Breaking News

ರೈ ಎಸ್ಟೇಟ್ ಆಂಡ್ ಬಿಲ್ಡರ್ಸ್ ನವರ ಆರ್‌ಇಬಿ ಕ್ರೌನ್ ವಸತಿ ಸಮುಚ್ಚಯಕ್ಕೆ ಭೂಮಿಪೂಜೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾಗಿ ಗುರುತಿಸಿಕೊಂಡಿರುವ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈಯವರ ಮಾಲಕತ್ವದ ರೈ ಎಸ್ಟೇಟ್ ಆಂಡ್ ಬಿಲ್ಡರ‍್ಸ್‌ನವರು ಮಂಗಳೂರು ಕದ್ರಿ ಕಂಬ್ಳದ ಸಿ.ವಿ. ನಾಯಕ್ ಹಾಲ್ ಬಳಿ ನಿರ್ಮಿಸಲಿರುವ ಆರ್‌ಇಬಿ ಕ್ರೌನ್ ಬಹುಮಹಡಿ ವಸತಿ ಸಮುಚ್ಚಯಕ್ಕೆ ಜ.29ರಂದು ಭೂಮಿ ಪೂಜೆ ನೆರವೇರಿತು.

ಕೇಂದ್ರದ ಕಾನೂನು ಮತ್ತು ನ್ಯಾಯ ಖಾತೆಯ ಸಚಿವರಾದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರವರು ದೀಪ ಬೆಳಗಿಸಿ ಶುಭ ಹಾರೈಸಿದರು. ಮಂಗಳೂರಿನ ಹಿರಿಯ ಉದ್ಯಮಿ ಡಿ.ಬಿ. ಮೆಹ್ತಾರವರು ಬ್ರೋಶರ್ ಬಿಡುಗಡೆ ಮಾಡಿದರು. ಮುಖ್ಯ ಅಭ್ಯಾಗತರಾಗಿದ್ದ ಮಂಗಳೂರು ಮಹಾನಗರ ಪಾಲಿಕೆಯ ಕದ್ರಿ ವಾರ್ಡ್‌ನ ಸದಸ್ಯ ಡಿ.ಬಿ.ಅಶೋಕ್ ಮತ್ತು ಎ.ಜೆ. ಸಮೂಹ ಸಂಸ್ಥೆಗಳ ಮುಖ್ಯಸ್ಥ ಎ.ಜೆ. ಶೆಟ್ಟಿ ಮಂಗಳೂರುರವರು ಶುಭ ಹಾರೈಸಿದರು. ಗಿರಿಜಾ.ಎಸ್.ರೈ ಹಾಗೂ ಸುಮಾ ಅಶೋಕ್ ರೈಯವರು ಅತಿಥಿಗಳನ್ನು ಸ್ವಾಗತಿಸಿದರು. ರಿಧಿ ರೈ, ಪ್ರಧಿಲ್ ರೈ ಮತ್ತು ಶೃಧಿ ರೈ ಪ್ರಾರ್ಥಿಸಿದರು. ಉಮೇಶ್ ಆನೆಕಲ್ ವಂದಿಸಿದರು. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಶೋಕ್ ಕುಮಾರ್ ರೈಯವರು, ಶಾಂತ ಹಾಗೂ ಸುಂದರ ಪರಿಸರದಲ್ಲಿ ಆಧುನಿಕ ಸೌಲಭ್ಯಗಳು ಹಾಗೂ ಆಕರ್ಷಕ ವಿನ್ಯಾಸದೊಂದಿಗೆ ಆರ್‌ಇಬಿ ಕ್ರೌನ್ ವಸತಿ ಸಮುಚ್ಚಯ ನಿರ್ಮಾಣಗೊಳ್ಳಲಿದೆ, ವಿಶಾಲ ಮತ್ತು ಯೋಜನಾಬದ್ಧವಾಗಿ ಹಾಗೂ ವಾಸ್ತು ಪ್ರಕಾರವಾಗಿ ನಿರ್ಮಾಣಗೊಳ್ಳಲಿರುವ ವಸತಿ ಸಮುಚ್ಚಯಗಳು ೨ ಮತ್ತು ೩ ಬೆಡ್ ರೂಂ-ಕಿಚನ್‌ಗಳು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಶಿಕ್ಷಣ ಸಂಸ್ಥೆಗಳು, ಬಸ್ ನಿಲ್ದಾಣ, ಮಾರುಕಟ್ಟೆ ಶಾಪಿಂಗ್ ಮಾಲ್‌ಗಳು, ಧಾರ್ಮಿಕ ಕೇಂದ್ರ ಮುಂತಾದ ಸೌಲಭ್ಯಗಳು ಈ ವಸತಿ ಸಮುಚ್ಚಯದಿಂದ ಅನತಿ ದೂರದಲ್ಲಿದೆ ಎಂದು ತಿಳಿಸಿದರು. