ಸಾಮೆತ್ತಡ್ಕ ಯುವಕ ಮಂಡಲ-ಸಿಝ್ಲರ್ ಸಾಫ್ಟ್ ಡ್ರಿಂಕ್ಸ್ ಆಶ್ರಯದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ‘ಸಿಝ್ಲರ್ ಟ್ರೋಫಿ’ಯ ಸಮಾರೋಪ

Puttur_Advt_NewsUnder_1
Puttur_Advt_NewsUnder_1

samethadka

ಪುತ್ತೂರು: ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್  ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ದಿ| ಸುನೀಲ್ ಮಸ್ಕರೇನಸ್ ಮತ್ತು ದಿ| ವಿಕ್ರಮ್ ಭಟ್ ಸ್ಮರಣಾರ್ಥ ಪುತ್ತೂರಿನಲ್ಲಿ  ಐಪಿಎಲ್ ಮಾದರಿಯಲ್ಲಿ ನಡೆದ ಪುತ್ತೂರು ತಾಲೂಕಿನ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ “ಸಿಝ್ಲರ್ ಟ್ರೋಫಿ”ಯ ಸಮಾರೋಪದ ಸಭಾ ಕಾರ್ಯಕ್ರಮದ ಸಮಾರಂಭ ಸಂತ ಫಿಲೋಮಿನ ಕಾಲೇಜ್ ಕ್ರೀಡಾಂಗಣದಲ್ಲಿ ಜ. ೩೧ರಂದು ರಾತ್ರಿ ನಡೆಯಿತು.

ಆಟಗಾರನಲ್ಲಿ ತಾಳ್ಮೆ, ದೂರದೃಷ್ಟಿ, ಮೂವ್‌ಮೆಂಟ್‌ನ ಅಗತ್ಯವಿದೆಸುಧಾಕರ್ ಶೆಟಿ: ಪುತ್ತೂರು ಶ್ರೀ ದೇವತಾ ಸಮಿತಿಯ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಮಾತನಾಡಿ, ಶಾಲಾದಿನಗಳಲ್ಲಿ ತಾನು ಕ್ರಿಕೆಟ್‌ನಲ್ಲಿ ನಾಯಕತ್ವ ವಹಿಸಿ ಇದೇ ಕ್ರೀಡಾಂಗಣದಲ್ಲಿ ಶತಕವನ್ನು ಬಾರಿಸಿದ್ದೆ. ಪ್ರತಿಭಾನ್ವಿತ ಆಟಗಾರನಾಗಲು ಆಟಗಾರನಲ್ಲಿ ತಾಳ್ಮೆ, ದೂರದೃಷ್ಟಿ ಮತ್ತು ಮೂವ್‌ಮೆಂಟ್‌ನ ಅಗತ್ಯವಿದೆ ಎಂದ ಅವರು ಅಂದು ಐದಾರು ಮೈದಾನದಲ್ಲಿ ನೂರು ಟೀಮ್‌ಗಳ ತಲಾ ಹತ್ತು ಓವರ್‌ನ ಕ್ರಿಕೆಟ್ ಪಂದ್ಯಾಟವನ್ನು ನಡೆಸಿದ್ದೇನೆ. ಆದರೆ ಇಂದಿನ ಟೂರ್ನಮೆಂಟ್‌ಗಳು ಬರೀ ಎರಡು ಓವರ್ ಅಥವಾ ಟಾಸ್‌ಗೆ ಸೀಮಿತವಾಗಿ ಅಂದಿನ ಕ್ರಿಕೆಟ್‌ನ ಪ್ರಾಮುಖ್ಯತೆ ಕಳೆದುಕೊಂಡಿದೆ. ಅಂಡರ್ ಆರ್ಮ್ ಕ್ರಿಕೆಟ್ ಬದಲು ಓವರ್ ಆರ್ಮ್ ಕ್ರಿಕೆಟ್ ಆಟವನ್ನು ಐಪಿಎಲ್ ಮಾದರಿಯಲ್ಲಿ ಆಯೋಜಿಸಿದ ಸಂಘಟಕರ ಶ್ರಮ ಶ್ಲಾಘನೀಯ ಎಂದ ಅವರು, ಜೀವನದಲ್ಲಿ ಉಳಿಯುವುದು ಸ್ನೇಹಾಚಾರ ಮಾತ್ರ ಎಂಬುದಕ್ಕೆ ಸುನೀಲ್ ಮಸ್ಕರೇನಸ್ ಮತ್ತು ವಿಕ್ರಂ ಭಟ್‌ರವರ ಸ್ಮರಣಾರ್ಥ ಪಂದ್ಯಾಟ ನಡೆಯುತ್ತಿರುವುದೇ ಸಾಕ್ಷಿ ಎಂದರು.

