Breaking News

ಫೆ.1 ರಿಂದ 6: ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯದ ಮತ್ತು ದೈವಸ್ಥಾನದ ವರ್ಷಾವಧಿ ಉತ್ಸವ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ಇರ್ದೆ ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯದ ವರ್ಷಾವಧಿ ಉತ್ಸವ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಫೆ.1 ರಿಂದ ಆರಂಭವಾಗಲಿದೆ.

ಫೆ.1ರಂದು ಅಪರಾಹ್ನ ಬಲಿವಾಡು, ಹಸಿರುವಾಣಿ ಶೇಖರಣೆ, ದೇವತಾ ಪ್ರಾರ್ಥನೆ, ಉಗ್ರಾಣ ಮುಹೂರ್ತ, ರಾತ್ರಿ ಅತ್ತಾಳ ಪೂಜೆ, ಮಹಾಪೂಜೆ ನಡೆಯಲಿದೆ.

ಫೆ.2ರಂದು ಬೆಳಿಗ್ಗೆ ಪೂಜೆ, ಪ್ರಾರ್ಥನೆ, ಬೆಂದ್ರ್‌ತೀರ್ಥ ಪೂಜೆ, ಗಣಪತಿ ಹವನ, ಕಲಶಾಭಿಷೇಕ, ಮಧ್ಯಾಹ್ನ ಗಂಟೆ: 12ರಿಂದ ಪಲ್ಲಪೂಜೆ, ಮಹಾಪೂಜೆ, ಶ್ರೀ ದೇವರ ಬಲಿ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಕಾರ್ತಿಕ ಪೂಜೆ, ಮಹಾಪೂಜೆ, ದೇವಾಲಯದ ಬೆಂದ್ರ್‌ತೀರ್ಥಕ್ಕೆ ಸವಾರಿ, ಭೂತ ಬಲಿ ಉತ್ಸವ, ಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ, ಫೆ.3ರಂದು ಬೆಳಿಗ್ಗೆ ಗಂಟೆ 9 ರಿಂದ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಹಾಪೂಜೆ, ಸಂಜೆ ದೈವಗಳ ತಂಬಿಲ ನಂತರ ವೇದಿಕೆ ಕದಿಕೆ ಚಾವಡಿಯಲ್ಲಿ ಮಕರ ತೋರಣ ರಾತ್ರಿ ಗಣಪತಿಗೆ ರಂಗಪೂಜೆ, ಶ್ರೀದುರ್ಗಾಪರಮೇಶ್ವರಿಗೆ ಹೂವಿನ ಪೂಜೆ ನಂತರ ರಂಗಪೂಜೆ, ದೈವಗಳ ಭಂಡಾರ ಕದಿಕೆ ಚಾವಡಿಗೆ ಆಗಮನ.

ಫೆ.4 ನೇ ಗುರುವಾರ ಬೆಳಿಗ್ಗೆ ಕಿನ್ನಿಮಾಣಿ ದೈವದ ನೇಮ,ಫೆ.5 ರಂದು ಬೆಳಿಗ್ಗೆ ಪೂಮಾಣಿ ದೈವದ ನೇಮ ರಾಜನ್‌ದೈವದ ನೇಮ, ಫೆ.6ರಂದು ಬೆಳಿಗ್ಗೆ ಮಲರಾಯ ದೈವ ನೇಮ ನಂತರ ರಾಜನ್ ದೈವದ ನೇಮ ನಡೆಯಲಿದೆ.

ಫೆ.2ರಂದು ಬೆಳಿಗ್ಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ಬಲೆತೆಲಿಪಾಲೆ’ ಖ್ಯಾತಿಯ ದೀಪಕ್ ರೈ ಪಾಣಾಜೆ ಸಾರಥ್ಯದ ಮಸ್ಕಿರಿ ಕುಡ್ಲ ಇವರಿಂದ ‘ತೆಲಿಕೆ ಬಂಜಿನಿಲಿಕೆ’ ಫೆ.3ರಂದು ಸಂಜೆ “ಹರಿಕಥಾ ಕಾಲಕ್ಷೇಪ” ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.