Breaking News

ಕಲ್ಲೇರಿ: ಅನಧಿಕೃತವಾಗಿ ನಿರ್ಮಾಣವಾಗಿದ್ದ 7 ಜೋಪಡಿಗಳ ತೆರವು

Puttur_Advt_NewsUnder_1
Puttur_Advt_NewsUnder_1

kalleri

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ತಣ್ಣೀರುಪಂಥ ಗ್ರಾಮದ ಕಲ್ಲೇರಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಒಂದು ಮನೆ ಸಹಿತ ಏಳು ಜೋಪಡಿಗಳನ್ನು ಕೊಕ್ಕಡ ಕಂದಾಯ ನಿರೀಕ್ಷಕರ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.

ತಣ್ಣೀರುಪಂಥ ಗ್ರಾಮ ಪಂಚಾಯಿತಿ ಕಚೇರಿ ಬಳಿಯಲ್ಲಿ ಕಲ್ಲೇರಿ-ಮಡಂತ್ಯಾರು ರಸ್ತೆಗೆ ತಾಗಿಕೊಂಡು ಪಿಡಬ್ಲ್ಯೂಡಿ ಇಲಾಖೆಗೆ ಸೇರಿದ ಖಾಲಿ ಜಾಗದಲ್ಲಿ, ಸ್ಥಳೀಯ ನಿವಾಸಿ ಫಾರೂಕ್ ಎಂಬವರು ಅನಧಿಕೃತವಾಗಿ ಮನೆ ನಿರ್ಮಿಸಿದ್ದರೆನ್ನಲಾಗಿದ್ದು, ಈ ಬಗ್ಗೆ ಸಾರ್ವಜನಿಕರು ಬೆಳ್ತಂಗಡಿ ತಹಶೀಲ್ದಾರ್‌ರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮನೆಯನ್ನು ತೆರವುಗೊಳಿಸುವಂತೆ ತಹಶೀಲ್ದಾರ್ ಆದೇಶ ಹೊರಡಿಸಿದ್ದರು.

 ಅದರಂತೆ ಗುರುವಾರ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಕೊಕ್ಕಡ ಕಂದಾಯ ನಿರೀಕ್ಷಕ ಜಯವಿಕ್ರಮ್, ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ತೌಸೀಫ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಫಾರೂಕ್ ಅವರಿಗೆ ಮನೆ ತೆರವುಗೊಳಿಸಲು ಸೂಚಿಸಿದರು. ಆದರೆ ತೆರವಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದಾಗ ಪರಿಸ್ಥಿತಿ ಬಿಗಡಾಯಿಸುವ ಹಂತ ತಲುಪಿತು. ಬಳಿಕ ಉಪ್ಪಿನಂಗಡಿ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿ, ಪೊಲೀಸ್ ಬಂದೋಬಸ್ತ್‌ನಲ್ಲಿ ಮನೆಯನ್ನು ತೆರವುಗೊಳಿಸಲಾಗಿದೆ.

 ಇದೇ ಜಾಗದಲ್ಲಿ ಟಾರ್ಪಾಲು ಕಟ್ಟಿ ನಿರ್ಮಿಸಲಾದ, ನಾಲ್ಕು ಕಂಬ ನೆಟ್ಟು ಸಿಮೆಂಟ್ ಶೀಟ್ ಜೋಡಿಸಿದ್ದ ಏಳು ಜೋಪಡಿಗಳನ್ನು ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆಯವರು ತೆರವುಗೊಳಿಸಿದರು. ತೆರವು ಕಾರ್ಯಾಚರಣೆಯಲ್ಲಿ ತಣ್ಣೀರುಪಂಥ ಗ್ರಾಮದ ಪ್ರಭಾರ ಗ್ರಾಮಕರಣಿಕ ಪರಮೇಶ್ವರ್, ಕಂದಾಯ ಇಲಾಖೆ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಠಾಣಾಧಿಕಾರಿ ತಿಮ್ಮಪ್ಪ ನಾಯ್ಕ ಮತ್ತು ಸಿಬ್ಬಂದಿಗಳು ಬಂದೋಬಸ್ತ್ ನಿರತರಾಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.