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿ ನಿರ್ಮಾಣಗೊಳ್ಳುವ ಆರ್‌ಇಬಿ ಕ್ರೌನ್ ವಸತಿ ಸಮುಚ್ಚಯ ತಮ್ಮ ಮನದಿಚ್ಚೆಯ ಮನೆಗಾಗಿ ಹುಡುಕಾಟದಲ್ಲಿರುವವರ ಬಯಕೆಯನ್ನು ಸಾಕಾರಗೊಳಿಸುತ್ತದೆ. ವಿಶಾಲ ರೂಂಗಳು, ಸುಸಜ್ಜಿತ ವ್ಯವಸ್ಥೆ ನಿವಾಸಿಗಳಿಗೆ ಆರಾಮದಾಯಕ ಭಾವನೆಯನ್ನು ನೀಡುತ್ತದೆ. ಲಿವಿಂಗ್ ರೂಂ, ಬೆಡ್‌ರೂಂ, ಡೈನಿಂಗ್ ಹಾಲ್ ಹಾಗೂ ಕಿಚನ್‌ಗಳನ್ನು ವ್ಯವಸ್ಥಿತವಾಗಿ ಇಂದಿನ ಮತ್ತು ಭವಿಷ್ಯದ ಆವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಬಾತ್‌ರೂಂಗಳನ್ನು ಅತ್ಯಾಧುನಿಕ ಸೌಲಭ್ಯ ಮತ್ತು ಸಾಮಾಗ್ರಿಗಳೊಂದಿಗೆ ರೂಪಿಸಲಾಗಿದೆ. ಪ್ರತಿಯೊಂದು ಪರಿಕರಗಳಲ್ಲೂ ಗುಣಮಟ್ಟ ಹಾಗೂ ಆಧುನಿಕತೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ ಅಶೋಕ್ ಕುಮಾರ್ ರೈಯವರು, ನಿರ್ಮಾಣ ಹಾಗೂ ರಿಯಲ್ ಎಸ್ಟೇಟ್ ಕೇತ್ರದಲ್ಲಿ ಕಳೆದ ೧೮ ವರ್ಷಗಳಿಂದ ಮುಂಚೂಣಿಯಲ್ಲಿರುವ ನಮ್ಮ ರೈ ಎಸ್ಟೇಟ್ ಆಂಡ್ ಬಿಲ್ಡರ‍್ಸ್ ಸಂಸ್ಥೆಯು ನಗರದಲ್ಲಿ ಹಲವಾರು ಸುಂದರ ಮತ್ತು ಆಕರ್ಷಕ ವಿನ್ಯಾಸಗಳ ವಸತಿ ಸಮುಚ್ಚಯಗಳನ್ನು ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ನೀಡಿ ಜನ ಮೆಚ್ಚುಗೆಯನ್ನು ಗಳಿಸಿದೆ. ಕದ್ರಿ ಕಂಬ್ಳದಲ್ಲಿರುವ ಕಂಬ್ಳ ಹೈಟ್ಸ್ ಏಶ್ಯಾನ್ ಪೈಂಟಿಂಗ್ಸ್‌ನ ಬೆಸ್ಟ್ ಬಿಲ್ಡಿಂಗ್ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಸಂಸ್ಥೆ ಪರಿಕರ, ತಂತ್ರಜ್ಞಾನ, ಕಟ್ಟಡ, ವಿನ್ಯಾಸ ಸೇರಿದಂತೆ ಪ್ರತಿಯೊಂದು ವಿಚಾರಗಳಲ್ಲೂ ಉತ್ಕೃಷ್ಠ ಗುಣಮಟ್ಟವನ್ನು ಕಾಯ್ದುಕೊಂಡು ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ. ರೈ ಎಸ್ಟೇಟ್ ಆಂಡ್ ಬಿಲ್ಡರ‍್ಸ್ ಸಂಸ್ಥೆ ತೊಕ್ಕೊಟ್ಟುನಲ್ಲಿ ಆರ್‌ಇಬಿ ಕಾಂಪ್ಲೆಕ್ಸ್, ಕದ್ರಿ ಕಂಬ್ಳದಲ್ಲಿ ಕಂಬ್ಳ ಹೈಟ್ಸ್, ಕೊಟ್ಟಾರ ಚೌಕಿಯಲ್ಲಿ ಆರ್‌ಇಬಿ ನೆಸ್ಟ್ ಯೋಜನೆಗಳು ಪೂರ್ಣಗೊಂಡಿದೆ. ಪುತ್ತೂರು ದರ್ಬೆಯಲ್ಲಿ ಆರ್‌ಇಬಿ ಎನ್‌ಕ್ಲೆವ್, ಸಾಮೆತ್ತಡ್ಕದಲ್ಲಿ ಅಶೋಕ ನಗರ ಲೇಔಟ್, ಸೂರಿಂಜೆಯಲ್ಲಿ ರಾಧಾಕೃಷ್ಣ ನಗರ ಲೇಔಟ್ ಯೋಜನೆಗಳು ಪ್ರಗತಿಯಲ್ಲಿದೆ. ಚಿಲಿಂಬಿಯಲ್ಲಿ ಆರ್‌ಇಬಿ ಚಿಲಿಂಬಿ ಎನ್‌ಕ್ಲೇವ್ ಅನುಷ್ಠಾನ ಹಂತದಲ್ಲಿದೆ ಎಂದು ತಿಳಿಸಿ ಸರ್ವರ ಸಹಕಾರ ಕೋರಿದರು.

