ಕಿರಿಯರ ವಿಶ್ವಕಪ್: ಬಾಂಗ್ಲಾ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಜ.28ರಂದು ಆರಂಭಗೊಂಡ ಕಿರಿಯರ ವಿಶ್ವಕಪ್ ಕ್ರಿಕೆಟ್‌ನಲ್ಲಿ ಆತಿಥೇಯ ಬಾಂಗ್ಲಾದೇಶ, ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು ೪೯ ರನ್‌ಗಳಿಂದ ಮಣಿಸಿತು. ಎ ಗುಂಪಿನ ಪಂದ್ಯದಲ್ಲಿ ಗೆಲ್ಲಲು ೨೪೧ ರನ್ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ ೪೮.೪ ಓವರ್ ಗಳಲ್ಲಿ ೧೯೭ ರನ್ ಗಳಿಗೆ ಆಲೌಟ್ ಆಯಿತು. ಆರಂಭಿಕ ಲಿಯಾಮ್ ಸ್ಮಿತ್ ಶತಕದ ಹೊರತಾಗಿ ಮಿಕ್ಕವರು ಸ್ಥಿರ ಪ್ರದರ್ಶನದ ಅಭಾವ ಎದುರಿಸಿದರು. ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಬಾಂಗ್ಲಾದೇಶ ೫೦ ಓವರ್‌ಗಳಲ್ಲಿ ೭ ವಿಕೆಟ್ ಗೆ ೨೪೦ ರನ್ ಮಾಡಿತು. ನಜ್ಮುಲ್ ಹುಸೇನ್ ಅವರ ಅರ್ಧಶತಕದ ಜತೆಗೆ ಮೇಲಿನ ಕ್ರಮಾಂಕದಲ್ಲಿ ಪಿನಾಕ್ ಘೋಷ್ ಮತ್ತು ಜಾಯ್ ರಾಜ್ ಶೇಖ್ ೪೬ ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತಕ್ಕೆ ನೆರವಾದರು. ಬಾಂಗ್ಲಾ ಪರ ಅರ್ಧಶತಕ ಬಾರಿಸಿದ ನಜ್ಮುಲ್ ಹುಸೇನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೆಹೆದಿ ಹಸನ್ ಮಿರಾಜ್, ಮೊಹಮ್ಮದ್ ಶಫೀಯುದ್ದೀನ್ ತಲಾ ೩ ವಿಕೆಟ್ ಪಡೆದರೆ, ಸಯೀದ್ ಸರ್ಕಾರ್ ಹಾಗೂ ಸಾಲೆಹ್ ಅಹಮ್ಮದ್ ತಲಾ ೨ ವಿಕೆಟ್ ಪಡೆದು ಹರಿಣಗಳನ್ನು ನಿಯಂತ್ರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.