ಮಹೀಂದ್ರ & ಮಹೀಂದ್ರ ಕಂಪೆನಿಯ ಅಧಿಕೃತ ಡೀಲರ್ ಕರ್ನಾಟಕ ಏಜೇನ್ಸೀಸ್‌ನ ನೂತನ ಶೋರೂಂ, ವರ್ಕ್‌ಶಾಪ್ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
ಮಹೀಂದ್ರ ಮತ್ತು ಮಹೀಂದ್ರ ಲಿಮಿಟೆಡ್‌ನ ಕಸ್ಟಮರ್ ಕೇರ್‌ನ ಉಪಾಧ್ಯಕ್ಷ ಸಂದೀಪ್ ದೋಂಡ್‌ರವರಿಂದ ನೂತನ ವರ್ಕ್‌ಸಾಪ್ ಉದ್ಘಾಟನೆ ಮಹೀಂದ್ರ ಮತ್ತು ಮಹೀಂದ್ರ ಲಿಮಿಟೆಡ್‌ನ ಕಸ್ಟಮರ್ ಕೇರ್‌ನ ಉಪಾಧ್ಯಕ್ಷ ಸಂದೀಪ್ ದೋಂಡ್‌ರವರಿಂದ ನೂತನ ವರ್ಕ್‌ಸಾಪ್ ಉದ್ಘಾಟನೆ
ಮಹೀಂದ್ರ ಮತ್ತು ಮಹೀಂದ್ರ ಲಿಮಿಟೆಡ್‌ನ ಕಸ್ಟಮರ್ ಕೇರ್‌ನ ಉಪಾಧ್ಯಕ್ಷ ಸಂದೀಪ್ ದೋಂಡ್‌ರವರಿಂದ ನೂತನ ವರ್ಕ್‌ಶಾಪ್ ಉದ್ಘಾಟನೆ

ಪುತ್ತೂರು : ಇಲ್ಲಿನ ದರ್ಬೆ ಪತ್ರಾವೋ ಸರ್ಕಲ್ ಬಳಿ ಮತ್ತು ಮಂಜಲ್ಪಡ್ಪು ಕೊಂಕಣ್ ಗ್ಯಾಸ್ ಬಳಿ ವ್ಯವಹರಿಸುತ್ತಿದ್ದ ಮಹೀಂದ್ರ ಮತ್ತು ಮಹೀಂದ್ರ ಕಂಪೆನಿಯ ಅಧಿಕೃತ ಡೀಲರ್ ಆಗಿರುವ ಕರ್ನಾಟಕ ಏಜೆನ್ಸೀಸ್ ಶೋರೂಂ ಮತ್ತು ವರ್ಕ್‌ಶಾಪ್ ಇಲ್ಲಿನ ಮುಕ್ರಂಪಾಡಿ ಇಂಡಸ್ಟ್ರೀಯಲ್ ಸ್ಥಳದಲ್ಲಿ ಸ್ಥಾಪಿಸಿರುವ ನೂತನ ಕಟ್ಟಡದಲ್ಲಿ ಜ.28ರಂದು ಒಂದೇ ಕಡೆ ಉದ್ಘಾಟನೆಗೊಂಡಿತು.

ಪುತ್ತೂರಿಗೆ ಒಂದು ಶಕ್ತಿ ಬಂದಂತಾಗಿದೆಸಂದೀಪ್ ದೋಂಡ್:  ಮಹೀಂದ್ರ ಮತ್ತು ಮಹೀಂದ್ರ ಲಿಮಿಟೆಡ್‌ನ ಕಸ್ಟಮರ್ ಕೇರ್‌ನ ಉಪಾಧ್ಯಕ್ಷ ಸಂದೀಪ್ ದೋಂಡ್‌ರವರು ನೂತನ ವರ್ಕ್‌ಶಾಪ್‌ನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಬಳಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕರ್ನಾಟಕ ಏಜೆನ್ಸೀಸ್‌ನ ನೂತನ ವರ್ಕ್‌ಶಾಪ್ ಮತ್ತು ಶೋರೂಂ ನ ಮೂಲಕ ಪುತ್ತೂರಿಗೆ ಒಂದು ಶಕ್ತಿ ಬಂದಂತಾಗಿದೆ. ನೂತನ ಶೋರೂಂನ ಮೂಲಕ ಹೊಸ ಹೊಸ ಮಹೀಂದ್ರಾ ವಾಹನಗಳು ಗ್ರಾಹಕರಿಗೆ ಪರಿಚಯವಾಗಲಿ ಜೊತೆಗೆ ಈ ಭಾಗದ ಗ್ರಾಹಕರಿಗೆ ಉತ್ತಮ ದರ್ಜೆಯ ಸೇವಾ ಸೌಲಭ್ಯಗಳು ದೊರಕುವಂತಾಗಲಿ ಎಂದು ಶುಭಹಾರೈಸಿದರು.

