ಕರೋಪಾಡಿ ವಗೆನಾಡು ಶ್ರೀ ಸುಬ್ರಾಯದೇವಸ್ಥಾನದಲ್ಲಿ ಶ್ರೀ ಗಣಪತಿ ಸಹಿತ ಶ್ರೀ ಸುಬ್ರಾಯದೇವರ ಬಿಂಬಗಳ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕೋತ್ಸವ-ಧಾರ್ಮಿಕ ಸಭೆ

Puttur_Advt_NewsUnder_1
Puttur_Advt_NewsUnder_1

VIL_27 JAN_4

ವಿಟ್ಲ: ದೇವರು ನೀಡಿದನ್ನು ದೇವರಿಗೆ ಸೇವೆ ರೂಪದಲ್ಲಿ ನೀಡಿದಾಗ ದೇವರ ಪ್ರೀತಿಗೆ ಪಾತ್ರರಾಗಲು ಸಾಧ್ಯವಿದೆ. ನಾವು ಗಳಿಸಿದ ಸಂಪತ್ತು ನಮಗೆ ಸಂತೋಷ ನೆಮ್ಮದಿ ನೀಡುವಂತಿರಬೇಕು. ಧಾರ್ಮಿಕ ಸೇವೆಗಳು ಧರ್ಮ ಸಮ್ಮತವಾಗಿ ನಡೆದಾಗ ಎಲ್ಲಕಡೆ ಶಾಂತಿ ನೆಲೆಸಲು ಸಾಧ್ಯವಿದೆ ಎಂದು ಕೊಂಡೆಯೂರು ಶ್ರೀ ನಿತ್ಯಾನಂದಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

ಅವರು ಕರೋಪಾಡಿ ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಶ್ರೀ ಗಣಪತಿ ಸಹಿತ ಶ್ರೀ ಸುಬ್ರಾಯ ದೇವರ ಬಿಂಬಗಳ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕೋತ್ಸವ ಅಂಗವಾಗಿ ದೇವ ಸೇನಾನಿ ಚಾವಡಿಯಲ್ಲಿ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು.

ಧರ್ಮಕಾರ್ಯದಲ್ಲಿ ಸಜ್ಜನರು ಭಾಗವಹಿಸಿದಾಗ ಅಧರ್ಮವನ್ನು ದೂರವಾಗಿಸಬಹುದು. ಮಾರುಕಟ್ಟೆಯಲ್ಲಿ ಸಿಗದ ವಿಚಾರ ದೇವಸ್ಥಾನದಲ್ಲಿ ದೇವರ ಮೂಲಕ ನಮಗೆ ಸಿಗುತ್ತದೆ. ದೇವಾಲಯಗಳು ಸಂಸ್ಕಾರ ಶುದ್ದೀಕರಣದ ಕೇಂದ್ರವಾಗಬೇಕಾಗಿದೆ. ದೇವ ಸೇವಾನಿ ನಮ್ಮ ದೇಹದೊಳಗೆ ಸೇರಿಕೊಂಡು ಮಾರ್ಗದರ್ಶನ ಮಾಡಿದಾಗ ಲೋಕ ಉತ್ತಮವಾಗಿ ನಡೆಯಲು ಸಾಧ್ಯವಿದೆ ಎಂದು ತಿಳಿಸಿದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಉಪಸ್ಥಿತರಿದ್ದರು.

ಧರ್ಮ ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಎಂ ಬಿ ಪುರಾಣಿಕ್ ಮಾತನಾಡಿ ಮನುಷ್ಯ ಎಷ್ಟು ಅಭಿವೃದ್ಧಿಯತ್ತ ನಡೆದರೂ ಪಕೃತಿಯ ವಿರುದ್ಧವಾಗಿ ಬದುಕಲು ಸಾಧ್ಯವಿಲ್ಲ. ಪ್ರತಿಯೊಂದು ಜೀವ ಚರಾಚರಗಳಿಗೂ ಭೂಮಿಯಲ್ಲಿ ಬದುಕುವ ಹಕ್ಕಿದೆ. ದೇಗುಲಗಳ ಮೂಲಕ ವಿಗಟಿತ ಸಮಾಜವನ್ನು ಒಗ್ಗೂಡಿಸಲು ಸಾಧ್ಯವಿದೆ. ಎಲ್ಲರಿಗೂ ಸಮಾನವಾಗಿ ಬದುಕಲು ಹಿಂದೂಧರ್ಮ ಅವಕಾಶ ನೀಡಿದೆ. ಹಿಂದುಗಳಿಗೆ ಭಾರತ ಮಾತ್ರ ಧರ್ಮ ಹಾಗೂ ಕರ್ಮ ಭೂಮಿಯಾಗಿದೆ. ಹಿಂದುಗಳು ಅಲ್ಪಸಂಖ್ಯಾತರಾಗುವ ದಿನ ದೂರವಿಲ್ಲ, ಅದರಿಂದ ನಾವೇ ಪರಕೀಯರಾಗುವ ಸಾಧ್ಯತೆಇದ್ದು, ಒಟ್ಟಾಗುವ ಅವಶ್ಯಕತೆ ಇದೆ. ಹಿಂದೂಧರ್ಮ ಒಳಿದರೆ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ತಿಳಿಸಿದರು.

