Breaking News

ಕೊಂಬಾರು: ಬಿಜೆಪಿಯಿಂದ ಕಾಂಗ್ರೆಸಿಗೆ ಸೇರ್ಪಡೆ

Puttur_Advt_NewsUnder_1
Puttur_Advt_NewsUnder_1

kombaruಕಡಬ: ಬಿಜೆಪಿಯ ಭದ್ರಕೋಟೆಯಾಗಿರುವ ಕೊಂಬಾರಿನಲ್ಲಿ ಕಾಂಗ್ರೆಸಿನ ಪ್ರಮುಖರಾದ ಕುಶಾಲಪ್ಪ ಗೌಡ ಕೈಕುರೆ ಹಾಗೂ ಬಾಲಕೃಷ್ಣ ಗೌಡ ಕೆಂಜಳ ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ಕಾಂಗ್ರೆಸಿಗರು ತಮ್ಮ ಬಲ ಪ್ರದರ್ಶನಕ್ಕೆ ಮುಂದಾಗಿದ್ದು ಸಿರಿಬಾಗಿಲು ಶಾಲಾ ಎಸ್.ಡಿ.ಎಂ.ಸಿ ಮಾಜಿ ಆಧ್ಯಕ್ಷ, ಮಣಿಬಾಂಡ ಮಂಜುಶ್ರೀ ಭಜನಾ ಮಂಡಳಿ ಕಾರ್ಯದರ್ಶಿ, ಬಿಜೆಪಿ ಸಕ್ರೀಯ ಸದಸ್ಯ ಭುವನೇಶ್ವರ ಅಮ್ಚೂರುರನ್ನು ಬೆಂಬಲಿಗರೊಂದಿಗೆ ಜ.19 ರಂದು ಕೆಂಜಳ ಪಂಚಲಿಂಗೇಶ್ವರ ಯುವಕ ಮಂಡಲದಲ್ಲಿ ನಡೆದ ಕಾಂಗ್ರೆಸ್ ಕಾರ‍್ಯಕರ್ತರ ಸಭೆಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದಾರೆ. ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಪಿ.ವರ್ಗೀಸ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ವೀಕ್ಷಕರಾಗಿ ಆಗಮಿಸಿದ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ ಎ.ಸಿ. ವಿನಯರಾಜ್‌ರವರ ಸಮ್ಮುಖದಲ್ಲಿ ಪಕ್ಷದ ಧ್ವಜವನ್ನು ನೀಡುವುದರ ಮೂಲಕ ಭುವನೇಶ್ವರ ಅಮ್ಚೂರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಕುಮಾರಿ ವಾಸುದೇವನ್, ಜಿ.ಪಂ. ಮಾಜಿ ಸದಸ್ಯ ಹಾಜಿ ಸಯ್ಯದ್ ಮೀರಾ ಸಾಹೇಬ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ‍್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿ, ಬಿಳಿನೆಲೆ ವಲಯ ಕಾಂಗ್ರೆಸ್ ಅಧ್ಯಕ್ಷ ಮನಮೋಹನ ಗೋಳ್ಯಾಡಿ, ಬಿಳಿನೆಲೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ದಿನೇಶ್, ಪ್ರಮುಖರಾದ ದಿವಾಕರ ಗೌಡ ಶಿರಾಡಿ, ಆಶಾ ಗುಂಡ್ಯ, ಪದ್ಮನಾಭ ಗೌಡ ದೇರಣೆ, ಗುಡ್ಡಪ್ಪ ಗೌಡ ಹೊಳ್ಳಾರು, ರವಿಪ್ರಸಾದ್ ಕೊಂಬಾರು, ಸೆಲ್ವ ಕುಮಾರ್ ಕೊಂಬಾರು, ಸೇರಿದಂತೆ ಹಲವಾರು ಪಕ್ಷದ ಪ್ರಮುಖರು, ಸಂಘಟಕರು, ಕಾರ‍್ಯಕರ್ತರು ಉಪಸ್ಥಿತರಿದ್ದರು. ಬಿಳಿನೆಲೆ ವಲಯ ಕಾಂಗ್ರೆಸ್ ಮುಖಂಡ ಶಶಿಧರ ಬೊಟ್ಟಡ್ಕ ಸ್ವಾಗತಿಸಿ, ವಲಯ ಪ್ರಧಾನ ಕಾರ‍್ಯದರ್ಶಿ ರಾಮಕೃಷ್ಣ ಹೊಳ್ಳಾರು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.