ಪ್ರಾಮಾಣಿಕ ಸೇವೆಗೆ ಆದ್ಯತೆಯನ್ನು ನೀಡಿಕೆ. ರವಿ: ಮಹೀಂದ್ರ ಮತ್ತು ಮಹೀಂದ್ರ ಲಿಮಿಟೆಡ್‌ನ ದಕ್ಷಿಣ ವಲಯದ ಕಸ್ಟಮರ್ ಕೇರ್‌ನ ಮುಖ್ಯಸ್ಥ ಕೆ. ರವಿ ಯವರು ನೂತನ ಶೋರೂಂ ನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ನೂತನ ಶೋರೂಂ, ವರ್ಕ್‌ಶಾಪ್ ಆರಂಭವಾಗುವುದರ ಮೂಲಕ ಕರ್ನಾಟಕ ಏಜೆನ್ಸೀಯ ಒಳ್ಳೆಯ ಪ್ರಯಾಣ ಆರಂಭವಾಗಿದೆ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಾಮಾಣಿಕ ಸೇವೆಗೆ ಆದ್ಯತೆಯನ್ನು ನೀಡಿ ಎಂದು ಹೇಳಿದರು.

ಗ್ರಾಹಕರ ಅನುಕೂಲಕ್ಕೆ ಪೂರಕವಾಗಿದೆಪ್ರತ್ಯುಷ್ : ಮಹೀಂದ್ರ ಮತ್ತು ಮಹೀಂದ್ರ ಲಿಮಿಟೆಡ್‌ನ ಕಸ್ಟಮರ್ ಕೇರ್‌ನ ಕರ್ನಾಟಕದ ಮ್ಯಾನೇಜರ್ ಪ್ರತ್ಯುಷ್ ಬೋಸ್ ಮಾತನಾಡಿ, ಕರ್ನಾಟಕ ಏಜೆನ್ಸೀಯ ನೂತನ ಶೋರೂಂ ಮತ್ತು ವರ್ಕ್‌ಶಾಪ್ ಗ್ರಾಹಕರ ಅನುಕೂಲಕ್ಕೆ ಪೂರಕವಾಗಿದೆ, ಮುಂದಿನ ದಿನಗಳಲ್ಲಿ ಕರ್ನಾಟಕ ಏಜೇನ್ಸೀಯು ಒಳ್ಳೆಯ ಫಲಿತಾಂಶವನ್ನು ತಂದುಕೊಡಲಿದೆ ಎಂದು ಹೇಳಿದರು.

ಕಾರಿನ ಕೀ ಹಸ್ತಾಂತರ: ಈ ಸಂದರ್ಭದಲ್ಲಿ ಮಹೀಂದ್ರ ಮತ್ತು ಮಹೀಂದ್ರ ಲಿಮಿಟೆಡ್‌ನ ಕಸ್ಟಮರ್ ಕೇರ್‌ನ ಉಪಾಧ್ಯಕ್ಷ ಸಂದೀಪ್ ದೋಂಡ್ ಹಾಗೂ ದಕ್ಷಿಣ ವಲಯದ ಕಸ್ಟಮರ್ ಕೇರ್‌ನ ಮುಖ್ಯಸ್ಥ ಕೆ. ರವಿರವರು ಗ್ರಾಹಕರಾದ ಡಾ. ಸದಾಶಿವ ರಾವ್ ಮತ್ತು ಎನ್.ಎಸ್.ನಿರಂಜನ್ ರಾವ್‌ರವರಿಗೆ ಮಹೀಂದ್ರ ಕಂಪೆನಿಯ ನೂತನ ಕೀಯನ್ನು ಹಸ್ತಾಂತರಿಲಾಯಿತು.

