Breaking News

ಉಪ್ಪಿನಂಗಡಿ ಪೊಲೀಸ್ ಅಪರೇಷನ್ ಮುಸ್ಕಾನ್ ಕಾರ‍್ಯಾಚರಣೆ 9 ತಿಂಗಳ ಹಿಂದೆ ನಾಪತ್ತೆಯಾಗಿದ್ದ ತಾಯಿ, ಮಕ್ಕಳು ಪತ್ತೆ

Puttur_Advt_NewsUnder_1
Puttur_Advt_NewsUnder_1

1574

ಉಪ್ಪಿನಂಗಡಿ: ಒಂಭತ್ತು ತಿಂಗಳ ಹಿಂದೆ ಕಳೆಂಜ ಗ್ರಾಮದ ಮಾಣಿಗೇರಿ ಎಂಬಲ್ಲಿಂದ ನಾಪತ್ತೆಯಾಗಿದ್ದ ತಾಯಿ ಆಕೆಯ ಇಬ್ಬರು ಮಕ್ಕಳನ್ನು ಉಪ್ಪಿನಂಗಡಿ ಪೊಲೀಸರು  ಅಪರೇಷನ್ ಮುಸ್ಕಾನ್ ಅಡಿಯಲ್ಲಿ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿ ಆಕೆಯ ತಾಯಿಯ ಮನೆಗೆ ಒಪ್ಪಿಸಿದ್ದಾರೆ.

 2015ರ ಮೇ 26ರಂದು ತನ್ನ ತವರು ಮನೆ, ಬೆಳ್ತಂಗಡಿ ತಾಲ್ಲೂಕಿನ ಕಳೆಂಜ ಗ್ರಾಮದ ಮಾಣಿಗೇರಿ ಎಂಬಲ್ಲಿಂದ ನಿಶಾ (26) ಎಂಬವರು ತನ್ನ ಇಬ್ಬರು ಮಕ್ಕಳಾಗಿರುವ ಕಾವ್ಯಶ್ರೀ (6), ಎರಡೂವರೆ ವರ್ಷದ ಶಿಲ್ಪಶ್ರೀಯೊಂದಿಗೆ ನಾಪತ್ತೆಯಾಗಿದ್ದರು. ಅಪರೇಷನ್ ಮುಸ್ಕಾನ್ ಅಡಿಯಲ್ಲಿ ಕಾರ‍್ಯಾಚರಣೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಮಂಗಳೂರು ಸಮೀಪದ ಇರುವೈಲು ಗ್ರಾಮದ ಎಡಪದವು ಎಂಬಲ್ಲಿ ಪತ್ತೆ ಹಚ್ಚಿ ಕರೆ ತಂದಿದ್ದಾರೆ.

 ನಾಪತ್ತೆ ಪ್ರಕರಣ:  ಮಾಣಿಗೇರಿ ನಿವಾಸಿಯಾದ ನಿಶಾ ಅವರನ್ನು ಎಂಟು ವರ್ಷಗಳ ಹಿಂದೆ ಬೆಳ್ತಂಗಡಿ ತಾಲ್ಲೂಕಿನ ತೋಟತ್ತಾಡಿ ಗ್ರಾಮದ ಮುಂಡೈಲು ನಿವಾಸಿ ಪ್ರಶಾಂತ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಅಲ್ಲಿ ಪತಿ ಪತ್ನಿಯರಲ್ಲಿ ವಿರಸವುಂಟಾಗಿ ನಿಶಾ ತಾಯಿ ಮನೆಯಾದ ಮಾಣಿಗೇರಿಗೆ ತನ್ನಿಬ್ಬರು ಮಕ್ಕಳೊಂದಿಗೆ ಬಂದಿದ್ದರು. ಬಳಿಕ ಮೇ 26ರಂದು ತಾಯಿ ಮನೆಯಿಂದ ಅವರು ನಾಪತ್ತೆಯಾಗಿದ್ದರು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಇವರ ಹುಡುಕಾಟ ನಡೆಸಿದ್ದರೂ ಪತ್ತೆ ಆಗಿರಲಿಲ್ಲ.

 ಇದೀಗ ಅಪರೇಷನ್ ಮುಸ್ಕಾನ್ ಅಡಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಿಶಾ ಮತ್ತು ಮಕ್ಕಳಿಬ್ಬರನ್ನು ಎಡಪದವಿನಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

 ಕೇರಳ ಸಂಬಂಧಿಕರ ಮನೆಯಲ್ಲಿದ್ದೆ:  ನಾಪತ್ತೆಯಾಗಿದ್ದ ನಿಶಾ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ “ತಾನು ಮೊದಲಿಗೆ ಕೇರಳದ ನಿಲೇಶ್ವರದಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿದ್ದೆ. ಬಳಿಕ ಮಂಗಳೂರಿನ ಎಡಪದವಿಗೆ ಬಂದು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದೆ ಎಂದು ತಿಳಿಸಿದ್ದು, ಯಾವುದೇ ಕಾರಣಕ್ಕೂ ಗಂಡನ ಮನೆಗೆ ಹೋಗುವುದಿಲ್ಲವೆಂದು ತಿಳಿಸಿದ್ದಾರೆ, ಆದ್ದರಿಂದ ತಾಯಿ, ಮಕ್ಕಳನ್ನು ಮಾಣಿಗೇರಿಯ ಆಕೆಯ ತಾಯಿ ಮನೆಗೆ ಕಳುಹಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

 ಉಪ್ಪಿನಂಗಡಿ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಕುಲಕರ್ಣಿ ಹಾಗೂ ಠಾಣಾಧಿಕಾರಿ ತಿಮ್ಮಪ್ಪ ನಾಯ್ಕ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯದಲ್ಲಿ ಸಿಬ್ಬಂದಿಗಳಾದ ಶ್ರೀಧರ ರೈ, ಚೋಮ, ಪ್ರಮೋದ್, ರಾಧಾಕೃಷ್ಣ, ರವೀಂದ್ರ, ಶ್ರೀಧರ, ಮನೋಹರ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.