Breaking News

ಬಂದ್ ವಿರೋಧಿ ಸುದ್ದಿ ಆಂದೋಲನಕ್ಕೆ ‘ಸುವಿಚಾರ’ ಬಳಗದಿಂದ ಸಂಪೂರ್ಣ ಬೆಂಬಲ

Puttur_Advt_NewsUnder_1
Puttur_Advt_NewsUnder_1

ಡಾ.ಯು.ಪಿ ಶಿವಾನಂದ ರವರ ನೇತೃತ್ವದಲ್ಲಿ ‘ಸುದ್ದಿ ಬಿಡುಗಡೆ’ಯು ನಡೆಸಿ ಬರುತ್ತಿರುವ ಬಂದ್ ವಿರೋಧಿ ಚಳುವಳಿಗೆ, ಸಾಮಾಜಿಕ ತಾಣದ ಯುವ ಬರಹಗಾರರನ್ನು ಪ್ರೋತ್ಸಾಹಿಸುತ್ತಿರುವ ಹಾಗೂ ಹೊಸ ಸಾಹಿತಿಗಳನ್ನು ಸಮಾಜಕ್ಕೆ ಅರ್ಪಿಸುತ್ತಿರುವ, ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಬಳಗವಾದ ‘ಸುವಿಚಾರ’ವು ಸಂಪೂರ್ಣ ಬೆಂಬಲ ಘೋಷಿಸಿದೆ.

ಈಗಾಗಲೇ ಬ್ಲಾಗ್, ವಾಟ್ಸಪ್, ಫೇಸ್ಬುಕ್ ಹಾಗೂ ಹೈಕ್ ಗಳಲ್ಲಿ ಕಾರ್ಯಾಚರಿಸುತ್ತಾ, ಸಾಮಾಜಿಕ ತಾಣಗಳ ಮೂಲಕ ಸಮಾಜಕ್ಕೆ ಹೊಸ ಸಂದೇಶವನ್ನು ಹಾಗೂ ಹೊಸ ಪ್ರತಿಭೆಯನ್ನು ಅರ್ಪಿಸುತ್ತಿರುವ ಸುವಿಚಾರ’ ಬರಹಗಾರರ ಬಳಗವು ಸುದ್ದಿ ಆಂದೋಲನಕ್ಕೆ ಬೆನ್ನೆಲುಬಾಗಲು ಸಜ್ಜಾಗಿದೆ. ತನ್ನ ಲೇಖನಿಯ ಶಕ್ತಿಯಿಂದ ಬಲವಂತ ಮತ್ತು ಅನಗತ್ಯ ಬಂದ್’ನ್ನು ವಿರೋಧಿಸಿ, ಲೇಖನಗಳು, ಕವನಗಳ ಮೂಲಕ ಬಂದ್ ಬಗ್ಗೆ ಸಾಮಾಜಿಕ ತಾಣ ಬಳಕೆದಾರರಲ್ಲಿ ಜಾಗೃತಿ ಮೂಡಿಸುವಲ್ಲಿ ಸುವಿಚಾರ’ ಪ್ರಯತ್ನಿಸಲಿದೆ.

