Breaking News

ದ್ವಿಚಕ್ರ ಸವಾರ, ಸಹ ಸವಾರ ಹೆಲ್ಮೆಟ್ ಧರಿಸಲು ರಿಯಾಯಿತಿ ದಿನದ ಅಂತ್ಯ

Puttur_Advt_NewsUnder_1
Puttur_Advt_NewsUnder_1

* ಫೆ.1ರಿಂದ ಹೆಲ್ಮೆಟ್ ಕಡ್ಡಾಯ

* ತಪ್ಪಿದಲ್ಲಿ ಮೂರು ಬಾರಿ ದಂಡ,

* ನಾಲ್ಕನೆ ಬಾರಿ ಚಾಲನಾ ಪರವಾನಿಗೆ ರದ್ದತಿ ವರದಿ

ಪುತ್ತೂರು: ಸರಕಾರ ಅಧಿಸೂಚನೆ ಕರ್ನಾಟಕ ಮೋಟಾರು ವಾಹನ ನಿಯಮದಂತೆ ಜ.12 ರಿಂದ ಬೈಕ್ ಸವಾರ ಮತ್ತು ಹಿಂಬದಿ ಸವಾರ ಹೆಲ್ಮೆಟ್‌ನ್ನು ಕಡ್ಡಾಯವಗಿ ಧರಿಸುವಂತೆ ಆದೇಶವಿದ್ದರೂ ಸಾರ್ವಜನಿಕರು ಹೆಲ್ಮೆಟ್ ಖರೀದಿಸುವ ಅನುಕೂಲತೆಗಾಗಿ ಜ.31ರ ತನಕ ರಿಯಾಯಿತಿ ನೀಡಲಾಗಿತ್ತು. ಇದೀಗ ರಿಯಾಯಿತಿ ದಿನ ಕೊನೆಗೊಳ್ಳುತ್ತಿರುವ  ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಮತ್ತೊಮ್ಮೆ ಪುತ್ತೂರು ನಗರ ಸಂಚಾರಿ ಠಾಣೆ ಎಚ್ಚರಿಕೆ ನೀಡಿದೆ.  ಫೆ.೧ರಿಂದ ಮೋಟಾರ್ ಸೈಕಲ್ ಸವಾರ ಮತ್ತು ಸಹ ಸವಾರ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಕೊಂಡು ಸವಾರಿ ಮಾಡತಕ್ಕದ್ದು ತಪ್ಪಿದಲ್ಲಿ ಮೊದಲ ಬಾರಿ ರೂ.100, ಎರಡನೆ ಬಾರಿಗೆ ರೂ.300, ಮೂರನೆ ಬಾರಿಗೆ ರೂ.500 ದಂಡ ವಿಧಿಸಲಾಗುವುದು. ತದನಂತರದ ಆಪಾದನೆಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿ ಚಾಲನಾ ಪರವಾನಿಗೆ ಅಮಾನತಿನ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ವರದಿ ನಿವೇದಿಸಲಾಗುವುದು ಎಂಬುದಾಗಿ ಸಂಚಾರಿ ಠಾಣಾ ಎಸ್.ಐ ನಾಗರಾಜ್ ಹೆಚ್.ಇ.ರವರು ತಿಳಿಸಿದ್ದಾರೆ

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.