ಸಿಝ್ಲರ್ ಟ್ರೋಫಿಯು ಕೂಡ ಮೂರನೇ ಜಾತ್ರೆಯಾಗಿದೆಜಗದೀಶ್ ಶೆಟ್ಟಿ: ಜಯಕರ್ನಾಟಕ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆರವರು ಮಾತನಾಡಿ, ಪುತ್ತೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ, ಅದ್ದೂರಿಯಾಗಿ ನಡೆಯುವ ಕಂಬಳವೆಂಬ ಜಾತ್ರೆಗೆ ಇದೀಗ ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್‌ರವರು ವರ್ಷಂಪ್ರತಿ ನಡೆಸುವ ಸಿಝ್ಲರ್ ಟ್ರೋಫಿಯು ಕೂಡ ಜಾತ್ರೆಯಾಗಿ ಪರಿಣಮಿಸಿದೆ ಎಂದ ಅವರು ಯಾರಲ್ಲಿ ನನ್ನದು ಎಂಬ ಭಾವನೆ ಬಿಟ್ಟು ನಮ್ಮದು ಎಂಬ ಭಾವನೆಯೊಂದಿಗೆ ಜೀವನ ಸಾಗಿಸುತ್ತಾರೋ ಅವರು ಸಿಝ್ಲರ್‌ನ ಪ್ರಸನ್ನಕುಮಾರ್‌ರವರಂತೆ ಯಶಸ್ಸು ಸಾಧಿಸುತ್ತಾರೆ ಎಂದರು.

ಯಶಸ್ವಿ ರೀತಿಯ ಸಂಘಟನೆ  ಶ್ಲಾಘನೀಯನಡುಬೈಲು: ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲುರವರು ಮಾತನಾಡಿ, ಭಾರತ ದೇಶದಲ್ಲಿ ಕ್ರಿಕೆಟ್ ಎಂಬುದು ಹೆಮ್ಮೆಯ ಕ್ರೀಡೆಯಾಗಿದೆ. ಪ್ರಸನ್ನಕುಮಾರ್‌ರವರಲ್ಲಿ ಸಾರಥ್ಯದಲ್ಲಿ ಯುವಕರನ್ನು ಒಗ್ಗೂಡಿಸಿ ಹಗಲು-ರಾತ್ರಿಯ ಈ ಪಂದ್ಯಕೂಟವನ್ನು ಯಶಸ್ವಿ ರೀತಿಯಲ್ಲಿ ಸಂಘಟನೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದ ಅವರು ಬಡತನದಲ್ಲಿ ಬೆಳೆದು ಇಂದು ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆದು ಒಬ್ಬ ಸಾಧಕನನ್ನು ಗುರುತಿಸಿ ಸನ್ಮಾನ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.

 ಕ್ರೀಡೆಯ ಮೂಲಕ ಸಾಮರಸ್ಯದ ಬದುಕು ಎಲ್ಲರದಾಗಬೇಕುಮುಹಮ್ಮದ್ ಕುಕ್ಕುವಳ್ಳಿ: ಕುಕ್ಕುವಳ್ಳಿ ಇಂಟರ್‌ನ್ಯಾಷನಲ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಮುಹಮ್ಮದ್ ಕುಕ್ಕುವಳ್ಳಿರವರು ಮಾತನಾಡಿ, ಪ್ರತಿಯೊಬ್ಬರಲ್ಲೂ ಸಾಧಿಸುವ ಛಲ ಮತ್ತು ವಿಚಾರ ಹಾಗೂ ಸತತ ಪ್ರಯತ್ನ, ಧೃಢವಾದ ನಂಬಿಕೆ, ಅಚಲ ನಿರ್ಧಾರ, ಧೃಢವಾದ ಫಲದೊಂದಿಗೆ ಮುಂದೆ ಸಾಗಬೇಕು ಎಂದ ಅವರು ಕ್ರೀಡೆಯ ಮೂಲಕ ಸಾಮರಸ್ಯದ ಬದುಕು ಎಲ್ಲರದಾಗಬೇಕು ಎಂದರಲ್ಲದೆ ತನ್ನನ್ನು ಗುರುತಿಸಿ ಸನ್ಮಾನಿಸಿದ  ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್‌ನ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಪುತ್ತೂರು ಹೊಸ ಪ್ರಯೋಗಗಳಿಗೆ ಹೆಸರುವಾಸಿಯಾದ ಊರಾಗಿದೆಮಹೇಶ್ ಪ್ರಸಾದ್: ಪುತ್ತೂರು ನಗರ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್‌ರವರ ಮಾತನಾಡಿ, ಪುತ್ತೂರು ಎಂಬುದು ಹೊಸ, ಹೊಸ ಪ್ರಯೋಗಗಳಿಗೆ ಹೆಸರುವಾಸಿಯಾದ ಊರಾಗಿದೆ. ಯಾವುದೇ ಕಾರ್ಯಕ್ರಮಗಳು ಆಯೋಜಿಸುವಾಗ ಅದು ಸಮಾಜಕ್ಕೆ ಅಡ್ಡಿ ಬರದಂತೆ ಸಂಘಟಿಸುವುದು ಮತ್ತು ಪ್ರತಿಯೊಬ್ಬರ ಮನಸ್ಸಿನಲ್ಲಿ ನೆನಪಿನಲ್ಲಿ ಉಳಿಯುವಂತಹ ಕಾರ್ಯಕ್ರಮ ಮಾಡಿದಾಗ ಯಶಸ್ವಿ ಕಾರ್ಯಕ್ರಮವೆನಿಸುತ್ತದೆ ಎಂದರು.

