ಪಂಜೋಡಿ ದಿ|ವಿಶ್ವನಾಥ ಗೌಡರ ಶ್ರದ್ದಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1

shraddanjali sabheಕಡಬ: ಜ.8 ರಂದು ನಿಧನರಾದ 102 ನೆಕ್ಕಿಲಾಡಿ ಗ್ರಾಮದ ಪಂಜೋಡಿ ನಿವಾಸಿ ಎಸ್.ಕೆ ವಿಶ್ವನಾಥ ಗೌಡರಿಗೆ ಜ.24 ರಂದು ಮೃತರ ಮನೆಯಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಕಾರ‍್ಯಕ್ರಮ ನಡೆಯಿತು. ದಿ|ವಿಶ್ವನಾಥ ಗೌಡರ ಭಾವಚಿತ್ರಕ್ಕೆ ನುಡಿನಮನ ಸಲ್ಲಿಸಿದ ಕಡಬ ಸಿಎ ಬ್ಯಾಂಕಿನ ಅಧ್ಯಕ್ಷ ಸೀತಾರಾಮ ಗೌಡರವರು ಸಮಾಜದ ಹಿತವನ್ನು ಬಯಸಿದ ಮೇರು ವ್ಯಕ್ತಿ ಪ್ರಗತಿಪರ ಕೃಷಿಕರಾದ ವಿಶ್ವನಾಥ ಗೌಡರು ಜೀವನದಲ್ಲಿ ಸತ್ಯ, ಧರ್ಮದಿಂದ ಬಾಳಿ ಅನ್ಯಾಯಕ್ಕೆ ತಲೆಬಾಗದೆ ಧೈರ್ಯದಿಂದ ಸ್ನೇಹಮಯ ಬದುಕನ್ನು ಸಾಧಿಸಿದ್ದಾರೆ. ಇವರ ಅಗಲುವಿಕೆಯು ಎಲ್ಲರಿಗೂ ದುಃಖ ತಂದಿದೆ. ಆದರೆ ಅವರ ಅಗಲುವಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ನಮಗೂ ಅವರ ಕುಟುಂಬಸ್ಥರಿಗೂ ದೇವರು ನೀಡಲಿ ಎಂದು ಪ್ರಾರ್ಥಿಸಿದರು.

ನಿವೃತ್ತ ಮುಖ್ಯಗುರುಗಳಾದ ಜನಾರ್ಧನ ಗೌಡ ಪಣೆಮಜಲು ರವರು ನುಡಿನಮನ ಸಲ್ಲಿಸಿ ದೈವಾಧೀನರಾದ ವಿಶ್ವನಾಥ ಗೌಡರು ನಮ್ಮ ಒಬ್ಬ ಕುಟುಂಬದ ಸದಸ್ಯರಿದ್ದಂತೆ. ನಾವು ಒಟ್ಟಿಗೆ ಬೆಳೆದವರು. ಅವರು ಒಬ್ಬ ಅದ್ಭುತವಾದ ಯಾವತ್ತೂ ಮರೆಯಲಾಗದ ವ್ಯಕ್ತಿಯಾಗಿದ್ದು ಹೃದಯವಂತಿಕೆಯುಳ್ಳವರಾಗಿದ್ದರು. ಅವರ ಅಗಲುವಿಕೆ ನಮಗೆಲ್ಲರಿಗೂ ಸಹಿಸಲಾಗದಿದ್ದರೂ ಅವರ ಆದರ್ಶ ಗುಣಗಳು ನಮ್ಮಲ್ಲಿ ಅಡಕವಾಗಲಿ ಎಂದು ಪ್ರಾರ್ಥಿಸಿದರು.

ಕೆವಿಜಿ ವಿದ್ಯಾಸಂಸ್ಥೆಯ ಉಪಪ್ರಾಂಶುಪಾಲರಾದ ಶಿವರಾಮ ಹೊಸವಳಿಕೆಯವರು ನುಡಿನಮನ ಸಲ್ಲಿಸಿ ಇಡೀ ಸಮಾಜದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ ವಿಶ್ವನಾಥ ಗೌಡರು ನಮ್ಮನ್ನಗಲಿದರು ಅವರ ಒಳ್ಳೆಯ ಗುಣಗಳು ಸಮಾಜಕ್ಕೆ ಮಾದರಿಯಾಗಲಿ ಎಂದರು.

ಕಡಬ ಸಿಎ ಬ್ಯಾಂಕಿನ ನಿರ್ದೇಶಕರಾದ ಸುಂದರ ಗೌಡ ಮಂಡೇಕರ, ಪೂವಪ್ಪ ಗೌಡ, ಪದವು ಶಾಲಾ ಮುಖ್ಯಗುರುಗಳಾದ ತಮ್ಮಯ್ಯ ಗೌಡ, ಕೆರ್ಮಾಯಿ ಶಾಲಾ ಮುಖ್ಯಶಿಕ್ಷಕ ತುಕಾರಾಮ ಗೌಡ, ಮರ್ದಾಳ ಗ್ರಾ.ಪಂ.ಮಾಜಿ ಅಧ್ಯಕ್ಷ ಜನಾರ್ಧನ ಗೌಡ ಪುತ್ತಿಲ, ಸದಸ್ಯ ದಾಮೋದರ ಗೌಡ ಡೆಪ್ಪುಣಿ, ನ್ಯಾಯವಾದಿ ಪ್ರಶಾಂತ್ ಪಂಜೋಡಿ, ನಿವೃತ್ತ ವಿಜಯ ಬ್ಯಾಂಕ್ ವ್ಯವಸ್ಥಾಪಕ ಕೇಶವ ಗೌಡ ಪುತ್ತಿಲ, ಶ್ರೀ ಕ್ಷೇ.ಧ.ಕಡಬ ವಲಯ ಒಕ್ಕೂಟದ ಅಧ್ಯಕ್ಷ ಗಣಪಯ್ಯ ಗೌಡ ಪಂಜೋಡಿ, ಉದ್ಯಮಿ ಮೋನಪ್ಪ ಗೌಡ ಪಂಜೋಡಿ, ನಿವೃತ್ತ ಸಿಎ ಬ್ಯಾಂಕ್ ಉಪಾಧ್ಯಕ್ಷ ಗೋಪಾಲ ಗೌಡ ಪಂಜೋಡಿ, ಗುಡ್ಡಪ್ಪ ಗೌಡ ಪಂಜೋಡಿ, ಶ್ರೀಧರ ಗೌಡ ಪಂಜೋಡಿ, ಕೇಶವ ಗೌಡ ಪಂಜೋಡಿ ಸೇರಿದಂತೆ ಕುಟುಂಬಸ್ಥರು, ಬಂಧುಬಳಗದವರು, ಹಿತೈಷಿಗಳು, ಅಭಿಮಾನಿಗಳು ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದಿ| ವಿಶ್ವನಾಥ ಗೌಡರ ಪುತ್ರರಾದ ಸರ್ವೋತ್ತಮ ಗೌಡ ಹಾಗೂ ಆದರ್ಶ ಗೌಡ ಎಲ್ಲರನ್ನು ಸ್ವಾಗತಿಸಿ ಬರಮಾಡಿಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.