ಬೇಸ್‌ಮೆಂಟ್, ತಳ ಅಂತಸ್ತು ಹಾಗೂ 5 ಅಂತಸ್ತುಗಳು, 2 ಮತ್ತು 3 ಬಿಎಎಚ್‌ಕೆಯ 33 ಫ್ಲ್ಯಾಟ್‌ಗಳು, ಸೂಪರ್ ಮಾರ್ಕೆಟ್/ ಬ್ಯಾಂಕ್ ಆಗುವಂತಹ ೨೪೭೫/೨೭೯೫ ಚದರ ಅಡಿ ವಿಸ್ತೀರ್ಣದ ೨ ವಾಣಿಜ್ಯ ಮಳಿಗೆಗಳು, ವಿಶಾಲ ವಿಸಿಟರ‍್ಸ್ ಲಾಬಿ, ವಿಸಿಟರ‍್ಸ್ ಕಾರ್ ಪಾರ್ಕಿಂಗ್ ಸೌಲಭ್ಯ, ಜಿಮ್ನೇನಿಶಿಯಂ/ಯೋಗಕೇಂದ್ರ, ಸೋನಾ ಮತ್ತು ಸ್ಟೀಮ್, ಲ್ಯಾಂಡ್‌ಸ್ಕೇಪ್ ಉದ್ಯಾನದೊಂದಿಗೆ ಮಕ್ಕಳ ಆಟದ ತಾಣ, ಸಿಸಿ ಟಿವಿ/ವೀಡಿಯೋ ಡೋರ್‌ಫೋನ್ ಆಧಾರಿತ ಸುರಕ್ಷಾ ವ್ಯವಸ್ಥೆ, ಟೆರೇಸ್‌ನಲ್ಲಿ ಪಾರ್ಟಿ ಏರಿಯಾ, ಕಾರು ವಾಶ್ ತಾಣ, ದಿನದ ೨೪ ತಾಸುಗಳ ಕಾಲವೂ ಅಬಾಧಿತ ನೀರು ಸರಬರಾಜು ವ್ಯವಸ್ಥೆ, ಮಿಂಚು ನಿರೋಧಕ ವ್ಯವಸ್ಥೆ ಹಾಗೂ ಅಗ್ನಿಶಾಮಕ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು.

ಅಶೋಕ್ ಕುಮಾರ್ ರೈ ಮಾಲಕರು ರೈ ಎಸ್ಟೇಟ್& ಬಿಲ್ಡರ‍್ಸ್

In  presence f DVS nd AJ shetty

20160129002756 20160129002830 20160129011722

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.