ಅಧ್ಯಕ್ಷತೆಯನ್ನು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿರವರು ವಹಿಸಿದ್ದರು. ಪಂಜ ವಲಯ ಅರಣ್ಯಾಧಿಕಾರಿ ಪ್ರವೀಣ್ ಶೆಟ್ಟಿ, ಉದ್ಯಮಿ ವೇಣುಗೋಪಾಲ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಉದ್ಯಮಿಗಳಾದ ಶಿವರಾಮ್ ಆಳ್ವ, ಮೋಹನ್ ರೈ ಸೂತ್ರಬೆಟ್ಟು, ಶಮ್ಮೂನ್ ಪರ್ಲಡ್ಕ, ಗಂಗಾಧರ ಶೆಟ್ಟಿ ಕೈಕಾರ, ಸೋಜಾ ಮೆಟಲ್ಸ್‌ನ ಜೋಯೆಲ್ ಕುಟಿನ್ಹಾ, ಕೂರ್ನಡ್ಕ ಡ್ರೀಮ್ಸ್‌ನ ಯೂಸುಫ್, ರತನ್ ನಾಕ್ ಕರ್ನೂರ್‌ಗುತ್ತು,  ಅಮೆಚೂರ್  ಕಬಡ್ಡಿ ಅಸೋಸಿಯೇಶನ್‌ನ ಅಧ್ಯಕ್ಷ ಸುರೇಂದ್ರ ರೈ, ವಕೀಲರ ಸಂಘದ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ಪದ್ಮಶ್ರೀ ಗ್ರೂಫ್ ತಿಂಗಳಾಡಿಯ ಸೀತಾರಾಮ ರೈ, ದಿ ಪುತ್ತೂರು ಕ್ಲಬ್‌ನ ಅಧ್ಯಕ್ಷ ಡಾ| ದೀಪಕ್ ರೈ, ಮಗ್ರೋಡಿ ಕನ್‌ಸ್ಟ್ರಕ್ಷನ್‌ನ ಸನ್ಮತ್ ಮೇಲಾಂಟ, ಇಂಟಕ್ ಅಧ್ಯಕ್ಷ ಲಕ್ಷ್ಮಣ್ ಸಂಪ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಮೊದೀನ್ ಆರ್ಷದ್, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿನೋದ್ ಶೆಟ್ಟಿ ಅರಿಯಡ್ಕ, ಯುವ ಬಂಟರ ಸಂಘದ ಅಧ್ಯಕ್ಷ ರೋಶನ್ ರೈ ಬನ್ನೂರು,  ಹೊಟೇಲ್ ಅಶ್ವಿನಿಯ ಅಶ್ವಿನ್ ರೈ, ಪಡ್ಯೊಟ್ಟು ವಿಶ್ವನಾಥ ಶೆಟ್ಟಿ ಮೂಡಬಿದ್ರೆ, ನಿರಂಜನ್ ರೈ ನೂಜಿ, ನಗರಸಭಾ ಸದಸ್ಯ ನವೀನ್‌ಚಂದ್ರ ನಾಕ್, ದರ್ಬೆ ಮೊಹಮ್ಮದ್ ಸೈಫ್, ಪ್ರಶಾಂತ್ ಎಂಟರ್‌ಪ್ರೈಸಸ್‌ನ ಪ್ರಶಾಂತ್ ಶೆಣೈ, ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಪುತ್ತೂರು ಪ್ರಾಪರ್ಟಿಸ್‌ನ ನಿತಿನ್ ಪಕ್ಕಳ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಸಕಿ ಶುಭಹಾರೈಕೆ:  ಶಾಸಕಿ ಶಕುಂತಲಾ ಟಿ. ಶೆಟ್ಟಿಯವರು ಸಮಾರೋಪ ಸಮಾರಂಭದ ಮುಂಚಿತವಾಗಿ ಆಗಮಿಸಿ ಶುಭ ಹಾರೈಸಿ ತೆರಳಿದ್ದಾರೆ.

