ಜ.30 : ಸುದಾನ ವಸತಿಯುತ ಶಾಲಾ ಬೆಳ್ಳಿಹಬ್ಬ ಸಮಾರೋಪ-ಸಾಧಕರಿಗೆ ಸನ್ಮಾನ -ಸಚಿವ ಸೊರಕೆ, ಸಂಸದ ನಳಿನ್ ಆಗಮನ

Puttur_Advt_NewsUnder_1
Puttur_Advt_NewsUnder_1

sudana

ಪುತ್ತೂರು: ನೆಹರೂನಗರದ ಸುದಾನ ವಸತಿಯುತ ಶಾಲೆಯ ಬೆಳ್ಳಿಹಬ್ಬ ಸಮಾರೋಪ ಸಮಾರಂಭವು ಜ.30ರಂದು ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ವಹಿಸಲಿದ್ದು, ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಸಮಾರೋಪ ಭಾಷಣ ಮಾಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ ಸನ್ಮಾನಿಸಲಿದ್ದಾರೆ. ತಾ.ಪಂ ಅಧ್ಯಕ್ಷೆ ಪುಲಸ್ತ್ಯಾ ರೈ, ನಗರಸಭಾ ಪ್ರಭಾರ ಅಧ್ಯಕ್ಷ ಜೀವಂಧರ್ ಜೈನ್, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಾಲ್ಟರ್ ಡಿಮೆಲ್ಲೋ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ನಡೆಯಲಿದೆ. ಯಕ್ಷಗಾನ ಕ್ಷೇತ್ರದ ಸಂಜೀವ ರೈ, ನಿವೃತ್ತ ಸೈನಿಕರಾದ ಜೋಯ್ ಡಿಸೋಜಾ, ರಮಾಕಾಂತ್, ಜಿ.ಡಿ ಭಟ್, ನಿವೃತ್ತ ಎಎಸ್ಪಿ ಗೋಪಾಲ ನಾಯ್ಕ್, ಉಪನ್ಯಾಸಕರಾದ ಹರಿನಾರಾಯಣ ಮಾಡಾವು, ನಾರಾಯಣ ರೈ ಅಗ್ರಾಳ, ಶಿಕ್ಷಣ ಇಲಾಖೆಯ ರಮೇಶ್ ಸುವರ್ಣ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ದಿ.ನೇಮಿರಾಜ್, ಅಂಚೆ ಇಲಾಖೆಯ ಮೊದೀನ್ ಖಾನ್, ಶಿಕ್ಷಣ ಹಾಗೂ ಸಾಮಾಜಿಕ ಸೇವೆಗಾಗಿ ಅಬ್ರಾಹಂ ವರ್ಗಿಸ್ ಹಾಗೂ ಐತ್ತಪ್ಪ ನಾಯ್ಕ್‌ರನ್ನು ಸನ್ಮಾನಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.