Breaking News

ಐಷಾರಾಮಿ ವಿಲ್ಲಾಗಳ ವಸತಿ ಬಡಾವಣೆ ‘ಸನ್ನಿಧಿ’ ಲೋಕಾರ್ಪಣೆ

Puttur_Advt_NewsUnder_1
Puttur_Advt_NewsUnder_1

sannidhi

ಹೊಸ ಪರಿಕಲ್ಪನೆಯನ್ನು ಪುತ್ತೂರಿಗೆ ಪರಿಚಯಿಸಿದಂತಾಗಿದೆ-ಶಕುಂತಳಾ ಶೆಟ್ಟಿ

ಪುತ್ತೂರು: ಪುತ್ತೂರಿನಲ್ಲಿ ಸಾನ್ನಿಧ್ಯನಾದ, ಹತ್ತೂರ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ಕೃಪೆಯಿಂದ ಇಂತಹ ಐಷಾರಾಮಿ ವಿಲ್ಲಾಗಳ ವಸತಿ ಬಡಾವಣೆಯನ್ನು ಹೊಸ ಪರಿಕಲ್ಪನೆಯೊಂದಿಗೆ ಪುತ್ತೂರಿಗೆ ಪರಿಚಯಿಸಿದ ಹನಿವೇಲ್ ಡೆವಲಪರ್ಸ್‌ನ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕಿ ಶಕುಂತಳಾ ಟಿ.ಶೆಟ್ಟಿರವರು ಹೇಳಿದರು.

ಒಂದೇ ಕಂಪೌಂಡಿನಲ್ಲಿ ಹಲವು ಸ್ವತಂತ್ರ ಮನೆಗಳನ್ನು ನೂತನವಾಗಿ ನಿರ್ಮಿಸಿ, ಜನತೆಗೆ ಒದಗಿಸಿದ ಪುತ್ತೂರಿನ ಪ್ರಪ್ರಥಮ Approved Gated Community “ಸನ್ನಿಧಿ”ಯನ್ನು ಜ. 28ರಂದು ಅವರು ದೀಪ ಬೆಳಗಿಸಿ, ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದರು. ಪುತ್ತೂರಿನ ಆಕರ್ಷಣೆಗೊಂದು ಹೊಸ ಸೇರ್ಪಡೆಯಾದ ಐಷಾರಾಮಿ ವಿಲ್ಲಾಗಳ ವಸತಿ ಬಡಾವಣೆಯಾಗಿರುವ ಸನ್ನಿಧಿಯು ಮಾನವನ ಜೀವನಕ್ಕೆ ಹೊಸ ಬಣ್ಣವನ್ನು ನೀಡಲಿದೆ ಎಂದ ಅವರು ಇಂತಹ ಐಶಾರಾಮಿ ಸ್ವತಂತ್ರ ಮನೆಯನ್ನು ನಿರ್ಮಿಸಿದ ಹನಿವೇಲ್ ಡೆವಲಪರ್ಸ್ ಪಾಲುದಾರರಾದ ಸದಾಶಿವ ರಾವ್, ಸಂದೀಪ್ ಕಾಮತ್, ಅಡಪ ಅಸೋಸಿಯೇಟ್ಸ್‌ನ ಬಿ.ಜಿ.ಅಡಪ ಹಾಗೂ ಪ್ರಥಮ ವಿಲ್ಲಾವನ್ನು ಖರೀದಿಸಿದ ರತ್ನಾಕರ ಶೆಣೈ, ವಿಶ್ವಾಸ್ ಶೆಣೈ ಹಾಗೂ ಕುಟುಂಬದವರಿಗೆ ಶುಭ ಹಾರೈಸಿದರು.

