Breaking News

ಅನಂತಾಡಿ: ಹೊನಲು ಬೆಳಕಿನ ಮುಕ್ತ ಕಬಡ್ಡಿ-ಹಗ್ಗಜಗ್ಗಾಟ

Puttur_Advt_NewsUnder_1
Puttur_Advt_NewsUnder_1

ananthady

ಪುತ್ತೂರು: ಕೇಸರಿ ಫ್ರೆಂಡ್ಸ್, ಹಿಂದೂ ಧಾರ್ಮಿಕ ಸೇವಾ ಸಮಿತಿ ಬಂಟ್ರಿಂಜ ಇದರ ಆಶ್ರಯದಲ್ಲಿ ಅಂತರ್ ಜಿಲ್ಲಾ ಕಬಡ್ಡಿ ಹಾಗೂ ಹಗ್ಗ-ಜಗ್ಗಾಟವು ಇತ್ತೀಚೆಗೆ ಅನಂತಾಡಿ ಸಮೀಪ ಬಂಟ್ರಿಂಜ ಉಳ್ಳಾಲ್ತಿ ದೈವಸ್ಥಾನ ವಠಾರದಲ್ಲಿ ನಡೆಯಿತು.

ಪಂದ್ಯಾಟವನ್ನು ತುಂಬೆ ಪ.ಪೂ ಕಾಲೇಜಿನ ಪ್ರಾಂಶುಪಾಲ ಕೆ.ಎನ್ ಗಂಗಾಧರ ಆಳ್ವ ಉದ್ಘಾಟಿಸಿ ಶುಭ ಹಾರೈಸಿದರು. ಕಿರಣ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಬಂಟ್ವಾಳ, ಹಿಂದುಪುರ ಬಯಲಾಟ ಸಮಿತಿ ಅಧ್ಯಕ್ಷ ಮೋನಪ್ಪ, ದುರ್ಗಾ ಕಲಾ ಸಂಘದ ಅಧ್ಯಕ್ಷ ಜಯರಾಮ ಆಚಾರ್ಯ, ಶಾರದೋತ್ಸವ ಸಮಿತಿ ಅಧ್ಯಕ್ಷ ಹರ್ಷೇಂದ್ರ ಶೆಟ್ಟಿ ಬಾಳಿಕೆ, ಶ್ರೀದೇವಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ನಾರಾಯಣ, ಗೋಳಿಕಟ್ಟೆ ಫ್ರೆಂಡ್ಸ್ ಬಳಗದ ವಾಸಪ್ಪ, ಎಸ್‌ಡಿಎಂಸಿ ಅಧ್ಯಕ್ಷರುಗಳಾದ ಶಶಿಧರ ಗೌಡ, ದಾಮೋದರ ಗೌಡ, ಶ್ರೀರಾಮ ತುಂಬೆಕೋಡಿಯ ಕೃಷ್ಣ ಪ್ರಸಾದ್ ರೈ, ಅನಂತಾಡಿ ಕ್ರಿಕೆಟ್ ಕ್ಲಬ್‌ನ ನಾಗೇಶ ಮರದ ಮೂಲೆ, ಕೇಸರಿ ಫ್ರೆಂಡ್ಸ್‌ನ ಅಧ್ಯಕ್ಷ ಹರೀಶ್ಚಂದ್ರ ಗೌಡ ಟಿ, ನವಭಾರತ್ ಪಡ್ಪಿರೆಯ ಪ್ರಶಾಂತ್ ಪೂಜಾರಿ, ಮಜಲು ಫ್ರೆಂಡ್ಸ್‌ನ ಚಂದ್ರಹಾಸ ಶೆಟ್ಟಿ, ಫ್ರೆಂಡ್ಸ್ ಕೂಡುರಸ್ತೆ ಸತೀಶ್, ಸುರೇಶ್ ಗಾಣಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ: ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ಯುಕ್ತಿಕಾ ಬಂಟ್ರಿಂಜ ಹಾಗೂ ನವೀನ್ ಪಂತಡ್ಕ, ಮೆಸ್ಕಾಂ ಉದ್ಯೋಗಿ ಪದ್ಮನಾಭ ಕೆಳಿಂಜರವರನ್ನು ಸನ್ಮಾನಿಸಲಾಯಿತು. ಅಲ್ಲದೆ ಬಡ ಕುಟುಂಬಗಳಿಗೆ ಈ ಸಂದರ್ಭದಲ್ಲಿ ಅಕ್ಕಿ ವಿತರಿಸಲಾಯಿತು. ಅಧ್ಯಕ್ಷ ಪ್ರಸಾದ್ ಗೌಡ ಸ್ವಾಗತಿಸಿದರು. ಕಾರ್ಯದರ್ಶಿ ಕರುಣಾಕರ ಬಂಟ್ರಿಂಜ ವಂದಿಸಿದರು. ಕ್ರೀಡಾಕಾರ್ಯದರ್ಶಿ ಮಹೇಶ್ ಪೊಯ್ಯೆ ವರದಿ ವಾಚಿಸಿದರು. ಶಿಕ್ಷಕರಾದ ಗಣೇಶ್ ನಡುವಾಲ್ ಹಾಗೂ ವೆಂಕಟೇಶ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.