11ನೇ ವಿಶ್ವ ಶ್ರೇಯಾಂಕಕ್ಕೆ ಪಿ.ವಿ.ಸಿಂಧು

Puttur_Advt_NewsUnder_1
Puttur_Advt_NewsUnder_1

ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಅಗ್ರ ಕ್ರಮಾಂಕದ ಷೆಟ್ಲರ್ ಪಿ.ವಿ. ಸಿಂಧು ಅವರು ವಿಶ್ವಮಟ್ಟದಲ್ಲಿ ೧೧ನೇ ಶ್ರೇಯಾಂಕಕ್ಕೆ ಏರಿದ್ದಾರೆ. ಜಾಗತಿಕ ಬ್ಯಾಡ್ಮಿಂಟನ್ ಒಕ್ಕೂಟವು(ಬಿಡಬ್ಲ್ಯೂಎಫ್) ಗುರುವಾರ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದ ಇನ್ನೊಬ್ಬ ಬ್ಯಾಡ್ಮಿಂಟನ್ ಪಟು ಸೈನಾ ನೆಹ್ವಾಲ್ ೨ನೇ ಶ್ರೇಯಾಂಕದಲ್ಲಿಯೇ ಮುಂದುವರೆದಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ ಮತ್ತು ಎಚ್.ಎಸ್. ಪ್ರಣಯ್ ಕ್ರಮವಾಗಿ ೯ ಮತ್ತು ೨೦ನೇ ಶ್ರೇಯಾಂಕ ಪಡೆದಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾ ಕೂಟದ ಚಾಂಪಿಯನ್ ಪರುಪಲ್ಲಿ ಕಶ್ಯಪ್ ಅವರೂ ೧೪ನೇ ಶ್ರೇಯಾಂಕಕ್ಕೆ ಏರಿದ್ದಾರೆ. ಮುಂಬೈ ಅಜಯ್ ಜಯರಾಂ ೪ ಸ್ಥಾನ ಹಿಂದೆ ಬಿದ್ದಿದ್ದು ೨೫ನೇ ಶ್ರೇಯಾಂಕ ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.