ಫೆ.1ಕ್ಕೆ ಮಾಡನ್ನೂರು ತಾಜುಲ್ ಉಲಮಾ ದಅವಾ ಸೆಂಟರ್ ಶಿಲಾನ್ಯಾಸ, ತಾಜುಲ್ ಉಲಮಾ ಅನುಸ್ಮರಣಾ ಸುನ್ನೀ ಮಹಾ ಸಮ್ಮೇಳನ

Puttur_Advt_NewsUnder_1
Puttur_Advt_NewsUnder_1

20160130_103728

ಪುತ್ತೂರು: ಮಾಡನ್ನೂರು ತಾಜುಲ್ ಉಲಮಾ ದಅವಾ ಸೆಂಟರ್‌ನ ಶಿಲಾನ್ಯಾಸ ಮತ್ತು ತಾಜುಲ್ ಉಲಮಾ ಅನುಸ್ಮರಣಾ ಸುನ್ನೀ ಮಹಾ ಸಮ್ಮೇಳನ ಕಾರ್ಯಕ್ರಮ ಫೆ.1ರಂದು ಕಾವು ತಾಜುಲ್ ಉಲಮಾ ನಗರದಲ್ಲಿ ಜರುಗಲಿದೆ ಎಂದು ಎಸ್.ವೈ. ಎಸ್ ಅಧ್ಯಕ್ಷ ಅಬ್ದುಲ್ ಸಖಾಫಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬಡ ಮತ್ತು ನಿರ್ಗತಿಕರ ಮಕ್ಕಳಿಗೆ ಅಗತ್ಯವಾಗಿ ಬೇಕಾದ ಶಿಕ್ಷಣ, ಬಡ ಹೆಣ್ಮಕ್ಕಳ ಮದುವೆಗೆ ಸಹಾಯ ಧನ ನೀಡುವ ಮೂಲಕ ತಾಜುಲ್ ಉಲಮಾ ದಅವಾ ಸೆಂಟರ್ ಮುಖ್ಯ ಪಾತ್ರ ವಹಿಸಿದ್ದು, ಸ್ಥಳೀಯವಾಗಿ ನಿಧನರಾದ ಕುಟುಂಬದ ಮನೆಗೆ ಹೋಗಿ ಮರಣದ ಧಾರ್ಮಿಕ ಕಾರ್ಯ ಮಾಡಲು ಸಹಾಯ ಮಾಡುತ್ತಿದೆ. ಇದರ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಸುಮಾರು ರೂ.90 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ತಾಜುಲ್ ಉಲಮಾ ದಅವಾ ಸೆಂಟರ್‌ನ ಶಿಲಾನ್ಯಾಸ ಕಾರ್ಯಕ್ರಮ ಮಾಡನ್ನೂರಿನ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಬಳಿಕ ಕಾವು ತಾಜುಲ್ ಉಲಮಾ ನಗರದಲ್ಲಿ ಮೌಲನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿಯವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ ಎಂದು ಹೇಳಿದ ಅವರು ಅಸ್ಯಯ್ಯದ್ ಪೂಕುಂಞಿ ತಂಙಳ್ ಆದೂರು ದುಆ ನೆರವೇರಿಸಲಿದ್ದಾರೆ. ವಕ್ಫ್ ಬೋರ್ಡ್‌ನ  ನಿರ್ದೇಶಕ ಎಸ್.ಎಸ್.ಎಫ್ ರಾಜ್ಯಾಧ್ಯಕ್ಷ ಎನ್.ಕೆ.ಎಂ. ಶಾಫಿ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸಲಿದ್ದಾರೆ. ಕಾಸರಗೋಡಿನ ಅಸ್ಸಯ್ಯಿದ್ ಹಾಫಿಳ್ ಫಖ್ರುದ್ದೀನ್ ಸಖಾಫಿ ಉದ್ಘಾಟಿಸಲಿದ್ದಾರೆ. ಸಮಾರಂಭಕ್ಕೆ ಬೆಳ್ಳಾರೆಯ ಅಸ್ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್, ಕಾಸರಗೋಡಿನ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ತಂಙಳ್ ಮಜ್‌ಲಿಸ್, ಕುಂಬ್ರ ಮರ್ಕಝ್‌ಲ್ ಹುದಾ ಅಧ್ಯಕ್ಷ ಇಸ್ಮಾಯಿಲ್ ಹಾದಿ ತಂಙಳ್, ಎಣ್ಮೂರಿನ ಝೈನುಲ್ ಅಬಿದೀನ್ ಸಖಾಫಿ, ಕರ್ನಾಟಕ ರಾಜ್ಯ ಎಸ್.ವೈ.ಎಸ್ ಉಪಾಧ್ಯಕ್ಷ ಎಪಿಎಸ್ ಆಟಕ್ಕೋಯ ತಂಙಳ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.  ಪತ್ರಿಕಾಗೋಷ್ಠಿಯಲ್ಲಿ ತಾಜುಲ್ ಉಲಮಾದ ಕಾರ್ಯದರ್ಶಿ ಅಬ್ದುಲ್ ಸಲಾಂ ಕಾವು, ಸುನ್ನಿ ಜಮಯ್ಯುತ್ತುಲ್‌ನ ಅಬ್ದುಲ್ಲಾ ಅಸಾಅದಿ ಮಾಡನ್ನೂರು, ಎಸ್.ವೈ.ಎಸ್‌ನ ಕಾರ‍್ಯದರ್ಶಿ ಇಬ್ರಾಹಿಂ ಸಅದಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.