Breaking News

ಹೆಚ್ಚುವರಿ ವರದಕ್ಷಿಣೆಗಾಗಿ ಹಲ್ಲೆ- ಪತಿ ವಿರುದ್ಧ ಮಹಿಳೆ ಆರೋಪ

Puttur_Advt_NewsUnder_1
Puttur_Advt_NewsUnder_1

hechuvari

ಪುತ್ತೂರು : ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸಿ ವ್ಯಕ್ತಿಯೋರ್ವರು ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿ, ನಡು ರಾತ್ರಿಯ ವೇಳೆ ಮನೆಯಿಂದ ಹೊರದಬ್ಬಿ ದೌರ್ಜನ್ಯ ಎಸಗಿದ ಕೃತ್ಯ ಒಳಮೊಗ್ರು ಗ್ರಾಮದ ಉಜಿರೋಡಿ ಮೈದಾನಿಮೂಲೆ ಎಂಬಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಪತಿಯಿಂದ ಹಲ್ಲೆಗೊಳಗಾದ ಮಹಿಳೆ ತನ್ನ ನಾಲ್ಕು ತಿಂಗಳ ಗಂಡು ಮಗುವಿನೊಂದಿಗೆ ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೆಮ್ಮಿಂಜೆ ಗ್ರಾಮದ ಮರೀಲು ನಿವಾಸಿ ಮೊಯ್ದುಕುಂಞಿ ಅವರ ಪುತ್ರಿ ಉಮೈಮಾಭಾನು (28ವ) ಹಲ್ಲೆಗೊಳಗಾದವರು. ‘ನನಗೆ ತನ್ನ ಪತಿ ಒಳಮೊಗ್ರು ಗ್ರಾಮದ ಉಜಿರೋಡಿ ಮೈದಾನಿಮೂಲೆ ನಿವಾಸಿ ಅಬೂಬಕ್ಕರ್ ಸಿದ್ದೀಕ್‌ರವರು ಸ್ವಂತ ಮನೆ ನಿರ್ಮಿಸಲು ತವರು ಮನೆಯಿಂದ ರೂ. 5 ಲಕ್ಷ ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸಿ ಜ.27ರಂದು ರಾತ್ರಿ ಕಾಲಿನಿಂದ ಹೊಟ್ಟೆಯ ಭಾಗಕ್ಕೆ ತುಳಿದು ,ಹಲ್ಲೆ ನಡೆಸಿ ರಾತ್ರಿಯ ವೇಳೆಯೇ ಮನೆಯಿಂದ ಹೊರಗೆ ಹಾಕಿ ದೌರ್ಜನ್ಯ ಎಸಗಿರುವುದಾಗಿ’ ಅವರು ಆರೋಪಿಸಿದ್ದಾರೆ. ‘ಗಂಡನ ಕೃತ್ಯಕ್ಕೆ ಅವರ ತಾಯಿ ಮರಿಯಮ್ಮ ಮತ್ತು ಸಂಬಂದಿಕ ಹಸೈನಾರ್ ಮದನಿ ಮತ್ತು ಅವರ ಪತ್ನಿ ಅವ್ವಾಬಿ ಅವರು ಸಹಕಾರ ನೀಡಿದ್ದಾರೆ’ ಎಂದೂ ಆಕೆ ಆರೋಪಿಸಿದ್ದಾರೆ.

‘2014ರ ಅಕ್ಟೋಬರ್ 12ರಂದು ನನ್ನ ಮಗಳ ವಿವಾಹ ಅಬೂಬಕ್ಕರ್ ಸಿದ್ದೀಕ್‌ನೊಂದಿಗೆ ನಡೆದಿತ್ತು. ವಿವಾಹದ ಸಂದರ್ಭದಲ್ಲಿ 30 ಪವನ್ ಚಿನ್ನಾಭರಣ ಮತ್ತು ರೂ.೨ ಲಕ್ಷ ವರದಕ್ಷಿಣೆ ನೀಡಲಾಗಿತ್ತು. ವಿವಾಹದ ನಂತರ ಕೆಲ ತಿಂಗಳು ಪತ್ನಿಯೊಂದಿಗೆ ಸರಿಯಾಗಿಯೇ ಇದ್ದ ಅಬೂಬಕ್ಕರ್ ಸಿದ್ದೀಕ್ ಆ ಬಳಿಕ ಪತ್ನಿಗೆ ತವರುಮನೆಯಿಂದ ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸುತ್ತಾ ವಿನಾ ಕಾರಣ ನಿತ್ಯ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾರಂಭಿಸಿದ್ದ. ಈಗ ತಾನು ತಾಯಿಯ ಮನೆಯಲ್ಲಿದ್ದು, ಸ್ವಂತ ಮನೆ ನಿರ್ಮಿಸಲು ತವರು ಮನೆಯಿಂದ ರೂ. 5 ಲಕ್ಷ ತರುವಂತೆ ಬೇಡಿಕೆ ಮುಂದಿಟ್ಟು ಪತ್ನಿಯನ್ನು ಪೀಡಿಸಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲಾರಂಭಿಸಿದ್ದ. ಹೆತ್ತವರಾದ ನಾವು ಅಲ್ಲಿಗೆ ಹೋಗದಂತೆ ಮತ್ತು ಮಗಳಿಗೆ ಫೋನ್ ಮಾಡದಂತೆ ನಿರ್ಭಂಧ ವಿಧಿಸಿದ್ದ. ಉಮೈಮಾಭಾನುಳಲ್ಲಿದ್ದ ಮೊಬೈಲ್ ಸೆಟ್ಟನ್ನು  ಕಸಿದುಕೊಳ್ಳುವ ಮೂಲಕ ಹಿಂಸೆ ವಿಚಾರವನ್ನು ನಮಗೆ ತಿಳಿಸದಂತೆ ನೋಡಿಕೊಂಡಿದ್ದ’ ಎಂದು ಉಮೈಮಾಭಾನು ಅವರ ತಂದೆ ಮೊಯ್ದುಕುಂಞಿ ಅವರು ಆರೋಪಿಸಿದ್ದಾರೆ. ‘ಜ.27ರಂದು ರಾತ್ರಿ ಅವರೆಲ್ಲಾ ಸೇರಿಕೊಂಡು ಮಗಳ ಮೇಲೆ ಹಲ್ಲೆ ನಡೆಸಿ ನಡುರಾತ್ರಿಯ ವೇಳೆಯೇ ಮನೆಯಿಂದ ಹೊರಹಾಕಿದ್ದು, ಹಲ್ಲೆ ದೌರ್ಜನ್ಯಕ್ಕೊಳಗಾದ ಆಕೆ ತನ್ನ ಎಳೆಯ ಮಗುವಿನೊಂದಿಗೆ ಅಂಗಳದ ಬದಿಯೇ ರಾತ್ರಿ ಕಳೆದಿದ್ದಾಳೆ . ಈ ವಿಚಾರ ತಿಳಿದು ನಾವು ಗುರುವಾರ ಅಲ್ಲಿಗೆ ತೆರಳಿದ ವೇಳೆ ಅಬೂಬಕ್ಕರ್ ಸಿದ್ದೀಕ್ ಮತ್ತು ಆತನ ತಾಯಿ ಮರಿಯಮ್ಮ ಅಲ್ಲಿಂದ ಓಡಿಹೋಗಿದ್ದಾರೆ. ಬಳಿಕ ನಾವು ಮಗಳನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿರುವುದಾಗಿ’ ಮೊಯ್ದುಕುಂಞಿ ಅವರು ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.