ಜಿಡೆಕಲ್ಲು-ಎರಡು ರಿಕ್ಷಾಗಳ ಕಳವು, ಒಂದು ಪತ್ತೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಊರಮಾಲ್ ಸಮೀಪ ಮನೆಯಂಗಳದಲ್ಲಿ ನಿಲ್ಲಿಸಿದ್ದ ರಿಕ್ಷಾ ಮತ್ತು ಜಿಡೆಕಲ್ಲು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಿಕ್ಷಾ ಕಳವಾದ ಬಗ್ಗೆ ಜ.29ರಂದು ಮುಂಜಾನೆ ಬೆಳಕಿಗೆ ಬಂದಿದ್ದು, ಈ ಪೈಕಿ ರಸ್ತೆ ಬದಿಯಲ್ಲಿ ನಿಲ್ಲಿಸಿದ ರಿಕ್ಷಾ ಕಳವಾದ ಸ್ಥಳದಿಂದ ತುಸು ದೂರು ಪತ್ತೆಯಾಗಿದೆ.

ಊರಮಾಲ್ ರಸ್ತೆಯ ಸಮೀಪದ ಅಹಮ್ಮದ್ ಸಾಹೇಬ್ ಎಂಬವರ ರಿಕ್ಷಾ ಕಳವಾಗಿದೆ. ಅವರು ರಾತ್ರಿ ರಿಕ್ಷಾವನ್ನು ಮನೆಯಂಗಳದಲ್ಲಿ ನಿಲ್ಲಿಸಿದ್ದರು. ಬೆಳಿಗ್ಗೆ ನೋಡುವಾಗ ರಿಕ್ಷಾ ನಾಪತ್ತೆಯಾಗಿತ್ತು. ಸ್ಥಳೀಯ ಜಿಡೆಕಲ್ಲು ನಿವಾಸಿ ಕಿರಣ್ ಎಂಬವರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ರಿಕ್ಷಾ(ಕೆ.ಎ.21 ಬಿ 2254) ಬೆಳಗ್ಗಿನ ಜಾವ ನೋಡುವಾಗ ನಾಪತ್ತೆಯಾಗಿತ್ತು. ಬಳಿಕ ಹುಡುಕಾಡಿದಾಗ ತುಸು ದೂರದಲ್ಲಿ ರಸ್ತೆ ಬದಿಯ ಕಮರಿನಲ್ಲಿ ರಿಕ್ಷಾ ಪತ್ತೆಯಾಯಿತು. ಕಳ್ಳರು ಕಿರಣ್‌ರವರ ರಿಕ್ಷಾದ ವಯರಿಂಗ್ ಸಾಮಾಗ್ರಿಗಳನ್ನು ತುಂಡು ಮಾಡಿ ಕಳವಿಗೆ ಯತ್ನಿಸಿದ್ದರೂ ಅದು ವಿಫಲವಾಗಿದೆ. ಅಹಮ್ಮದ್‌ರವರ ರಿಕ್ಷಾ ಇನ್ನೂ ಪತ್ತೆಯಾಗಿಲ್ಲ. ಈ ಕುರಿತು ಪುತ್ತೂರು ನಗರ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.

Exif_JPEG_420

ಪತ್ತೆಯಾದ ರಿಕ್ಷಾದ ವಯರ್ ತುಂಡರಿಸಿರುವುದು

ರಿಕ್ಷಾ ಕಳವಾದ ಸ್ಥಳ
ರಿಕ್ಷಾ ಕಳವಾದ ಸ್ಥಳ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.