Breaking News

ಫೆ.1: ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಎಡನೀರು ಯಕ್ಷಗಾನ ಬಯಲಾಟ ಯಕ್ಷೋತ್ಸವ ಪ್ರಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಾಸರಗೋಡು, ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ವತಿಯಿಂದ  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ದೇವಳದ ನಟರಾಜ ವೇದಿಕೆಯಲ್ಲಿ ಫೆ.1 ರಿಂದ 10 ತನಕ ಯಕ್ಷಗಾನ ಬಯಲಾಟ ಯಕ್ಷೋತ್ಸವ ನಡೆಯಲಿದೆ. ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವವಚನ ನೀಡಲಿದ್ದಾರೆ. ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ಣಾಟಕ ಬ್ಯಾಂಕ್‌ನ ಚೀಫ್ ಜನರಲ್ ಮ್ಯಾನೇಜರ್ ಮಹಾಬಲೇಶ್ವರ ಎಂ.ಎಸ್. ಅಧ್ಯಕ್ಷತೆ ವಹಿಸಲಿದ್ದಾರೆ. ಮಣಿಪಾಲ  ಖ್ಯಾತ ಮೂಳೆ ತಜ್ಞ ಡಾ| ಭಾಸ್ಕರಾನಂದ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸೇವಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಫೆ.1ರಂದು  ಓಂ ನಮಃ ಶಿವಾಯ, ಫೆ.2ಕ್ಕೆ ಲವಣಾಸುರ -ಕುಶಲವ, ಫೆ.3 ಕ್ಕೆ ನರಕಾಸುರ – ಮೈಂದ ದ್ವಿವಿಧ, ಫೆ.4ಕ್ಕೆ ಗದಾಪರ್ವ-ರಕ್ತರಾತ್ರಿ, ಫೆ.5ಕ್ಕೆ ಭಕ್ತ ಸುದಾಮ – ವೀರ ಅಭಿಮನ್ಯು, ಫೆ.6ಕ್ಕೆ ಕಾರ್ತವೀರ್ಯಾರ್ಜುನ, ಫೆ.7ಕ್ಕೆ ಗಿರಿಜಾ ಕಲ್ಯಾಣ, ಫೆ.8ಕ್ಕೆ ಮಹಿಷ ಮರ್ಧಿನಿ, ಫೆ.9ಕ್ಕೆ ವೀರಮಣಿ ಕಾಳಗ, ಫೆ.10ಕ್ಕೆ ಪಾಂಚಜನ್ಯ – ಅಗ್ರಪೂಜೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.