ವಿಟ್ಲ: ವಗೆನಾಡು ಬ್ರಹ್ಮಕಲಶೋತ್ಸವ- ಧರ್ಮಸಭೆ : ಸಮಾಜದ ಶಾಂತಿ ನೆಮ್ಮದಿ ದೇವತಾ ಕಾರ್ಯದ ಫಲ : ಡಾ|ಹೆಗ್ಗಡೆ

vagenadu

ವಿಟ್ಲ: ಸುಖ ದುಃಖಗಳನ್ನು ಸ್ವೀಕರಿಸುವ ಅಂತರಾತ್ಮ ಪರಿಶುದ್ಧವಾಗಿರಬೇಕು. ದೇವರ ಸೇವೆಯಲ್ಲಿ ನಾವು ನಿಮಿತ್ತ ಮಾತ್ರವಾಗಿದ್ದು, ದಾನ, ಶ್ರಮದಾನ ಭಕ್ತಿಯ ಶ್ರೇಷ್ಠ ಸೇವೆಗಳಾಗಿದೆ ಎಂದುಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಡಾ ಡಿ ವೀರೇಂದ್ರ ಹೆಗ್ಗಡೆ ನುಡಿದರು.

ಅವರು ಗುರುವಾರ  ಕರೋಪಾಡಿ ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಶ್ರೀ ಗಣಪತಿ ಸಹಿತ ಶ್ರೀ ಸುಬ್ರಾಯ ದೇವರ ಬಿಂಬಗಳ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕೋತ್ಸವ ಅಂಗವಾಗಿ ದೇವ ಸೇನಾನಿ ಚಾವಡಿಯಲ್ಲಿ ನಡೆದಧರ್ಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಗವಂತನಿಂದ ಬರುವ ಶಕ್ತಿಯನ್ನು ಭಕ್ತನಿಗೆ ಕೊಡಲು ಸಂಪರ್ಕ ಸಾಧನವಾಗಿ ದೇವಾಲಯಗಳಿವೆ. ದೇವರ ಕಾರ್ಯದ ಅಂತಿಮ ಫಲ ಸಮಾಜದ ಶಾಂತಿ ನೆಮ್ಮದಿಯಾಗಿರುತ್ತದೆ. ಡಾ. ಅಬ್ದುಲ್ ಕಲಾಂರಂತಹ ಮಹಾನ್ ವ್ಯಕ್ತಿಗಳು, ವಿಜ್ಞಾನಿಗಳು ದೇವರಅಸ್ತಿತ್ವದ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ತಿಳಿಸಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ಮಾಡುತ್ತಾದೇವ ಸೇನಾನಿಯ ಸೇವೆಯ ಕಾರ್ಯವನ್ನು ಪೂರೈಸಿದ ಯುವಕರು ರಾಷ್ಟ್ರ ಸೇನಾನಿಗಳಾಗಿದ್ದಾರೆ. ವಿಶ್ವದ ಉಳಿವು ಧರ್ಮದ ನೆಲೆಯಲ್ಲಿದೆ. ಗ್ರಾಮ ದೇವರ ಜೀರ್ಣೋದ್ಧಾರದ ಸೇವೆ ಪ್ರತಿಯೊಬ್ಬರ ಕರ್ತವ್ಯಎಂದು ತಿಳಿಸಿದರು. ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಉಪಸ್ಥಿತರಿದ್ದರು.

ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ಮೈಸೂರು ಉದ್ಯಮಿ ಮುರಳೀಧರ ಭಾಗವತ್, ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಸಂಚಾಲಕ ದೇವಿಪ್ರಸಾದ್ ಶೆಟ್ಟಿಕಲ್ಲಾಡಿ, ಕಡೆಂಜಿ ಶ್ರೀ ಮಹಾವಿಷ್ಣು ದೇವಸ್ಥಾನ ಮೊಕ್ತೇಸರ ಬಿ.ವಸಂತ ಪೈ ಬದಿಯಡ್ಕ, ದ ಕ ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಎಂ ಪುರುಷೋತ್ತಮ ಕೊಟ್ಟಾರಿ, ನಮ್ಮಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೇರ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ವಾಮಯ್ಯ ಶೆಟ್ಟಿ ಮುಂಬಯಿ, ಕಾಪಿಕಾಡು ಉಮಾಪುರಿ ಶ್ರೀ ಉಮಾಮಹೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಎ.ಜೆ. ಶೇಖರ್, ಮುಂಬಯಿ ಉದ್ಯಮಿ ದಾಮೋದರ ಶೆಟ್ಟಿ ನೆರುಳ್, ಅಂಬರನಾಥ್ ನವರಂಗ್ ಹಾಸ್ಪಿಟಾಲಿಟಿ ಆಡಳಿತ ನಿರ್ದೇಶಕ ಸುರೇಂದ್ರ ರೈ ಕೋಡಂದೂರುಗುತ್ತು, ಮಂಗಳೂರು ಬಂಟರ ಮಾತೃ ಸಂಘ ನಿರ್ದೇಶಕ ಸೀತಾರಾಮ ಶೆಟ್ಟಿಕೊಲ್ಯ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಸುರೇಶ್ ರೈ ಎ., ನಿರ್ದೇಶಕರಾದಎಚ್ ಕೆ ಪುರುಷೋತ್ತಮ, ಪದ್ಮನಾಭ ಶೆಟ್ಟಿ ಪುತ್ತೂರು, ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸ್ವರ್ಣೋದ್ಯಮಿ ಸದಾಶಿವ ಆಚಾರ್ಯಕೈಂತಿಲ, ಈಶ್ವರ ಉಳ್ಳಾಲ್, ದೇವಸ್ಥಾನ ಆಡಳಿತ ಮುಕ್ತೇಸರ ಮುಗುಳಿ ತಿರುಮಲೇಶ್ವರ ಭಟ್ಟ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಒ ಶ್ಯಾಮ್ ಭಟ್‌ಒಡಿಯೂರು, ಬ್ರಹ್ಮಕಲಶೋತ್ಸವ ಜೀರ್ಣೋದ್ಧಾರ ಸಮಿತಿ ಆರ್ಥಿಕ ಸಮಿತಿ ಪ್ರಧಾನ, ಪ್ರಸಿದ್ಧ ಭಾಗವತ ಸತೀಶ ಶೆಟ್ಟಿ ಪಟ್ಲಗುತ್ತು ಪ್ರಾರ್ಥಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಸೇರಾಜೆ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು ಪ್ರಸ್ತಾವನೆಗೈದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ ವಿಘ್ನೇಶ್ವರ ಭಟ್ ಅನಿಯಾಲಕೋಡಿ ವಂದಿಸಿದರು. ಸಭಾಕಾರ್ಯಕ್ರಮ ನಿರ್ವಹಣಾ ಸಮಿತಿ ಪ್ರಧಾನ ಸಂಚಾಲಕ ಮಾತೇಶ್ ಭಂಡಾರಿ ಕನ್ಯಾನ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ: ಜ್ಯೋತಿಷ್ಯ ಸತೀಶ್ ಪಣಿಕ್ಕರ್, ದೈವಜ್ಞರು ವೇ.ಮೂ. ಬೋಳಂತಕೋಡಿ ರಾಮ ಭಟ್, ವಾಸ್ತು ಶಿಲ್ಪಿ ಪ್ರಸಾದ್ ಮುನಿಯಂಗಳ, ಕಾಷ್ಠ ಶಿಲ್ಪಿಗಳಾದ ನಾರಾಯಣ ಆಚಾರ್ಯ, ಹರೀಶ್ ಆಚಾರ್ಯ ಮೂಡಬಿದ್ರೆ, ಕಲ್ಲಿನ ಶಿಲ್ಪಿ ದಿನೇಶ್ ಆಚಾರ್ಯ ಪಟ್ಲ ಅವರನ್ನು ಸನ್ಮಾನಿಸಲಾಯಿತು. ನಾಡುನುಡಿಗಾಗಿಸೇವೆ ಸಲ್ಲಿಸಿದ ಪಟ್ಲಗುತ್ತು ಮಹಾಬಲ ಶೆಟ್ಟಿ, ಒಡಿಯೂರು ಶ್ರೀಗಳ ಮಾತೃಶ್ರೀ ಅಂತಕ್ಕೆ, ಕೃಷ್ಣಪ್ಪ ವರ್ಕಾಡಿ ಅವರನ್ನು ಗೌರವಿಸಲಾಯಿತು.ದೇವಾಲಯ ನಿರ್ಮಾಣದಲ್ಲಿ ಸಹಕರಿಸಿದ ದಾನಿಗಳನ್ನು ಗುರುತಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.