 ಈ ಸಂದರ್ಭದಲ್ಲಿ ಪುಡಾ ಅಧ್ಯಕ್ಷ ಬೆಟ್ಟ ಈಶ್ವರ ಭಟ್, ಹನಿವೇಲ್ ಡೆವಲಪರ್ಸ್‌ನ ಪಾಲುದಾರರಾದ ಆರ್ಕಿಟೆಕ್ಟ್ ಸಂದೀಪ್ ಕಾಮತ್, ಸದಾಶಿವ ರಾವ್, ಅಡಪ ಅಸೋಸಿಯೇಟ್ಸ್‌ನ ಬಿ.ಜಿ.ಅಡಪ, ಪುಡಾ ಸದಸ್ಯ ಅಬ್ಬಾಸ್ ಮುರ, ಸನ್ನಿಧಿಯ ಪ್ರಥಮ ವಿಲ್ಲಾವನ್ನು ಖರೀದಿಸಿದ ವಿಶ್ವಾಸ್ ಶೆಣೈ, ಕೆ.ರತ್ನಾಕರ ಶೆಣೈ ಮತ್ತು ಕುಟುಂಬದವರು, ರೋಟರಿ ಕ್ಲಬ್‌ನ ಸದಸ್ಯರು, ಶಂಕರ್ ಗ್ರೂಪ್‌ನ ಸತ್ಯಶಂಕರ್, ಪಾಪ್ಯುಲರ್ ಸ್ವೀಟ್ಸ್‌ನ ನರಸಿಂಹ ಕಾಮತ್, ಪಡೀಲು ಅಶೋಕ ಸಂಕೀರ್ಣದಲ್ಲಿರುವ ಪ್ರಶಾಂತ್ ಎಂಟರ್‌ಪ್ರೈಸಸ್‌ನ ಪ್ರಶಾಂತ್, ಜೆ.ಕೆ. ಸೂಪರ್ ಮಾರ್ಕೆಟ್‌ನ ಜಯಕುಮಾರ್ ನಾಯರ್, ಪುತ್ತೂರು ವಿಜಯಲಕ್ಷ್ಮಿ ಎಂಟರ್‌ಪ್ರೈಸಸ್‌ನ ಪ್ರಶಾಂತ್ ಶೆಣೈ, ದರ್ಬೆ ವಿಜಯಲಕ್ಷ್ಮೀ ಇಲೆಕ್ಟ್ರಿಕಲ್ಸ್‌ನ ಚಂದ್ರಶೇಖರ್, ಪೈಂಟರ್ ಪದ್ಮನಾಭ, ಇಂಟೀರಿಯರ್ ಡೆಕೋರೇಟರ್ ಪ್ರಹ್ಲಾದ್, ಆಕಾಶ್ ನರ್ಸರಿಯ ಜಗದೀಶ್,  ಕಾತ್ಯಾಯಿನಿ ಟ್ರೇಡರ‍್ಸ್‌ನ ಮಂಜುನಾಥ್. ಪುತ್ತೂರು ಕೆನರಾ ಬ್ಯಾಂಕ್ ಬಳಿಯ ಕೆ.ಸುಧಾಕರ ಪ್ರಭು, ಕೆ.ಸುಧೀರ್ ಪ್ರಭು, ಸರಿತಾ ಎಸ್ ಪ್ರಭು, ಮಾರ್ಕ್ ಟೆಲಿಕಾಂನ ಶಶಿರಾಜ್ ರೈ, ಹಾಗೂ ವಿಶ್ವಾಸ್ ಶೆಣೈ ಕುಟುಂಬದವರ ಬಂಧು ಮಿತ್ರರು ಉಪಸ್ಥಿತರಿದ್ದರು. ಬಂದಂತಹ ಅತಿಥಿ ಅಭ್ಯಾಗತರನ್ನು ರತ್ನಾಕರ ಶೆಣೈ, ವಿಶ್ವಾಸ್ ಶೆಣೈ, ಶ್ರೀಕಾಂತ್ ಶೆಣೈ ದಂಪತಿ ಸ್ವಾಗತಿಸಿ, ಶರ್ಮಾಸ್ ಕಮ್ಯುನಿಕೇಷನ್ಸ್‌ನ ಅನ್ನಪೂರ್ಣ ಶರ್ಮ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಳಿಕ ಮಧ್ಯಾಹ್ನ ಸವಿ ಭೋಜನ ಕಾರ್ಯಕ್ರಮ ನಡೆಯಿತು.

ರತ್ನಾ’ ಗೃಹ ಪ್ರವೇಶ ಸನ್ನಿಧಿ ವಸತಿ ಬಡಾವಣೆಯ ಲೋಕಾರ್ಪಣೆಯ ದಿನವೇ ವಿಲ್ಲಾವನ್ನು ಖರೀದಿಸಿ, ನೂತನ ಮನೆ “ರತ್ನಾ”ದ  ಗೃಹ ಪ್ರವೇಶ ಹಾಗೂ ತಂದೆ ರತ್ನಾಕರ ಶೆಣೈಯವರ ೭೫ನೇ ವರ್ಷದ ಹುಟ್ಟು ಹಬ್ಬವನ್ನು ಬಂಧು ಮಿತ್ರರೊಡಗೂಡಿ ಆಚರಿಸಿ ಸಂಬಂಧಗಳನ್ನು ಇನ್ನಷ್ಟು ಗಟ್ಟಿಯಾಗಿಸಿ, ಮಾತಾಪಿತರನ್ನು ಗೌರವಿಸಿ, ಸಂಭ್ರಮ ಸಡಗರದಲ್ಲಿ ಬಂಧು ಮಿತ್ರರನ್ನು ಪಾಲುದಾರರನ್ನಾಗಿಸಿದ ವಿಶೇಷ ಸಮಾರಂಭವನ್ನು ಹಮ್ಮಿಕೊಂಡವರು ಕೆ.ವಿ.ಶೆಣೈ & ಕೋ. ಇದರ ಮಾಲಕ ವಿಶ್ವಾಸ್ ಶೆಣೈಯವರು. ಬೆಳಗ್ಗೆ ವೈದಿಕ ವಿಧಿ – ವಿಧಾನಗಳ ಮೂಲಕ “ರತ್ನಾ”  ನೂತನ ಗೃಹ ಪ್ರವೇಶ ಕಾರ್ಯಗಳು ನಡೆದು, ನಂತರ ರತ್ನಾಕರ ಶೆಣೈಯವರು ದೀಪ ಬೆಳಗಿ, ಮೊಮ್ಮಕ್ಕಳು, ಪತ್ನಿ ರತಿ ಆರ್.ಶೆಣೈ, ಮಕ್ಕಳು ಹಾಗೂ ಬಂಧು ಮಿತ್ರರೊಂದಿಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.