ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ 3ನೇ ವಾರ್ಷಿಕೋತ್ಸವ ಜ. 31ರಂದು ಪುತ್ತೂರು ಪುರಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ದೀಪ ಬೆಳಿಗಿಸಿ ಉದ್ಘಾಟಿಸಿದ ಪುತ್ತೂರು ಸಹಕಾರಿ ಜನತಾ ಬಜಾರ್‌ನ ನಿವೃತ್ತ ನೌಕರ ಲಿಂಗಪ್ಪ ಸಾಲಿಯಾನ್‌ರವರು ಮಾತನಾಡಿ, ಜಾತಿ ಸಂಘಟನೆ ಸಮಾಜದ ಅಭಿವೃದ್ಧಿಗೆ. ಸಂಘಟನೆಯು ಬೆಳೆಯಬೇಕಾದರೆ ಸಮಾಜದ ಪ್ರತಿಯೊಬ್ಬರು ಒಟ್ಟು ಸೇರಬೇಕು. ಸಮಾಜ ಬಾಂಧವರು ಸಂಘಟನೆಯೊಂದಿಗೆ ಕೈಜೋಡಿಸಿದಾಗ ಸಂಘಟಯು ಬಲಿಷ್ಠವಾಗುವುದರ ಜೊತೆಗೆ ಸಮಾಜವು ಬಲಿಷ್ಠವಾಗಲು ಸಾಧ್ಯ ಎಂದರು. ಸಂಘಟನೆಯ ಮೂಲಕ ಸರಕಾರದ ಸವಲತ್ತುಗಳನ್ನು ಪಡೆದುಕೊಂಡು ಸಮಾಜ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದು ಹೇಳಿದರು. ಸಂಘದ ಸ್ಥಾಪಕ ಅಧ್ಯಕ್ಷ ಚಂದ್ರ ಐ ಇದ್ಪಾಡಿ ಮಾತನಾಡಿ, ಜಾತಿ ಸಂಘಟನೆಗಳ ಮೂಲಕ ಜಾತಿಯ ಮಹತ್ವವನ್ನು ಯುವ ಜನತೆಗೆ ತಿಳಿಸಬೇಕು. ಆ ಮೂಲಕ ನಮ್ಮ ಸಂಸ್ಕಾರ ಸಂಸ್ಕೃತಿಗಳನ್ನು ಉಳಿಸಬೇಕು ಎಂದು ಹೇಳಿದರು. ಸಂಘದ ಅಧ್ಯಕ್ಷ ಡೊಂಬಯ್ಯ ಕಾಪೆಜಾಲು ಅಧ್ಯಕ್ಷತೆ ವಹಿಸಿದ್ದರು. ನಲಿಕೆಯವರ ಸಮಾಜದ ಜಿಲ್ಲಾಧ್ಯಕ್ಷ ನೋಣಯ್ಯ ಬಂಗೇರ ವರಂಗ, ಬಂಟ್ವಾಳ ಮಹಿಳಾ ವೇದಿಕೆಯ ಅಧ್ಯಕ್ಷೆ ಚೆನ್ನಮ್ಮ, ಕೆಎಸ್‌ಆರ್‌ಟಿಸಿ ಸಿಬಂದಿ ಸಂಜೀವ ಬೆಳ್ತಂಗಡಿ, ಕುಟ್ಟಿ ನಲಿಕೆ ಕಡ್ಯ ಹೊಸ್ಮಠ, ಜಯಾನಂದ ಕಾಂಚನ, ರಾಮನ್ಣ ಪಿಲಿಂಜತಾಲೂಕು ಮಹಿಳಾ ವೇದಿಕೆಯ ಅಧ್ಯಕ್ಷೆ ವೇದಾವತಿ ಕ್ರೀಡಾಧ್ಯಕ್ಷ ದೇವಿದಾಸ್ ಕುರಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸನ್ಮಾನ: ದೈವಾರಾಧನೆಯಲ್ಲಿ ಶೀನ ಅಜಿಲ ಕಣಿಯಾರು ಮಾಡಾವು ಹಾಗೂ ಸಂಕಪ್ಪ ಕಾಂಚನ, ಯಕ್ಷಗಾನ ಕ್ಷೇತ್ರದಲ್ಲಿ ದಾಮೋದರ ಬೆಟ್ಟಂಪಾಡಿ, ಕ್ರೀಡಾಕ್ಷೇತ್ರ ರಾಘವ ನೆಹರುನಗರ ಮತ್ತು ಮದ್ಯ ಮುಕ್ತ ಜೀವನ ನಡೆಸುತ್ತಿರುವ ಚನಿಯ ನಲಿಕೆಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಅರ್ಚನಾ ಈಶ್ವರಮಂಗಲ ಹಾಗೂ ಅರ್ಪನಾ ಈಶ್ವರಮಂಗಲ ಪ್ರಾರ್ಥಿಸಿದರು. ನವೀನ್ ಕಾಂಚನ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಜಗದೀಶ್ ಸವಣೂರು ವರದಿ ವಾಚಿಸಿದರು. ಕೋಶಾಧಿಕಾರಿ ನಾರಾಯಣ ನಿಡ್ಪಳ್ಳಿ ವಂದಿಸಿ, ಮೋಹನ್ ಶರವೂರು ಕಾರ್ಯಕ್ರಮ ನಿರೂಪಿಸಿದರು.ದುಗ್ಗಪ್ಪ ಕಡ್ಯ, ಅಣ್ಣು ಪಣೆ ಮಜಲು, ದೇವಪ್ಪ, ಉಮಾವತಿ ಕಡ್ಯ, ನಾರಾಯಣ ಸಾಲ್ಯಾನ್, ಕಿಟ್ಟು ನಲಿಕೆ, ಸೇಸಮ್ಮ ಸವಣೂರು, ಚಿದಾನಂದ, ರವಿ, ಆನಂದ ಪುತ್ತೂರು ಹಾಗೂ ರಾಘವ ನಗರ ವಿವಿಧ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ತೆಲಿಕೆದ ಕಲಾ ಕುಂಜ ಶರವೂರು ಇದರ ವಿಶ್ವನಾಥ ಶರವೂರು ನಿರ್ದೇಶನದ ’ಕಟೀಲ್ದಪ್ಪೆ ಉಳ್ಳಾಲ್ದಿ’ ಎಂಬ ನೃತ್ಯ ರೂಪಕ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಸಮಾಜ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಜೆ ನಿಡ್ಪಳ್ಳಿ ವಲಯದವರಿಂದ ’ಸುದರ್ಶನ ವಿಜಯ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. g

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.