ಸಂಗೀತ ಹೃದಯವನ್ನು ಅರಳಿಸಬೇಕು : ವಿದ್ವಾನ್ ರಾಮಕೃಷ್ಣ ಭಟ್

Puttur_Advt_NewsUnder_1
Puttur_Advt_NewsUnder_1

News Photo - Ramakrishna Bhat

ಪುತ್ತೂರು: ಭಕ್ತಿ ಸಂಗೀತದ ಮೂಲ. ಸಂಗೀತ ಮನುಷ್ಯನನ್ನು ಶಾಂತಗೊಳಿಸಬೇಕೇ ಹೊರತು ಉದ್ರೇಕಿಸಬಾರದು. ಸಂಗೀತವು ಆತ್ಮ ಸಂತೋಷವನ್ನು, ಆತ್ಮೋಲ್ಲಾಸವನ್ನು ನೀಡುತ್ತದೆ. ತನ್ಮೂಲಕ ಹೃದಯವನ್ನು ಅರಳಿಸುವ ಕಾರ್ಯವನ್ನು ಮಾಡುತ್ತದೆ. ಪ್ರಸ್ತುತ ಕಾಲದಲ್ಲಿ ಸಂಗೀತಕ್ಕೆ ವೇದಿಕೆಗಳು ಲಭ್ಯವಾಗುತ್ತಿದ್ದು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಈಶ್ವರಮಂಗಲ ಗಜಾನನ ವಿದ್ಯಾಸಂಸ್ಥೆಯ ಅಧ್ಯಾಪಕ ಮತ್ತು ಸಂಗೀತ ವಿದ್ವಾನ್ ರಾಮಕೃಷ್ಣ ಭಟ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ವಿವೇಕಾನಂದ ಜಯಂತಿಯ ಪ್ರಯುಕ್ತ ಜ.26 ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸಾಹಿತ್ಯ – ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಒಬ್ಬ ಸಂಗೀತಗಾರ ಒಂದೇ ಹಾಡನ್ನು ಬೇರೆ ಬೇರೆ ವೇದಿಕೆಯಲ್ಲಿ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ರಾಗದಲ್ಲಿ ಹಾಡಬಲ್ಲ ಸಾಮರ್ಥ್ಯವನ್ನು ಪಡೆದಿರುತ್ತಾನೆ. ಸಂಗೀತವನ್ನು ನಮ್ಮ ಪೂರ್ವಜರು ಪ್ರಕೃತಿಯಿಂದ ನೇರವಾಗಿ ಪಡೆದುಕೊಂಡಿರುತ್ತಾರೆ. ನಮ್ಮ ಪೂರ್ವಿಕರು ಎಲ್ಲಾ ಕಲೆಗಳಲ್ಲಿಯೂ ದೈವಿಕ ಅಂಶವನ್ನು ಗುರುತಿಸಿದ್ದರು. ಆದರೆ ಇಂದು ಎಲ್ಲಾ ಕಲೆಗಳು ವ್ಯಾಪರಿಕರಣವಾಗುತ್ತಿರುವಂತೆ ಸಂಗೀತವೂ ವ್ಯಾಪರಿಕರಣವಾಗುತ್ತಿರುವುದನ್ನು ಹೇರಳವಾಗಿ ಕಾಣಬಹುದು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥ ಶಂಕರ ನಾರಾಯಣ ಭಟ್ ಮಾತನಾಡಿ ಸಾಹಿತ್ಯ ಮತ್ತು ಸಾಂಸೃತಿಕ ಚಟುವಟಿಕೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಮನೋಬಲ ಮತ್ತು ಕೌಶಲ್ಯತೆ ಉಳಿದ ವಿದ್ಯಾಥಿಗಳಿಗಿಂತ ಹೆಚ್ಚಿರುತ್ತದೆ. ಮಾತ್ರವಲ್ಲದೇ ಸಂವಹನ ಕಲೆಯನ್ನು, ಮಾತುಕತೆಯ ವೈಖರಿಯನ್ನು ಕಳಿಯುತ್ತಾರೆ. ಔದ್ಯೋಗಿಕ ರಂಗದಲ್ಲಿಯೂ ಉಳಿದವರಿಗಿಂತ ಒಂದು ಹೆಜ್ಜೆ ಮುಂದಿರುತ್ತಾರೆ ಎಂದು ತಿಳಿಸಿದರು.

ಸಂಸ್ಕೃತ ವಿಭಾಗದ ಉಪನ್ಯಾಸಕ ಡಾ. ಎಂ. ಕೆ. ಶ್ರೀಶ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕ ಹಾಗೂ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ನರಸಿಂಹ ಭಟ್ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಡಾ. ರೋಹಿನಾಕ್ಷ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.