ಫೆ.2: ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುತ್ತೂರು ಘಟಕದಿಂದ ವಜ್ರಮಾತ ಕಲ್ಪೋಕ್ತ ಪೂಜೆ 

Puttur_Advt_NewsUnder_1
Puttur_Advt_NewsUnder_1

20160130_114529

ಪುತ್ತೂರು: ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸಹಯೋಗದೊಂದಿಗೆ ಇತ್ತೀಚೆಗೆ ಪುತ್ತೂರಿನಲ್ಲಿ ಅಸ್ತಿತ್ವಕ್ಕೆ ಬಂದ ಪುತ್ತೂರು ಘಟಕದ ಆಶ್ರಯದಲ್ಲಿ ಫೆ.2ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಸಾರ್ವಜನಿಕ ವಜ್ರಮಾತಾ ಕಲ್ಪೋಕ್ತ ಪೂಜೆ ಮತ್ತು ಘಟಕದ ಉದ್ಘಾಟನಾ ಸಮಾರಂಭ ನಡೆಯಲಿದೆ.

ಬೆಳಿಗ್ಗೆ ಒಡಿಯೂರು ಶ್ರೀ ದತ್ತಾಂಜನೇಯ ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಕ್ಷೇತ್ರದ ಶ್ರೀ ಮಾತಾನಂದಮಯಿ ವಿಶೇಷ ಗೌರವ ಉಪಸ್ಥಿತಿಯಲ್ಲಿರುವರು. ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿ, ಜಿ.ಪಂ ಅಧ್ಯಕ್ಷ ಆಶಾ ತಿಮ್ಮಪ್ಪ ಗೌಡ, ಪೌರಾಯುಕ್ತೆ ರೇಖಾ ಜೆ.ಶೆಟ್ಟಿ, ವಿವೇಕಾನಂದ ಬಿ.ಎಡ್.ಕಾಲೇಜಿನ ಉಪನ್ಯಾಸಕಿ ಡಾ| ಶೋಭಿತಾ ಸತೀಶ್‌ರವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪೂರ್ವ ಭಾವಿ ಸಭೆ:

ಕಾರ್ಯಕ್ರಮದ ಪೂರ್ವ ತಯಾರಿಯಾಗಿ ಜ.30ರಂದು ಇಲ್ಲಿನ ಲಯನ್ಸ್ ಕ್ಲಬ್‌ನಲ್ಲಿ ಸಮಿತಿ ಮುಖಂಡರುಗಳ ಸಭೆ ನಡೆಯಿತು. ವಜ್ರಮಾತಾ ಮಹಿಳಾ ಸಂಘಟನೆಯ ಅಧ್ಯಕ್ಷೆ ನಯನಾ ರೈ, ಕಾರ್ಯದರ್ಶಿ ಶಾರದಾ ಅರಸ್, ಕೋಶಾಧಿಕಾರಿ ಮೀನಾಕ್ಷಿ ರಾಮಚಂದ್ರ, ಒಡಿಯೂರು ಗುರುದೇವಾ ಬಳಗದ ಗೌರವಾಧ್ಯಕ್ಷ ದೇವಪ್ಪ ನೋಂಡಾ, ಪದ್ಮನಾಭ ಶೆಟ್ಟಿ, ಪ್ರೇಮಲತಾ ರಾವ್, ಕಸುಮಾ, ಹರೀಣಾಕ್ಷಿ ಜೆ.ಶೆಟ್ಟಿ, ಉದಯ ಕಮಾರ್ ಹೆಚ್, ಸೋಜಿನಿ,  ಯಮುನಾ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.