ಚುನಾವಣೆ ಪ್ರಕ್ರಿಯೆ : ತಾಲೂಕಿನ ಮೂರು ಬೂತ್‌ಗಳ ಬದಲಾವಣೆಗೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ

Puttur_Advt_NewsUnder_1
Puttur_Advt_NewsUnder_1

20160130_113940

ಪುತ್ತೂರು: ಮುಂದಿನ ದಿನಗಳಲ್ಲಿ ಬರುವ ಚುನಾವಣೆಗೆ ಸಂಬಂಧಿಸಿ ತಾಲೂಕಿನ ಕೆಲವೊಂದು ಬೂತ್‌ಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲು ಕಷ್ಟ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಆಯ್ದ ಮೂರು ಬೂತ್‌ಗಳ ಬದಲಾವಣೆಗಾಗಿ ಜ.30ರಂದು ತಹಶೀಲ್ದಾರ್ ಸಣ್ಣರಂಗಯ್ಯರವರ ನೇತೃತ್ವದಲ್ಲಿ ತಹಶೀಲ್ದಾರ್ ಸಭಾಂಗಣದಲ್ಲಿ ಸಹಾಯಕ ಕಮಿಷನರ್‌ಗೆ ಡಾ. ರಾಜೇಂದ್ರ ಕೆ.ವಿಯವರ ಮೂಲಕ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಯಿತು.

ಕೋಣಾಲುವಿನಲ್ಲಿ 1326 ಮತದಾರರಿಗೆ ದ.ಕ.ಜಿ.ಪಂ ಶಾಲೆಯ ದಕ್ಷಿಣ ಭಾಗದ ಮತದಾನ ಕೇಂದ್ರದಿಂದ ಸರಕಾರಿ ಪ್ರೌಢಶಾಲೆಗೆ ಸ್ಥಳಾಂತರಿಸುವುದು, ಪಿಜಕ್ಕಳ ಸರಕಾರಿ ಪದವಿ ಪೂರ್ವ ಪಶ್ಚಿಮ ಭಾಗದ ಮತದಾನ ಕೇಂದ್ರದಿಂದ ದ.ಕ.ಜಿ.ಪಂ ಪಿಜಕ್ಕಳ ಶಾಲೆಗೆ ಸ್ಥಳಾಂತರಿಸುವುದು ಮತ್ತು ಹಿರೇಬಂಡಾಡಿ ದ.ಕ. ಹಿ.ಪ್ರಾ.ಶಾಲೆಯ ಹೊಸಕಟ್ಟಡದಲ್ಲಿದ್ದ ಮತದಾನ ಕೇಂದ್ರವನ್ನು ಗ್ರಾ.ಪಂ ಸಮುದಾಯ ಭವನಕ್ಕೆ ಸ್ಥಳಾಂತರಿಸುವ ಕುರಿತ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗೆ ಸಹಾಯಕ ಕಮೀಷನರ್ ರಾಜೇಂದ್ರ ಕೆ.ವಿ.ಯವರು ಕಳುಹಿಸಲು ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಂಭು ಭಟ್‌ರವರು ಮಾತನಾಡಿ ಇಡಬೆಟ್ಟು ಕಡೆಯಿಂದ ಮತದಾನಕ್ಕಾಗಿ ಸುಮಾರು 5 ಕಿ.ಮೀ ಅಂತರದಲ್ಲಿ ಕುರಿಯ ಶಾಲೆಯಲ್ಲಿ ಮತದಾನ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇಡಬೆಟ್ಟುವಿನಲೇ ಮತದಾನ ಕೇಂದ್ರ ಆಗಬೇಕಾಗಿದೆ ಎಂದು ಮನವಿ ಸಲ್ಲಿಸಿದರು. ಉತ್ತರಿಸಿದ ಸಹಾಯಕ ಕಮೀಷನರ್‌ರವರು ಮುಂದಿನ ಅವಧಿಯಲ್ಲಿ ಪರಿಶೀಲಿಸಲಾಗುವುದು ಎಂದರು. ಸಭೆಯಲ್ಲಿ ತಹಶೀಲ್ದಾರ್ ಸಣ್ಣರಂಗಯ್ಯ, ಉಪತಹಶೀಲ್ದಾರ್ ಶ್ರೀಧರ್ ಕೆ, ಉಪ್ಪಿನಂಗಡಿಯ ಉಪತಹಶೀಲ್ದಾರ್ ಸದಾಶಿವ ನಾಯ್ಕ, ನಾಗೇಶ್, ಜೆಡಿಎಸ್‌ನ ತಾಲೂಕು ಅಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ, ಬಹುಜನ ಸಮಾಜವಾದಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.