Breaking News

ತಾ.ಪಂ., ಜಿ.ಪಂ.ಚುನಾವಣೆ: ಜೆ.ಡಿ.ಎಸ್. ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

sabhe

ಚರಂಡಿ ನಿರ್ಮಿಸಲೂ ನಗರಸಭೆಯಲ್ಲಿ ಹಣ ಇಲ್ಲ ಹೇಳುತ್ತಾರೆಮಹಮ್ಮದ್ ಕುಂಞಿ

*ಪಕ್ಷಕ್ಕೆ ದುಡಿದ ನೈಜ ಕಾರ್ಯಕರ್ತರುರಾಮ್‌ಗಣೇಶ್

*ಪುತ್ತೂರು ಜೆಡಿಎಸ್‌ಗೆ ತಕ್ಷಣ ಅಧ್ಯಕ್ಷರ ಆಯ್ಕೆರಕ್ಷಿತ್

*ನಮ್ಮ ನಿರೀಕ್ಷೆಯಷ್ಟು ಪುತ್ತೂರಿನಲ್ಲಿ ಪಕ್ಷಕ್ಕೆ ಬೆಂಬಲ ಸಿಗುತ್ತಿಲ್ಲಇಬ್ರಾಹಿಂ

ಪುತ್ತೂರು: ಮುಂಬರುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಸಂಬಂಧಿಸಿ ತಾಲೂಕು ಜನತಾ ದಳದ ಕಾರ್ಯಕರ್ತರ ಸಭೆಯು ಜ. 27ರಂದು ಇಲ್ಲಿನ ಎನ್.ಜಿ.ಒ. ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ  ಜೆ.ಡಿ.ಎಸ್ ಜಿಲ್ಲಾ ಅಧ್ಯಕ್ಷ ಬಿ.ಮಹಮ್ಮದ್ ಕುಂಞಿಯವರು ಮಾತನಾಡಿ,  ಪುತ್ತೂರಿನ ಶಾಸಕರು ಕೋಟಿ ಕೋಟಿ ಅನುದಾನವನ್ನು ಪುತ್ತೂರಿಗೆ ಒದಗಿಸಿದ್ದೇನೆ ಎಂದು  ಭಾಷಣ ಬಿಗಿಯುತ್ತಾರೆ. ಆದರೆ ಒಂದು ಚರಂಡಿ ನಿರ್ಮಿಸಿಕೊಡಲು ನಗರ ಸಭೆಯಲ್ಲಿ ಹಣ ಇಲ್ಲ. ಕಚೇರಿಗಳಲ್ಲಿ ಅಧಿಕಾರಿಗಳು ಲಭ್ಯವಿಲ್ಲ. ಅಧಿಕಾರಿಗಳು ಇದ್ದರೂ ಶಾಸಕರ ಮಾತು ಕೇಳುವುದಿಲ್ಲ ಎಂದು ಅವರು ಹೇಳಿದರು. ಇಲ್ಲಿಯ ಸಂಸದರ ಸ್ಟೈಲೇ ಬೇರೆ. ಇವರು ಪೂಜೆ, ಪುನಸ್ಕಾರ, ಮದುವೆ ಮತ್ತು ಮರಣದಲ್ಲಿಗೆ ಹೋಗುವುದು ಬಿಟ್ಟರೆ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ಇಲ್ಲ ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕಾರ್ಯಕರ್ತರು ಅವಿರತ ಕೆಲಸ ಮಾಡಿ ಜಾತ್ಯಾತೀತ ಜನತಾದಳ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿಸಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ್ ಗಣೇಶ್ ಮಾತನಾಡಿ,  ಹಲವಾರು ವರ್ಷಗಳಿಂದ ಯಾವುದೇ ಪ್ರಯೋಜನವನ್ನು ಪಡೆಯದೆ ಪಕ್ಷಕ್ಕಾಗಿ ದುಡಿಯುತ್ತಾ ಬಂದಂತಹ ನೈಜ ಕಾರ್ಯಕರ್ತರು ನೀವು. ನೀವು ಪ್ರಯತ್ನ ಪಟ್ಟರೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆದ್ದು ಬರುವುದರಲ್ಲಿ ಸಂದೇಹವಿಲ್ಲ ಎಂದರು. ಯುವ ಜೆ.ಡಿ.ಎಸ್ ಜಿಲ್ಲಾ ಅಧ್ಯಕ್ಷ ರಕ್ಷಿತ್ ಸುವರ್ಣ ಮಾತನಾಡಿ, ಪುತ್ತೂರು ಯುವ ಜನತಾದಳದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷರ ಜೊತೆ ಚರ್ಚಿಸಿ ತಕ್ಷಣ ನೇಮಕಗೊಳಿಸುತ್ತೇನೆ ಎಂದರು. ಜಿಲ್ಲಾ ಜೆ.