 ಬಂದ್ ಗೆ ಕರೆ ನೀಡಿದವರೇ ಪರಿಹಾರ ನೀಡಬೇಕು: ಸುದ್ದಿ ಆಂದೋಲನದ ಮೂಲ ಘೋಷಣೆಯಾದ ‘ಬಂದ್ ಗೆ ಕರೆ ಕೊಟ್ಟವರೇ ಪರಿಹಾರ ನೀಡಬೇಕು’ ಎಂಬ ಮಹತ್ವಪೂರ್ಣ ಘೋಷಣೆಯನ್ನು ಸುವಿಚಾರ ಪ್ರೋತ್ಸಾಹಿಸಿದೆ. ಅನಗತ್ಯವಾಗಿ ಹಾಗೂ ಬಲವಂತವಾಗಿ ಬಂದ್ ನಡೆಸಿ, ಸಾಮಾನ್ಯ ಜನರು, ಕೂಲಿ ಕೆಲಸಗಾರರು, ವ್ಯಾಪಾರಿಗಳು ಸೇರಿದಂತೆ ಎಲ್ಲಾ ಸಾರ್ವಜನಿಕರಿಗೂ ಬೃಹತ್ ಪ್ರಮಾಣದ ತೊಂದರೆ, ನಷ್ಟ ಸಂಭವಿಸುತ್ತದೆ. ಅಲ್ಲದೇ, ಬಂದ್ ಕಾರಣದಿಂದಾಗಿ ನಡೆಯುವ ಕೋಮುಗಲಭೆ, ದೊಂಬಿಗಳಿಂದ ಪ್ರಾಣ/ಆಸ್ತಿ ಹಾನಿ ಉಂಟಾಗುತ್ತದೆ. ಇದಕ್ಕೆಲ್ಲಾ ಬಂದ್ ಕರೆ ನೀಡಿದವರೇ ಪರಿಹಾರ ನೀಡಬೇಕು. ಬಲವಂತ ಬಂದ್ ಖಂಡಿತವಾಗಿಯೂ ತಪ್ಪು. ಬಂದ್ ನ್ನು ಬೆಂಬಲಿಸುವ ಇಚ್ಛೆ ಜನರಿಗಿದ್ದರೆ ಸ್ವತಃ ಅವರೇ ಬಂದ್ ಮಾಡುತ್ತಾರೆ. ಅಲ್ಲದೇ ಬಂದ್ ಆಚರಿಸದವರನ್ನು ಬಲವಂತವಾಗಿ ಬಂದ್ ಮಾಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಬಂದ್ ಕಾರಣದಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಹೆಚ್ಚಿನ ತೊಂದರೆಯುಂಟಾಗುತ್ತದೆ. ಈ ಎಲ್ಲಾ ನಿಟ್ಟಿನಲ್ಲಿ ಭಾರತವನ್ನು ‘ಬಂದ್ ಮುಕ್ತ ದೇಶ’ವನ್ನಾಗಿ ಪರಿವರ್ತಿಸಿದರೆ ಖಂಡಿತವಾಗಿಯೂ ದೇಶ ಮತ್ತಷ್ಟು ಅಭಿವೃದ್ಧಿಯಾಗಲಿದೆ.

ಈ ಬಂದ್ ಎಂಬ ಅನಾಚಾರದಿಂದಾಗಿ ಹಲವಾರು ನಾಗರೀಕರು ಕಷ್ಟಗಳನ್ನು ಅನುಭವಿಸುವಂತಾಗುತ್ತದೆ. ಬಂದ್ ಗೆ ಕರೆ ನೀಡಿದವರು ಯಾವುದೇ ನಷ್ಟ -ಕಷ್ಟ ಅನುಭವಿಸದೇ ಇದರಿಂದ ಲಾಭವನ್ನೇ ಪಡೆಯುತ್ತಾರೆ. ಒಬ್ಬನ ಲಾಭಕ್ಕಾಗಿ ಸಮಾಜ ಕಷ್ಟದಲ್ಲಾಗುವುದು ಸರಿಯಲ್ಲ. ಆದುದರಿಂದ ದೇಶದಲ್ಲಿ ಬಂದ್’ ಕೊನೆಗೊಳ್ಳಬೇಕು. ಇದಕ್ಕೆ ‘ಸುದ್ದಿ ಬಿಡುಗಡೆ’ ಒಂದು ಹೊಸ ಚಳುವಳಿ ನಡೆಸಿ ದೇಶದಲ್ಲೇ ಮಾದರಿಯಾಗಿದೆ ಹಾಗೂ ಸದ್ಯದಲ್ಲೇ ಯಶಸ್ಸು ಕಾಣಲಿದೆ ಎಂದು ‘ಸುವಿಚಾರ’ ಅಡ್ಮಿನ್ ಹಕೀಂ ಪದಡ್ಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 ಸುದ್ದಿ ಯ ಈ ಆಂದೋಲನಕ್ಕೆ ಸಹಕಾರಿಯಾಗಿ ಸುವಿಚಾರ’ವು ಯುವ ಲೇಖಕರಿಂದ ಬರಹಗಳನ್ನು ಆಹ್ವಾನಿಸಿ, ಅದನ್ನು ಸಾಮಾಜಿಕ ತಾಣಗಳಲ್ಲಿ ಪ್ರಕಟಿಸುವ ಮೂಲಕ ಸಾಮಾಜಿಕ ತಾಣದಲ್ಲಿ ಹೊಸ ಚಳುವಳಿ ನಡೆಸಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.