ನೆಲ್ಯಾಡಿ: ಸೈಂಟ್ ಅಲ್ಫೋನ್ಸಾ ಅಟೋಮೊಬೈಲ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

nelyady1.jpg2

ಪುತ್ತೂರು: ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಅಲ್ಫೋನ್ಸಾ ಚರ್ಚ್‌ನ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಸೈಂಟ್ ಅಲ್ಫೋನ್ಸಾ ಅಟೋಮೊಬೈಲ್ಸ್ ಜ.28ರಂದು ಶುಭಾರಂಭಗೊಂಡಿತು.

ನೆಲ್ಯಾಡಿ ಸೈಂಟ್ ಅಲ್ಫೋನ್ಸಾ ಚರ್ಚ್‌ನ ಸಹಾಯಕ ಧರ್ಮಗುರುಗಳಾದ ರೆ.ಫಾ.ಜೈಸನ್‌ರವರು ಉದ್ಘಾಟಿಸಿ ಶುಭಹಾರೈಸಿದರು. ಪುತ್ತೂರು ಧರ್ಮಪ್ರಾಂತ್ಯದ ರೆ.ಫಾ.ಕೋಶಿ ಕಾಕನಾಟ್ ಕೋರ್ ಎಪಿಸ್ಕೋಪಾರವರು ಶುದ್ಧೀಕರಣ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಮೇಥ್ಯು ತಯ್ಯಿಲ್, ಮೇಥ್ಯು ಚೆರುವಿಲಾರವರು ದೀಪ ಬೆಳಗಿಸಿದರು. ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಪಿ.ಪಿ.ವರ್ಗೀಸ್, ಡಿಸಿಸಿ ಸದಸ್ಯ ಕೆ.ಪಿ.ತೋಮಸ್, ಕೆಡಿಪಿ ಸದಸ್ಯ ಸರ್ವೋತ್ತಮ ಗೌಡ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ನೆಲ್ಯಾಡಿಯ ಉದ್ಯಮಿಗಳಾದ ಯು.ಪಿ.ವರ್ಗೀಸ್, ಮಂಜುನಾಥ ಕೈಕುರೆ, ನೆಲ್ಯಾಡಿಯ ಗ್ಯಾರೇಜ್ ಮಾಲಕರುಗಳಾದ ಶಶಿ, ತಾರನಾಥ, ಸುರೇಶ್, ರಾಧಾಕೃಷ್ಣ, ಅಮ್ಮವನ್, ನೆಲ್ಯಾಡಿ ರಾಯಲ್ ಮೆನ್ಸ್‌ವೇರ್‌ನ ಮಾಲಕರಾದ ರಂಜನ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ನೂತನ ಸಂಸ್ಥೆಗೆ ಶುಭಹಾರೈಸಿದರು.

ಅತಿಥಿಗಳನ್ನು ಸ್ವಾಗತಿಸಿ ಬರಮಾಡಿಕೊಂಡ ಮಾಲಕರಾದ ಪ್ರಕಾಶ್ ಕೆ.ಜೆ.,ಹಾಗೂ ಶಾಜಿಯವರು ಮಾತನಾಡಿ, ನಮ್ಮಲ್ಲಿ ಮಹೀಂದ್ರ, ಮಾರುತಿ, ಟಾಟಾ, ಟೊಯೊಟಾ, ಹುಂಡೈ ಕಂಪನಿಗಳ ಎಲ್ಲಾ ತರಹದ ಬಿಡಿಭಾಗಗಳು ಲಭ್ಯವಿದೆ. ಅಲ್ಲದೇ ಬ್ಯಾಟರಿ, ಲುಬ್ಸ್ ಮತ್ತು ಎಲೆಕ್ಟ್ರಿಕಲ್ ಬಿಡಿಭಾಗಗಳು ಲಭ್ಯವಿದೆ. ಪ್ರಖ್ಯಾತ ಕಂಪನಿಗಳ ಆಯಿಲ್, ಜೆಸಿಬಿ, ಹಿಟಾಚಿಗಳ ಬಿಡಿಭಾಗಗಳು ದೊರೆಯುತ್ತವೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು. ಜಿ.ತೋಮಸ್ ಸ್ವಾಗತಿಸಿ ಕಾರ‍್ಯಕ್ರಮ ನಿರೂಪಿಸಿದರು. ಅಭಿಲಾಷ್, ಜಿನ್ಸನ್ ಸಹಕರಿಸಿದರು.


nelyady1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.