ಚಲನಚಿತ್ರ ನಟರ ಆಕರ್ಷಣೆ: ಇತ್ತೀಚೆಗೆ ಬಿಡುಗಡೆಯಾದ ಲಾಸ್ಟ್ ಬಸ್ ಚಿತ್ರದ ನಾಯಕ ನಟ ಅವಿನಾಶ್ ನರಸಿಂಹರಾಜು ಮತ್ತು ನಟ ಸುರೇಶ್ ರೈ ಹಾಗೂ ಅವರ ಪತ್ನಿ ನಟಿ ಭವ್ಯಶ್ರೀ ರೈರವರು ಅತಿಥಿಗಳಾಗಿ ಆಗಮಿಸಿ ಪಂದ್ಯಾಟಕ್ಕೆ ವಿಶೇಷ ಮೆರುಗು ನೀಡಿತ್ತು.

ಸನ್ಮಾನ: ಕುಕ್ಕುವಳ್ಳಿ ಇಂಟರ್‌ನ್ಯಾಷನಲ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಸೌದಿ ಅರೇಬಿಯಾ ಇದರ ವತಿಯಿಂದ ಗ್ರಾಮೀಣ ಮಟ್ಟದ ಹಿಂದುಳಿದ ಮತ್ತು ಸಾಧನೆಗೈದವರನ್ನು ಗುರುತಿಸಿ ಅವರಿಗೆ ಸಹಾಯಧನ ನೀಡುವ ಯೋಜನೆ ಪ್ರಚಾರ ರಹಿತವಾಗಿ ನಡೆಯುತ್ತಿದ್ದು, ಈ ವರ್ಷ ಸಾಮೆತ್ತಡ್ಕ ಯುವಕ ಮಂಡಲ ಹಮ್ಮಿಕೊಂಡ ಕ್ರಿಕೆಟ್ ಪಂದ್ಯಾಟವನ್ನು ಗಮನಿಸಿ ಆ ಮೂಲಕ ಸಾಧನೆಗೈದವರನ್ನು ಸನ್ಮಾನಿಸುವ ಕಾರ‍್ಯಕ್ರಮ ಹಮ್ಮಿಕೊಂಡು ಇಂಟರ್‌ನ್ಯಾಷನಲ್ ಪ್ರಶಸ್ತಿ ಪುರಸ್ಕೃತ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡರವರಿಗೆ ಪೇಟ ತೊಡಿಸಿ, ಸನ್ಮಾನಿಸಿ, ರೂ.೫೦ ಸಾವಿರ ನಗದನ್ನು ನೀಡಿ ಪ್ರೋತ್ಸಾಹಿಸಿದೆ ಮತ್ತು ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್‌ನ ವತಿಯಿಂದ ಕುಕ್ಕುವಳ್ಳಿ ಇಂಟರ್‌ನ್ಯಾಷನಲ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಮುಹಮ್ಮದ್ ಕುಕ್ಕುವಳ್ಳಿರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶಾಲು ಹೊದಿಸಿ ಅಭಿನಂದನೆ: ಸಾಮೆತ್ತಡ್ಕ ಯುವಕ ಮಂಡಲದ ಗೌರವಾಧ್ಯಕ್ಷ ಹಾಗೂ ಸಿಝ್ಲರ್ ಸಾಫ್ಟ್ ಡ್ರಿಂಕ್ಸ್‌ನ ಮಾಲಕ ಪ್ರಸನ್ನಕುಮಾರ್ ಶೆಟ್ಟಿ, ಅಧ್ಯಕ್ಷ ಇಂದೀವರ್ ಭಟ್‌ರವರು ಅತಿಥಿಗಳಿಗೆ ಹೂ ನೀಡಿ, ಶಾಲು ಹೊದಿಸಿ ಸ್ವಾಗತಿಸಿ, ಅಭಿನಂದಿಸಿದರು.

ನ್ಯಾಯವಾದಿ ಕವನ್ ನಾಕ್ ಸ್ವಾಗತಿಸಿ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟುರವರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.