ಪುತ್ತೂರು ಗಾಂಧಿ ಕಟ್ಟೆಯಲ್ಲಿ ಹುತಾತ್ಮರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು ಬಸ್ ನಿಲ್ದಾಣದ ಬಳಿ ಇರುವ ಗಾಂಧಿ ಕಟ್ಟೆಯಲ್ಲಿ ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರ ಪುಣ್ಯಸ್ಮರಣೆ ಅಂಗವಾಗಿ ಹುತಾತ್ಮರ ದಿನಾಚರಣೆ ಆಚರಿಸಲಾಯಿತು. ಮಾಹಾತ್ಮಾಗಾಂಧಿಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ ಎಸ್.ಐ ನಾಗರಾಜ್ ರವರು ಗಾಂಧೀಜಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ದೇಶಾದ್ಯಂತ ಇಂದು ಹುತಾತ್ಮರ ದಿನಾಚರಣೆ ನಡೆಯುತ್ತಿದ್ದು ಗಾಂಧೀಜಿಯವರ ತ್ಯಾಗ, ಅಹಿಂಸೆ ಮೈಗೂಡಿಸಿಕೊಂಡು ದೇಶದ ಸಾರ್ವಭೌಮತೆಗೆ ನಾವೆಲ್ಲರೂ ಕಂಕಣಬದ್ಧರಾಗಬೇಕು ಎಂದರು. ಗಾಂಧಿ ಕಟ್ಟೆ ಅಭಿವೃದ್ಧ ಸಮಿತಿಯ ಉಪಧ್ಯಕ್ಷ, ನಿವೃತ್ತ ಪ್ರಾಧ್ಯಾಪಕರೂ ಆದ ಪ್ರೊ. ಬಿ.ಜೆ ಸುವರ್ಣರವರು ಮಾತನಾಡಿ ಮಹಾತ್ಮಾ ಗಾಂಧೀಜಿಯವರು ಅಖಂಡತೆಯ ಉಳಿವಿಗಾಗಿ ಶ್ರಮಿಸಿದವರಾಗಿದ್ದಾರೆ. ಅವರ ಅಹಿಂಸಾ ತತ್ವವು ಸ್ವಾತಂತ್ರ್ಯಕ್ಕೆ ನಾಂದಿಯಾಯಿತು. ಅವರ ಹಾದಿಯು ನಮಗೆಲ್ಲಾ ದಾರಿದೀಪವಾಗಲಿದೆ ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ವಿವಿಧ ಪದಾಧಿಕಾರಿಗಳಾದ ನಗರಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ರಮೇಶ್ ಬಾಬು, ಎನ್.ಕೆ ಜಗನ್ನಿವಾಸ ರಾವ್, ಇಸಾಕ್ ಸಾಲ್ಮರ, ಸೈಯ್ಯದ್ ಕಮಾಲ್, ಕೃಷ್ಣಪ್ರಸಾದ್ ಆಳ್ವ, ಪುರಸಭಾ ಮಾಜಿ ಅಧ್ಯಕ್ಷೆ ಪ್ರೇಮಲತಾ, ರೋಶನ್ ರೈ ಬನ್ನೂರು, ಸೀತಾರಾಮ ಶೆಟ್ಟಿ ಬನ್ನೂರು, ಜಯಕರ್ನಾಟಕದ ಪದಾಧಿಕಾರಿ ರಫೀಕ್, ಅಬೂಬಕ್ಕರ್ ಪರ್ಲಡ್ಕ, ನಗರಸಭಾ ಸದಸ್ಯ ನವೀನ್ ಚಂದ್ರ ನೈಕ್ ಬೆದ್ರಾಳ, ನಾರಾಯಣ ಕುಡ್ವ, ಯುವ ಕಾಗ್ರೆಸ್ ಅಧ್ಯಕ್ಷ ಅರ್ಷದ್ ದರ್ಬೆ, ಯಾಕೂಬ್ ಹಾಜಿ ದರ್ಬೆ ಮೊದಲಾದವರು ಪಾಲ್ಗೊಂಡಿದ್ದರು.

ಅಗ್ನಿಶಾಮಕ ದಳದವರಿಂದ ಸೈರನ್ ಮೊಳಗಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಎಲ್ಲಾ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.