ಡಿ.ಎಸ್ ಕಿಶನ್ ಘಟಕದ ಅಧ್ಯಕ್ಷ ನಾರಾಯಣ್ ರೈ ಬಾರಿಕೆ ಮಾತನಾಡಿ,  ಸರಕಾರದ ಮೀಸಲಾತಿಯಿಂದಾಗಿ ಕೆಲವು ಕಡೆ ಅಭ್ಯರ್ಥಿಗಳ ತೊಂದರೆಯನ್ನು ಪಕ್ಷ ಅನುಭವಿಸಬೇಕಾಗುತ್ತದೆ. ಆದರೂ ಸಹ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾರ್ಯಕರ್ತರು ಪ್ರಯತ್ನಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ .ತಾಲೂಕು ಅಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ಮಾತನಾಡಿ, ಕರ್ನಾಟಕದ ಜನತೆಗೆ ಜನತಾ ದಳದ ಜನಸೇವೆ ಮತ್ತು ಸಾಧನೆಗಳ ಬಗ್ಗೆ ಹೆಮ್ಮೆ ಇದೆ. ಆದರೂ ಪಕ್ಷವು ಇನ್ನು ಮಾಡಬೇಕಾದ ಜನಸೇವೆ ಬಹಳಷ್ಟು ಇದೆ. ಜನತಾದಳ ಪಕ್ಷವು ಮೊದಲಿನಿಂದಲೂ ನ್ಯಾಯ ಮತ್ತು ಸಮಾನತೆಗಾಗಿ ಹೋರಾಟ ಮಾಡುತ್ತಾ ಬಂದಿದೆ. ಆದರೆ ಪುತ್ತೂರಿನಲ್ಲಿ ಮಾತ್ರ ನಾವು ನಿರೀಕ್ಷಿಸಿದಂತೆ ಮತದಾರರ ಸಹಕಾರ ಜೆ.ಡಿ.ಎಸ್‌ಗೆ ಸಿಗುತ್ತಿಲ್ಲ. ಈ ಸಲದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಜೆ.ಡಿ.ಎಸ್‌ಗೆ ಬೆಂಬಲಿಸಿ ಎಂದು ಅವರು ಮತದಾರರಲ್ಲಿ ವಿನಂತಿಸಿದರು. ಪುತ್ತೂರು ಮಿನಿವಿಧಾನ ಸೌಧ ನಿರ್ಮಾಣಗೊಂಡರೂ ಕೋರ್ಟು ರಸ್ತೆ ಅಗಲೀಕರಣ ಆಗದೆ ನೆನಗುದಿಗೆ ಬಿದ್ದಂತಿದೆ. ಈ ಬಗ್ಗೆ ನಗರಸಭೆಯ ಯಾವುದೇ ಸದಸ್ಯರು ಧ್ವನಿ ಎತ್ತುವುದಿಲ್ಲ ಯಾಕೆ  ಎಂದು ಅವರು ಪ್ರಶ್ನಿಸಿದರು.   ಸಭೆಯಲ್ಲಿ ಜೆ.ಡಿ.ಎಸ್ ಮಹಿಳಾ ಘಟಕ ಅಧ್ಯಕ್ಷ ಪದ್ಮಾಮಣಿ,   ನಗರ ಅಧ್ಯಕ್ಷ ಕಿಶೋರ್ ಆಚಾರ್ಯ,  ಉಪಾಧ್ಯಕ್ಷ ಅಬ್ದುಲ್ ಕುಂಞಿ ಜಾಲಗದ್ದೆ, ವಿಕ್ಟರ್ ಗೊನ್ಸಾಲ್ವಿಸ್,  ಪಿ.ಎಂ.ಇಬ್ರಾಹಿಂ ಪರ್ಪುಂಜ, ಹಂಝ ವಿದ್ಯಾಪುರ, ಪಿ.ಮೋಹನ್ ಗೌಡ, ಕೆ.ರವೀಂದ್ರ ರಾವ್, ಜಾಫರ್‌ಖಾನ್ ವಿಟ್ಲ, ಹರೀಶ್ ಕೋಟ್ಯಾನ್ ವಿಟ್ಲ, ಅಬ್ದುಲ್ ರಹಿಮಾನ್ ಮೇದರಬೆಟ್ಟು, ಅಶ್ರಫ್ ಕೆ.ಜಿ.ಎನ್ ಅಳಕೆ ಮಜಲು, ಖಾದರ್ ಅಳಕೆಮಜಲು, ಅಬ್ದುಲ್ ರಝಾಕ್, ನವಾಝ್ ಇಬ್ರಾಹಿಂ, ಹಂಝ ಮಿತ್ತೂರು, ಬಿ.ಬಾಬು, ಕೆ.ರವೀಂದ್ರ ರಾವ್, ಸುಂದರ ಭಂಡಾರಿ, ಕೆ.ಅಬ್ಬಾಸ್, ಭುವನೇಶ್ವರಿ ಎಂ ಉಪಸ್ಥಿತರಿದ್ದರು. ಐ.ಸಿ. ಕೈಲಾಸ್ ಸ್ವಾಗತಿಸಿದರು.  ಯುನಿಕ್ ಅಬ್ದುಲ್ ರಹಿಮಾನ್ ಕಾರ‍್ಯಕ್ರಮ ನಿರೂಪಿಸಿದರು. ಜೆ.ಡಿ.ಎಸ್ ಅಲ್ಪಸಂಖ್ಯಾತ ಘಟಕ  ಅಧ್ಯಕ್ಷ ಅಶ್ರಫ್ ಕೊಟ್ಯಾಡಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.