ಹಿರೇಬಂಡಾಡಿ: ಶಾಖೆಪುರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಪ್ರಥಮ ಮಹಾಸಭೆ

ಹಿರೇಬಂಡಾಡಿ: ಹಿರೇಬಂಡಾಡಿ ಗ್ರಾಮದ ಶಾಖೆಪುರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಪ್ರಥಮ ಮಹಾಸಭೆಯು ಜ.28ರಂದು ಶಾಖೆಪುರ ಸಂಘದ ಆವರಣದಲ್ಲಿ ನಡೆಯಿತು. ಕಾರ‍್ಯಕ್ರಮ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಅನಿತಾ ಸರೋಳಿಯವರು ವಹಿಸಿದ್ದರು. ಹಿರೇಬಂಡಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷರಾದ ಸಂಜೀವ ಮಠಂದೂರು ಮುಖ್ಯ ಅತಿಥಿಯಾಗಿ ಆಗಮಿಸಿ ಶುಭಹಾರೈಸಿದರು. ಇನ್ನೋರ್ವ ಮುಖ್ಯ ಅತಿಥಿ ದ.ಕ. ಸಹಕಾರಿ ಹಾಲು ಒಕ್ಕೂಟದ ಉಪವ್ಯವಸ್ಥಾಪಕ  ಡಾ.ರಾಮಕೃಷ್ಣ ಭಟ್ ಮಾತನಾಡಿ ಈ ಒಂದು ಗ್ರಾಮೀಣ ಪ್ರದೇಶದಲ್ಲಿ ಹಾಲು ಉತ್ಪಾದಕರ ಮಹಿಳಾ ಸಂಘವು ಪ್ರಾರಂಭವಾಗಿದ್ದು ತುಂಬಾ ಸಂತೋಷದ ವಿಷಯ. ಈ ಸಂಸ್ಥೆಯು ಇಡೀ ಜಿಲ್ಲೆಯಲ್ಲಿ ಗುರುತಿಸುವಂತಾಗಲಿ ಎಂದರು. ಉಪಾಧ್ಯಕ್ಷರಾದ ಪುಷ್ಪಾವತಿ ಕೆರ್ನಡ್ಕ, ನಿರ್ದೇಶಕರುಗಳಾದ ಶ್ರೀಮತಿ ಕಮಲ, ವಿಶ್ವನಾಥ ಪೆರ್ಲ, ಶ್ರೀಮತಿ ರಶ್ಮಿ ಖಂಡಿಗ, ಫೌಜೀಯ ಬೊಳ್ಯಡ, ರೇವತಿ ಕೆರ್ನಡ್ಕ, ಸರೋಜಿನಿ ಕೇದಗೆದಡಿ, ಕಮಲಾಕ್ಷಿ ಪಾಜಳಿಕೆ, ಪ್ರೇಮ ಕೆದಗೆದಡಿ, ಲೀಲಾವತಿ ಸರೋಳಿ, ಗ್ರಾ.ಪಂ.ಸದಸ್ಯರಾದ ಮಂಜುಳಾ ಸರೋಳಿ, ನಿತೀನ್ ತಾರಿತ್ತಡಿ, ವಸಂತಿ ಶಾಜಿಪುರ ಉಪಸ್ಥಿತರಿದ್ದರು. ಅನಿತಾ ಸರೋಳಿ ಸ್ವಾಗತಿಸಿ, ಕಾರ‍್ಯದರ್ಶಿ ವನಿತ ಧನ್ಯವಾದಗೈದರು. ಹಾಲು ಉತ್ಪಾದಕರ ಸಹಕಾರಿ ಸಂಘದ ವಿಸ್ತರಣಾಧಿಕಾರಿಯಾದ ಯಮುನ ನಿರೂಪಿಸಿದರು.

e07f3427-7638-40f1-a9ed-c3084aafdb27

cfa2d3a7-2e49-4140-a300-b849945b0bf6

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.