ದಾಖಲೆ ಬರೆದ ದೆಬೋರಾ ಹೆರಾಲ್ಡ್

Puttur_Advt_NewsUnder_1
Puttur_Advt_NewsUnder_1

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸೈಕ್ಲಿಂಗ್‌ಗೆ ಗೌರವ ತಂದಿಯುತ್ತಿರುವ ಯುವ ಸೈಕ್ಲಿಸ್ಟ್ ದೆಬೊರಾ ಹೆರಾಲ್ಡ್ ಇದೀಗ ೨೦೧೬ರ ಯೂನಿಯನ್ ಸೈಕ್ಲಿಸ್ಟ್ ಇಂಟರ್ ನ್ಯಾಷನಲ್ ಟ್ರ್ಯಾಕ್ ಸೈಕ್ಲಿಂಗ್ ವಿಶ್ವ ಚಾಂಪಿಯನ್ ಷಿಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯುವುದರೊಂದಿಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಸೈಕ್ಲಿಸ್ಟ್ ಎಂದು ದಾಖಲೆ ಬರೆದಿದ್ದಾರೆ. ಅಂಡಮಾನ್ ನಿಕೋಬಾರ್ ಮೂಲದ ೨೦ ವರ್ಷ ವಯಸ್ಸಿನ ದೆಬೋರಾ ಕಳೆದ ವರ್ಷ ನಡೆದಿದ್ದ ತೈವಾನ್ ಕಪ್ ಅಂತಾರಾಷ್ಟ್ರೀಯ ಕ್ಲಾಸಿಕ್‌ನಲ್ಲಿ ಐದು ಪದಕ ಪಡೆದಿದ್ದರು. ಈ ಪೈಕಿ ಮಹಿಳೆಯರ ಎಲೈಟ್ ವಿಭಾಗದಿಂದ ಚಿನ್ನದ ಪದಕವೂ ಸೇರಿತ್ತು. ಮೂರು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು. ಈ ಎಲ್ಲಾ ಸಾಧನೆಗಳಿಂದ ಅವರು ಗಳಿಸಿರುವ ಅಂಕಗಳ ಆಧಾರದ ಮೇಲೆ ಯುಸಿಐ ವಿಶ್ವ ಸೈಕ್ಲಿಂಗ್ ರೇಸ್‌ನಲ್ಲಿ ಪಾಲ್ಗೊಳ್ಳಲು ಅರ್ಹ ಸ್ಪರ್ಧಿ ಎಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.