ಧನಲಕ್ಷ್ಮೀ ಉದ್ಯಮ ಸಮೂಹ ಸಂಸ್ಥೆಯ ಶ್ರೀಪತಿ ಭಟ್ ಮೂಡಬಿದ್ರೆ, ಪುತ್ತೂರು ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ನಾಯ್ಕ, ಮಂಗಳೂರು ಯುವಜನ ಒಕ್ಕೂಟ ಬಂಟರ ಮಾತೃ ಸಂಘ ಗೌರವಾಧ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ, ಧರ್ಮಜಾಗರಣ ಪ್ರತಿಷ್ಠಾನ ಅಧ್ಯಕ್ಷ ನಾರಾಯಣ ಭಟ್, ದೇರಳಕಟ್ಟೆ ಶ್ರೀ ಅಯ್ಯಪ್ಪ ದೇವಸ್ಥಾನ ಅಧ್ಯಕ್ಷ ಸೀತಾರಾಮ ಶೆಟ್ಟಿ ನೆತ್ತಿಲ ಬಾಳಿಕೆ, ಮಂಗಳೂರು ಶ್ರೀ ಕಾಳಿಕಾಂಬ ವಿನಾಯಕ ದೇವಸ್ಥಾನ ರಥಬೀದಿ ಆಡಳಿತ ಮುಕ್ತೇಸರ ಲೋಕೇಶ್‌ ಆಚಾರ್ಯ, ದಕ್ಷಿಣಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಒ ಶ್ಯಾಮ್ ಭಟ್‌ ಒಡಿಯೂರು, ಕಾರ್ಯದರ್ಶಿ ಅರುಣ್ ಪಕ್ಕಳ ಕಳಾಯಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ ವಿಘ್ನೇಶ್ವರ ಭಟ್ ಅನಿಯಾಲಕೋಡಿ, ಉಪಾಧ್ಯಕ್ಷ ಪನೆಯಡ್ಕ ಲಿಂಗಪ್ಪಗೌಡ, ಜಿ ಕೆ ಭಟ್ ಸೇರಾಜೆ ಉಪಸ್ಥಿತರಿದ್ದರು.

ರೇಣುಕಾ ಎಸ್ ರೈ ಪ್ರಾರ್ಥಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯದರ್ಶಿ ಮಾಧವ ನಾಯ್ಕ ಪಾಲಿಗೆ ವಂದಿಸಿದರು.ಕಾರ್ಯದರ್ಶಿ ರಘುನಾಥ ಶೆಟ್ಟಿ ಪಟ್ಲಗುತ್ತುಕಾರ್ಯಕ್ರಮ ನಿರೂಪಿಸಿದರು.

ಗೌರವ ಸಮರ್ಪಣೆ: ನಾಡು ನುಡಿಗಾಗಿ ಸೇವೆ ಸಲ್ಲಿಸಿದ ದೇವಸ್ಯಕೊರಗಪ್ಪ ಶೆಟ್ಟಿ, ಮಹಾಲಿಂಗ ಮೂಲ್ಯ ಕಳಾಯಿ, ಈಶ್ವರಆಚಾರ್ಯ ಪಟ್ಲ, ಕುಂಣ್ಣ ಪುರುಣ ಮಿತ್ತನಡ್ಕ, ರಾಮಣ್ಣಗೌಡ ಪೊನ್ನಂಗಳ, ಐತ್ತ ನಲಿಕೆ ಪಾಲಿಗೆ ಅವರನ್ನುಗೌರವಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.