Breaking News

ಪಾಣಾಜೆ : ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ದಶಮಾನೋತ್ಸವ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

nalin kumar 2

ಜಾತ್ರೋತ್ಸವಕ್ಕೆ ಮೆರುಗು ತಂದ ನೃತ್ಯ ವೈಭವ ಮತ್ತು ರಸ ಮಂಜರಿ ಕಾರ್ಯಕ್ರಮ

ಪಾಣಾಜೆ : ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಆರ್ಲಪದವು ಇದರ ದಶಮಾನೋತ್ಸವ ಪ್ರಯುಕ್ತ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವರ ಹಾಗೂ ಪೂಮಾಣಿ – ಕಿನ್ನಿಮಾಣಿ ದೈವಗಳ ಜಾತ್ರೋತ್ಸವದ ಸಂದರ್ಭದಲ್ಲಿ  ಸಭಾ ಕಾರ್ಯಕ್ರಮ, ನೃತ್ಯ ವೈಭವ ಮತ್ತು ರಸಮಂಜರಿ ಕಾರ್ಯಕ್ರಮವು ಜ.26 ರಂದು ಸಂಜೆ ಆರ್ಲಪದವು ಕಿನ್ನಿಮಾಣಿ- ಪೂಮಾಣಿ ದೈವಗಳ ಜಾತ್ರೋತ್ಸವ ಗದ್ದೆಯಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ.ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ನೆರವೇರಿಸಿ ಮಾತಾಡಿ, ಗಾಂಧೀಜಿಯವರು ಅಂದು ಕಂಡ ರಾಮ ರಾಜ್ಯದ ಕನಸು ಇಂದು ನನಸಾಗುವ ಹಾಗೆ ಕಾಣುತ್ತಿದೆ ಯಾಕೆಂದರೆ ರಾಮ ರಾಜ್ಯವಾಗಬೇಕಾದರೆ ಮೊದಲು ಗ್ರಾಮ ರಾಜ್ಯವಾಗಬೇಕು ಅದನ್ನು ನಾವಿಂದು ವಿದ್ಯಾಶ್ರೀ ಫ್ರೆಂಡ್ಸ್ ನವರು ಗ್ರಾಮದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಂಡು ಬರುವುದನ್ನು ನೋಡುವಾಗ ಅರಿವಾಗುತ್ತದೆ ಎಂದು ಟ್ರಸ್ಟ್‌ನ ಕಾರ್ಯದ ಬಗ್ಗೆ ಸಂತಸಪಟ್ಟರು.

ಮುಖ್ಯ ಅಥಿತಿ ನೆಲೆಯಲ್ಲಿ ಮಾತಾಡಿದ ರಾಮಕೃಷ್ಣ ಪ್ರೌಢ ಶಾಲೆ ಪುತ್ತೂರು ಇದರ ಸಂಚಾಲಕ ಹೇಮನಾಥ ಶೆಟ್ಟಿ ಕಾವು ರವರು ಊರಿನ ಯುವಕರ ತಂಡ ಎದ್ದು ನಿಂತರೆ ಏನನ್ನೂ ಸಾಧಿಸಬಹುದು ಅಂತಹ ಶಕ್ತಿ ಅವರಲ್ಲಿರುತ್ತದೆ. ಆ ಯುವ ತಂಡಕ್ಕೆ ಎಲ್ಲರು ಸಹಕರಿಸಿ ಗ್ರಾಮದ ಅಭಿವೃದ್ಧಿಗೆ ಪೂರಕರಾಗಬೇಕು ಎಂದು ವಿದ್ಯಾಶ್ರೀ ಟ್ರಸ್ಟ್ ಇನ್ನೂ ಕೂಡ ಉನ್ನತ ಮಟ್ಟಕ್ಕೇರಲಿ ಎಂದು ಶುಭಹಾರೈಸಿದರು.

ಸನ್ಮಾನ ಕಾರ್ಯಕ್ರಮ : ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆ ನರಿಮೊಗರು ಇಲ್ಲಿನ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್, ಪುರಸಭೆ ಸದಸ್ಯರು ಮತ್ತು ಬಂಟ್ವಾಳ ವಿದ್ಯುತ್ ಗುತ್ತಿಗೆದಾರರಾದ ಸದಾಶಿವ ಬಂಗೇರ ಬಂಟ್ವಾಳ, ವಿದ್ಯಾಶ್ರೀ ಫ್ರೆಂಡ್ಸ್ ಸ್ಥಾಪಕ ಸದಸ್ಯರಾದ ಮಾಧವ ಮಣಿಯಾಣಿ ದೇವಸ್ಯ, ಎಸ್.ಎಸ್.ಎಲ್.ಸಿ ಯಲ್ಲಿ ವಿಶಿಷ್ಟ ಸಾಧನೆಗೈದ ಸುಬೋಧ ಪ್ರೌಢ ಶಾಲೆಯ ವಿದ್ಯಾರ್ಥಿನಿ ಜೀವಿತಾ ಕೆ.ಎಸ್. ರವರನ್ನು  ವೇದಿಕೆಯಲ್ಲಿರುವ ಗಣ್ಯರ ಸಮ್ಮುಖದಲ್ಲಿ ಅಭಿನಂದನಾ ಪತ್ರ ಓದಿ, ಶಾಲು ಹೊದಿಸಿ, ಮಾಲೆ ಹಾಕಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪಾಣಾಜೆ ಗ್ರಾಮ ಪಂಚಾಯತ್‌ನ ಅಧ್ಯಕ್ಷ ನಾರಾಯಣ ಪೂಜಾರಿ, ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಹರ್ಷದ್ ವರ್ಕಾಡಿ, ಸಂಜೀವ ಮಠಂದೂರು, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷ ಮಿಥುನ್ ರೈ, ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವೀಂದ್ರ ಭಂಡಾರಿ, ಸೀತಾರಾಮ ಕೈಕಾರ, ಪುತ್ತೂರು ಕೆ.ಡಿ.ಪಿ ಸದಸ್ಯ ಕೃಷ್ಣ ಪ್ರಸಾದ್ ಆಳ್ವ, ಮೊಯಿದಿನ್ ಹರ್ಷದ್ ದರ್ಬೆ, ಸದಾಶಿವ ರೈ ಸೂರಂಬೈಲು, ಜಗನ್ಮೋಹನ ರೈ ಕೆದಂಬಾಡಿ, ಜಗನ್ಮೋಹನ ರೈ ಸೂರಂಬೈಲು, ಶಿವಾನಂದ ಮಣಿಯಾಣಿ ನಡುಕಟ್ಟ, ಮಲ್ಲಿಕಾ ಪ್ರಶಾಂತ್ ಪಕ್ಕಳ ಮಲಾರ್ ಬೀಡು, ರಾಜೇಶ್ ಮಣಿಯಾಣಿ ಎ.ಆರ್, ವಿದ್ಯಾಶ್ರೀ ಟ್ರಸ್ಟ್‌ನ ಅಧ್ಯಕ್ಷ ಚಂದ್ರ ಎ ಬಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಪ್ರಾರ್ಥನೆಯನ್ನು ಕಾವ್ಯಶ್ರೀ ತಂಡ ನೆರವೇರಿಸಿದರು. ಶ್ರೀಪ್ರಸಾದ್ ನಡುಕಟ್ಟ ಸ್ವಾಗತಿಸಿ, ಪ್ರಕಾಶ್ ಕುಲಾಲ್  ವಂದಿಸಿದರು. ರಾಜೀವ್ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.

vidyashree2 4 vidyashree 35 vidyashree 1222

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.