತಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.