ರೆ.ಫಾ.ಆಲ್ಫ್ರೆಡ್‌ರವರಿಂದ ಆಶೀರ್ವಚನ: ಸಭಾ ಕಾರ್ಯಕ್ರಮದ ಮೊದಲು ಮಾದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ರೆ.ಫಾ.ಆಲ್ಫ್ರೆಡ್ ಜಾನ್ ಪಿಂಟೋರವರು ಪವಿತ್ರ ಜಲವನ್ನು ಸಿಂಪಡಿಸಿ ಆಶೀರ್ವದಿಸಿದರು.

ವೇದಿಕೆಯಲ್ಲಿ ಕರ್ನಾಟಕ ಏಜೆನ್ಸೀಸ್‌ನ ಆಡಳಿತ ಪಾಲುದಾರ ರತನ್ ರೊಡ್ರಿಗಸ್.  ಕರ್ನಾಟಕ ಏಜೆನ್ಸೀಸ್‌ನ ಪುತ್ತೂರಿನ ಬ್ರಾಂಚ್ ಮ್ಯಾನೇಜರ್ ಸುನೀಲ್ ಮಸ್ಕರೇನಸ್ ಉಪಸ್ಥಿತರಿದ್ದರು. ಕರ್ನಾಟಕ ಏಜೆನ್ಸೀಸ್‌ನ ಆಡಳಿತ ಪಾಲುದಾರ ಆರ್.ಸಿ ರೊಡ್ರಿಗಸ್ ವಂದಿಸಿ, ಕರ್ನಾಟಕ ಏಜೆನ್ಸೀಸ್‌ನ ಮಾರಾಟ ವಿಭಾಗದ ಮುಖ್ಯಸ್ಥ ಫೋರ್ಚುನೇಟ್ ಸೆರಾವೋ ಕಾರ್ಯಕ್ರಮ ನಿರ್ವಹಿಸಿದರು. ಮಂಗಳೂರು ಕರ್ನಾಟಕ ಏಜೇನ್ಸೀಸ್‌ನ ಮಂಗಳೂರು ಬ್ರಾಂಚ್‌ನ ಮಾರಾಟ ವಿಭಾಗದ ಮುಖ್ಯಸ್ಥೆ ಪ್ರೆಸಿಲ್ಲಾ ಪಿಂಟೋ, ಸರ್ವೀಸ್ ವಿಭಾಗದ ಮುಖ್ಯಸ್ಥ ದಿನಕರ್ ಶಾನುಭೋಗ್, ಸ್ಪೇರ್ ಪಾರ್ಟ್ಸ್ ವಿಭಾಗದ ಮುಖ್ಯಸ್ಥ ಮಾಧವ, ಎಕೌಂಟ್ಸ್ ಮ್ಯಾನೇಜರ್ ರಾಜ್‌ಕುಮಾರ್, ಸೇಲ್ಸ್ ಮ್ಯಾನೇಜರ್ ಲ್ಯಾನ್ಸಿ ರೇಗೋ ಮತ್ತು ಕರ್ನಾಟಕ ಏಜೇನ್ಸೀಸ್‌ನ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮಹೀಂದ್ರ ಮತ್ತು ಮಹೀಂದ್ರ ಲಿಮಿಟೆಡ್‌ನ ದಕ್ಷಿಣ ವಲಯದ ಕಸ್ಟಮರ್ ಕೇರ್‌ನ ಮುಖ್ಯಸ್ಥ ಕೆ. ರವಿ ಯವರಿಂದ ನೂತನ ಶೋರೂಂ ಉದ್ಘಾಟನೆ
ಮಹೀಂದ್ರ ಮತ್ತು ಮಹೀಂದ್ರ ಲಿಮಿಟೆಡ್‌ನ ದಕ್ಷಿಣ ವಲಯದ ಕಸ್ಟಮರ್ ಕೇರ್‌ನ ಮುಖ್ಯಸ್ಥ ಕೆ. ರವಿ ಯವರಿಂದ ನೂತನ ಶೋರೂಂ ಉದ್ಘಾಟನೆ
ಸಭಾ ಕಾರ್ಯಕ್ರಮದ ಉದ್ಘಾಟನೆ
ಸಭಾ ಕಾರ್ಯಕ್ರಮದ ಉದ್ಘಾಟನೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.