ಫೆ. 1: ‘ಮಲ್ಲಕ್ಕನ ಇಲ್ಲೊಕ್ಕೆಲ್’ರಂಗಾರ್ಪಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ನಾಲ್ಕು ವರ್ಷಗಳಿಂದ ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಾದ್ಯಂತ ತುಳು ನಾಟಕಗಳನ್ನು ಪ್ರದರ್ಶಿಸುವ ಮೂಲಕ ಮನೆ ಮಾತಾಗಿರುವ ಬದ್ಕೆರೆ ಕಲ್ಪಿ ಖ್ಯಾತಿಯ ‘ಸಂಸಾರ ಕಲಾವಿದೆರ್’ ಬಲ್ನಾಡು ಪುತ್ತೂರು ಇವರು ಅಭಿನಯಿಸುವ ನೂತನ ಸಾಂಸಾರಿಕ ಹಾಸ್ಯ ನಾಟಕ ‘ಮಲ್ಲಕ್ಕನ ಇಲ್ಲೊಕ್ಕೆಲ್’ ಫೆ. 1ರಂದು ಕಾಸರಗೋಡು ಮುಳ್ಳೇರಿಯಾದ ಮುಕ್ಕುಂಜ ವಿಷ್ಣುಮೂರ್ತಿ ನೇಮೋತ್ಸವದ ಶುಭ ಸಂದರ್ಭದಲ್ಲಿ ರಾತ್ರಿ 8ಕ್ಕೆ ರಂಗಾರ್ಪಣೆಗೊಳ್ಳಲಿದೆ. ಸುಬ್ಬು ಸಂಟ್ಯಾರ್ ಕಥೆ ಮತ್ತು ಸಾಹಿತ್ಯ ರಚಿಸಿದ್ದು, ಬಲೇ ತೆಲಿಪಾಲೆ ಖ್ಯಾತಿಯ ಚಲನಚಿತ್ರ ನಟ ಅರುಣ್ ಚಂದ್ರ ಬಿಸಿ ರೋಡ್ ಸಂಭಾಷಣೆ ಮತ್ತು ಸಾಹಿತ್ಯ ರಚಿಸಿದ್ದಾರೆ. ನಾಗೇಶ್ ಬಲ್ನಾಡ್ ನಾಟಕವನ್ನು ನಿರ್ದೇಶನ ಮಾಡಿದ್ದಾರೆ. ವೇದಸ್ಯ ಕುಲಾಲ್ ರಾಮಕುಂಜ, ಪ್ರೀತಿ ರಮೇಶ್ ಕಲ್ಲಡ್ಕ, ಕೆ.ಟಿ. ಆನಂದ ವಿಟ್ಲ, ದಿನೇಶ್ ಸಂಪ್ಯ, ರಾಜೇಶ್ ಶಾಂತಿನಗರ, ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು, ರಾಜಶೇಖರ್ ಶಾಂತಿನಗರ, ಪ್ರಶಾಂತ್ ಮಿತ್ತೂರು, ಸುಬ್ಬು ಸಂಟ್ಯಾರ್, ಕಿರಣ್ ಬಸಂತಕೋಡಿ, ಯಶವಂತ ಪುರುಷರಕಟ್ಟೆ, ಹರೀಶ್ ಬನ್ನೂರು, ಕು. ಕೃತಿಕಾ, ಕು. ವಿದ್ಯಾಶ್ರೀ ಬೆಟ್ಟಂಪಾಡಿ ಮತ್ತು ಕು. ಸುಶ್ಮಿತಾ ಕೆದಂಬಾಡಿ ಕಲಾವಿದರುಗಳಾಗಿ ಅಭಿನಯಿಸಲಿದ್ದಾರೆ.

ಬಿ.ಎಸ್. ಕಾರಂತ್ ಇಂಚರ ರಾಮಕುಂಜ ಸಂಗೀತ ನಿರ್ದೇಶಿಸಲಿದ್ದು, ಪ್ರದೀಪ್ ಕಾವು ವರ್ಣಾಲಂಕಾರ ಸಂಸಾರ ಆರ್ಟ್ಸ್ ರಂಗಾಲಂಕಾರ ಮತ್ತು ಕೃಷ್ಣ ಡಿಜಿಟಲ್ ಸೌಂಡ್ಸ್ ಪುತ್ತೂರು ಧ್ವನಿ ಮತ್ತು ಬೆಳಕು ಮಾಡಲಿದ್ದಾರೆ.

ತಂಡದ ಮುಂದಿನ ಪ್ರದರ್ಶನವು ಫೆ. 9ರಂದು ಕೊಡಿಪ್ಪಾಡಿ ಅರ್ಕ, ಫೆ. 14ರಂದು ಬನ್ನೂರು, ಫೆ. 21ರಂದು ಉಜಿರೆ ಮತ್ತು ಫೆ. 27ರಂದು ಪೆರ್ಲಂಪಾಡಿಯಲ್ಲಿ ನಡೆಯಲಿದೆ ಎಂದು ತಂಡದ ಸಾರಥ್ಯ ವಹಿಸಿಕೊಂಡಿರುವ ಶೇಖರ ಪೂಜಾರಿ ಬೆಳ್ಳಿಪ್ಪಾಡಿ ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.