ಕಡಬ ತಾ.ಪಂ ಕ್ಷೇತ್ರದಲ್ಲಿ ಅವಕಾಶ ನೀಡಲು ಬ್ಲಾಕ್ ಅಧ್ಯಕ್ಷರಿಗೆ ಅಶ್ರಫ್ ಶೇಡಿಗುಂಡಿ ಮನವಿ

Puttur_Advt_NewsUnder_1
Puttur_Advt_NewsUnder_1

ಕಡಬ: ಫೆ.20ರಂದು ನಡೆಯಲಿರುವ ಜಿ.ಪಂ., ತಾ.ಪಂ. ಚುನಾವಣೆ ಕಾವು ಏರಿದ್ದು ವಿವಿಧ ಪಕ್ಷಗಳಲ್ಲಿ ಅಭ್ಯರ್ಥಿತನದ ಆಕಾಂಕ್ಷಿಗಳು ಹೆಚ್ಚಾಗಿದ್ದು ತಮಗೆ ಅವಕಾಶ ನೀಡುವಂತೆ ಪಕ್ಷದ ನಾಯಕರ ಮೇಲೆ ಒತ್ತಡ ತರುತ್ತಿದ್ದಾರೆ. ಈ ಮಧ್ಯೆ ಜ.27 ರಂದು ಅಶ್ರಫ್ ಶೇಡಿಗುಂಡಿಯವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಿ ಕಡಬ ತಾ.ಪಂ. ಕ್ಷೇತ್ರಕ್ಕೆ ತನಗೆ ಅವಕಾಶ ನೀಡುವಂತೆ ಕೋರಿದರು. ಕಡಬ ಭಾಗದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಸತತವಾಗಿ ಶ್ರಮಿಸುತ್ತಿದ್ದು ಕಡಬ ಬ್ಲಾಕಿನ ಸೇವಾದಳದ ಅಧ್ಯಕ್ಷರಾಗಿ ಕಡಬ ಗ್ರಾ.ಪಂ.ನ ಮಾಜಿ ಅಧ್ಯಕ್ಷರಾಗಿ, ಗ್ರಾ.ಪಂ.ನ ಗಣನೀಯ ಅಭಿವೃದ್ದಿಗೆ ಶ್ರಮಿಸಿದ ತಾನು ಈಗಲೂ ಗ್ರಾ.ಪಂ. ಸದಸ್ಯನಾಗಿ ಗ್ರಾಮದ ಅಭಿವೃದ್ಧಿಗಾಗಿ ದುಡಿಯುತ್ತಿದ್ದೇನೆ.  ಈ ಬಾರಿ ತನಗೆ ಅವಕಾಶ ನೀಡಬೇಕೆಂದು ಹೇಳಿದರು. ಮನವಿ ಸ್ವೀಕರಿಸಿ ಮಾತನಾಡಿದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಪಿ ವರ್ಗೀಸ್‌ರವರು ಎಲ್ಲಾ ಅರ್ಜಿಗಳನ್ನು ಹೈಕಮಾಂಡಿಗೆ ಕಳುಹಿಸಿ ಕೊಡಲಾಗುವುದು, ಹೈಕಮಾಂಡ್  ಈ ಬಗ್ಗೆ ತೀರ್ಮಾಣ ಕೈಗೊಳ್ಳುತ್ತದೆ ಎಂದರು ಕಡಬ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಶೆರೀಫ್ ಎ.ಎಸ್ ಉಪಸ್ಥಿತರಿದ್ದರು.

kdb-29-1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.